ಸಹ್ಯಾದ್ರಿ ತೀರ ಪ್ರದೇಶದಲ್ಲಿ ಮಳೆ :
ಲಿಂಗಸುಗೂರು : ಕಳೆದ ಎರಡ್ಮೂರು ದಿನಗಳಿಂದ (Krishna river) ಕೃಷ್ಣಾ ನದಿಯಲ್ಲಿ ತಗ್ಗಿದ್ದ ನೀರಿನ ಮಟ್ಟ ಇಂದು ಮತ್ತೆ ಮಹಾರಾಷ್ಟçದ ಸಹ್ಯಾದ್ರಿ ತೀರ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದರಿಂದ ತಾಲೂಕಿನ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ತಾಲೂಕಿನ ನದಿತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಶುರುವಾಗುತ್ತದೆ.
ಮಳೆಗಾಲದಲ್ಲಿ (Krishna river) ಕೃಷ್ಣಾ ಮತ್ತು ಉಪನದಿಗಳು ಉಕ್ಕೇರಿ ಜನಜೀವನ ಅಸ್ತವ್ಯಸ್ತಗೊಳ್ಳುವುದು ಪ್ರತಿವರ್ಷವೂ ನಡದೇ ಇದೆ. ನೀರಿನ ಮಟ್ಟ ಹೆಚ್ಚಾದಂತೆ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತದೆ. ಮಹಾರಾಷ್ಟ ಸೇರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಬಸವಸಾಗರ ಜಲಾಶಯದ 25 ಗೇಟ್‌ಗಳ ಮುಖಾಂತರ 1 ಲಕ್ಷದ 10 ಸಾವಿರ ಕ್ಯೂಸೆಕ್ ನೀರು ಕೃಷ್ಣಾನದಿಗೆ ಹರಿಸಲಾಗುತ್ತಿದೆ.
ಜಲಾಶಯದಿಂದ ಕೃಷ್ಣಾ ನದಿಗೆ (Krishna river) ನೀರಿನ ಪ್ರವಾಹ ಹರಿದು ಬರುತ್ತಿದ್ದರಿಂದ ತಾಲೂಕಿನ ಕರಕಲದೊಡ್ಡಿ, ಹೊಂಕಮ್ಮದೊಡ್ಡಿ, ಮ್ಯಾದರದೊಡ್ಡಿಗಳು ನಡುಗಡ್ಡೆಗಳಾಗಿ ಹಾಗೂ ಯಳಗುಂದಿ, ಹಂಚಿನಾಳ, ಯರಗೋಡಿ, ಕಡದರಗಡ್ಡಿ ಗ್ರಾಮಗಳಿಗೆ ಪಾಲಿಗೆ ಆತಂಕ. ಇದು ಇವತ್ತಿನ ಕಥೆಯಲ್ಲ, ಇದು ಪ್ರತಿ ವರ್ಷ ಮಳೆಗಾಲ ಹಾಗೂ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟಾಗ ಕಾಡುತ್ತಿರುವ ಸಮಸ್ಯೆ, ಈ ವರ್ಷ ಮತ್ತೆ ಹೆಚ್ಚಾಗಿದೆ.
ಜೀವ ಕೈಯಲ್ಲಿಟ್ಟುಕೊಂಡೇ ಜೀವನ :
ತಾಲೂಕಿನ (Krishna river)ಕೃಷ್ಣಾ ನದಿ ತೀರದಲ್ಲಿ ತಮ್ಮ ಪೂರ್ವಿಕರ ಕಾಲದಿಂದಲೂ ಜೀವನ ಸಾಗಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಕರಕಲದೊಡ್ಡಿ, ಹೊಂಕಮ್ಮದೊಡ್ಡಿ, ಮ್ಯಾದರದೊಡ್ಡಿಗಳು ನಡುಗಡ್ಡೆಗಳಾಗಿವೆ. ಮೂರು ನಡುಗಡ್ಡೆಯಲ್ಲಿ ೨೦ ಕುಟಂಬಗಳು ಒಟ್ಟು ೭೦ಕ್ಕೂ ಅಧಿಕ ಎಕರೆ ಕೃಷಿ ಭೂಮಿಯನ್ನೇ ನೆಚ್ಚಿಕೊಂಡಿದ್ದಾರೆ. ಇವರಿಗೆ ಮಹಾರಾಷ್ಟçದಲ್ಲಿ ಮಳೆಯಾಗುತ್ತಿದೆ ಎಂದು ಕೇಳಿದರೆ ಇವರಿಗೆ ಎಲ್ಲಿಲ್ಲದ ಸಂಕಟ. ಮಹಾರಾಷ್ಟçದಲ್ಲಿ ಮಳೆಯಾದರೆ ಕೃಷ್ಣಾನದಿಗೆ ನೀರಿನ ಮಟ್ಟ ಹೆಚ್ಚಾದಂತೆ ಬಸವಸಾಗರ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿ ಬೀಡಲಾಗುತ್ತದೆ. ಇದರಿಂದ ಈ ದೊಡ್ಡಿಗಳಿಗೆ ಪ್ರವಾಹದ ಆತಂಕ ಕಾಡುತ್ತಲೇ ಇರುತ್ತದೆ. ಹೀಗಾಗಿ ಪ್ರತಿ ಕ್ಷಣವೂ ಇಲ್ಲಿನ ಜನತೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕಬೇಕಾಗಿದೆ.
