ರಾಷ್ಟ್ರೀಯ ಲೋಕ ಅದಾಲತ್ :
ಲಿಂಗಸುಗೂರು : ಸ್ಥಳೀಯ ಜೆಎಂಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ (Rashtriya Lok Adalat )1982 ಬಾಕಿ ಪ್ರಕರಣಗಳು ಹಾಗೂ 10101 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 12083 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯಾವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ (Rashtriya Lok Adalat) ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬ್ಯಾಂಕ್ ಪ್ರಕರಣಗಳು 14ರಲ್ಲಿ 11 ಪ್ರಕರಣಗಳು ರಾಜಿಯಾಗಿರುತ್ತವೆ ಇದರ ಒಟ್ಟು ಮೊತ್ತ ರೂ. 1,15,21,122 ಆಗಿದೆ. ಪಾಲು ವಿಭಾಗ 20 ಪ್ರಕರಣಗಳಲ್ಲಿ 16 ಪ್ರಕರಣಗಳು ರಾಜಿಯಾಗಿವೆ. ಇತರೆ 1974ಬಾಕಿ ಪ್ರಕರಣಗಳಲ್ಲಿ 1955ಪ್ರಕರಣಗಳು ರಾಜಿಯಾಗಿವೆ ಒಟ್ಟಾರೆಯಾಗಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2008 ಪ್ರಕರಣಗಳಲ್ಲಿ 1982 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಳಿಸಲಾಗಿದೆ.
ಪ್ರಕರಣಗಳು ಇತ್ಯರ್ಥ :
ಒಟ್ಟು ಮೊತ್ತ 3,01,57,252 ರೂ ಆಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳು ಒಟ್ಟು 10571 ಪ್ರಕರಣಗಳಲ್ಲಿ 10101 ಪ್ರಕರಣಗಳು ರಾಜಿಯಾಗಿರುತ್ತವೆ. ಇದರ ಒಟ್ಟು ಮೊತ್ತ ರೂ.2,69,84,208 ಆಗಿದೆ.
ಈ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ, ಕಕ್ಷಿದಾರರು ಹಾಗೂ ಕಕ್ಷಿದಾರ ಪರ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂಧಿಗಳು ಹಾಜರಿದ್ದರು.