ಹಗ್ಗ-ಜಗ್ಗಾಟ :
ಕೃಷ್ಣಾ ತೀರದಲ್ಲಿ ಪ್ರವಾಹ ಬಂದರೆ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ತಟ್ಟನೆ ನೆನೆಪಿಗೆ ಬರುವುದು ಈ ಮೂರು ನಡುಗಡ್ಡೆಗಳು. ಅಲ್ಲಿ ವಾಸಿಸುವ ಕುಟಂಬಗಳು ನಮಗೆ ಭೂಮಿ ಹಾಗೂ ಶಾಶ್ವತ ಪರಿಹಾರ ಒದಗಿಸಿದರೆ ಮಾತ್ರ ನಡುಗಡ್ಡೆ ಬಿಟ್ಟು ಆಡಳಿತ ಸೂಚಿಸಿದ ಕಡೆಗಳಲ್ಲಿ ಬಂದು ವಾಸ ಮಾಡುವುದಾಗಿ ಹೇಳುತ್ತಿವೆ ಆದರೆ ತಾಲೂಕು ಆಡಳಿತ ನಡುಗಡ್ಡೆಯ ೧೨ ಕುಟಂಬಗಳಿಗೆ ಯಳಗುಂದಿ ಬಳಿ ನಿವೇಶನ ಒದಗಿಸಿದೆ ಅದು ಕೂಡಾ ಅಲ್ಲಿಯ ಸ್ಥಳೀಯರೊಬ್ಬರು ನ್ಯಾಯಲಯದಲ್ಲಿ ಧಾವೆ ಹೂಡಿದ್ದಾರೆ. ಇನ್ನೂ ಭೂಮಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಡುವೆ ಪ್ರವಾಹ ಇಳಿಮುಖವಾಗುವವರಿಗೂ ನಡುಗಡ್ಡೆ ಜನರನ್ನು ಯರಗೋಡಿ ಸರ್ಕಾರಿ ಶಾಲೆಗೆ ಕರೆತಂದು ಅಲ್ಲಿ ಉಳಿಯಲು ವ್ಯವಸ್ಥೆ ಮಾಡುವುದು ನಂತರ ಮರೆಯವುದು ಅಧಿಕಾರಿಗಳು ನಡೆಸಿಕೊಂಡು ಬಂದ ಪದ್ಧತಿಯಾಗಿದೆ.
ಯಳಗುಂದಿ,ಯರಗೋಡಿ, ಕಡದರಗಡ್ಡಿ ಸೇರಿ ಮೂರು ನಡುಗಡ್ಡೆಗಳ ಜನರಿಗೆ ಅನುಕೂಲವಾಗಬಹುದಾದ ಕಡದರಗಡ್ಡಿ-ಗೋನವಾಟ್ಲ್ ನಡುವೆ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಆದರೆ ಕಾಮಗಾರಿ ಆರಂಭವಾಗಿಲ್ಲ ಎಂಬುದು ಇಲ್ಲಿನ ಜನರ ಕೊರಾಗಿದೆ.
ಮತ್ತೆ ಮುಳುಗಡೆ ಬೀತಿಯಲ್ಲಿ ಶೀಲಹಳ್ಳಿ ಸೇತುವೆ :
ಬಸವಸಾಗರ ಜಲಾಶಯದಿಂದ ಶನಿವಾರ 1,10 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದರಿಂದ ಶೀಲಹಳ್ಳಿ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ಮೂರನೇ ಭಾರಿಗೆ ಶೀಲಹಳ್ಳಿ ಸೇತುವೆ ಮುಳಗಡೆಯಾಗಲಿದೆ. ಕೃಷ್ಣಾನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನದಿತೀರದ ಗ್ರಾಮಗಳಲ್ಲಿನ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಜಲಾಶಯದಿಂದ 1,50 ಲಕ್ಷ ಕ್ಯೂಸೆಕ್ ನೀರು ಹರಿಸಿದರೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಲಿದೆ. ಯರಗೋಡಿ, ಯಳಗುಂದಿ, ಹಂಚಿನಾಳ, ಕಡದರಗಡ್ಡಿ ಸೇರಿ ಮೂರು ನಡುಗಡ್ಡೆಗಳಾದ ಕರಕಲಗಡ್ಡಿ, ಮಾದರಗಡ್ಡಿ, ಹೊಂಕಮ್ಮನಗಡ್ಡಿಗಳು ರಸ್ತೆ ಸಂಪರ್ಕ ಕಡಿದುಕೊಳ್ಳುಲಿವೆ. ಈ ಗ್ರಾಮಗಳಿಗೆ ತೆರಳಬೇಕಾದರೆ ಜಲದುರ್ಗ ಮಾರ್ಗವಾಗಿ ತೆರಳಬೇಕಾಗುತ್ತಿದೆ. ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ತಾಲೂಕಿನ ಗದ್ದಗಿ, ಗೋನವಾಟ್ಲ್, ಗುಂತಗೋಳ, ಹಂಚಿನಾಳ, ಜಲದುರ್ಗ, ಕಡದರಗಡ್ಡಿ, ಯರಗೋಡಿ, ಯಳಗುಂದಿ, ಶೀಲಹಳ್ಳಿ, ಟಣಮಣಕಲ್ ಒಟ್ಟು ಹತ್ತು ಗ್ರಾಮಗಳು ಹಾಗೂ ಮೂರು ನಡುಗಡ್ಡೆಗಳು ಕೃಷ್ಣಾ ನದಿ ತೀರದಲ್ಲಿವೆ. ಪ್ರವಾಹದ ಆತಂಕ ಸೃಷ್ಠಿಯಾಗಿದೆ.