ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ
ಲಿಂಗಸುಗೂರು : ಬೆಳೆದ ಬೆಳೆಯನ್ನು(Crop damage ) ಹಾನಿ ಮಾಡಿ ಒಕ್ಕಲೆಬ್ಬಿಸಿದ ಅರಣ್ಯಾಧಿಕಾರಿಗಳ (Forest Officers) ವಿರುದ್ಧ ರೈತ ಸಂಘ ಹಾಗೂ ಹಸಿರು ಸೇನೆ ನೇತ್ರತ್ವದಲ್ಲಿ ರೈತರು ರೈತರ ಆಕ್ರೋಶ ವ್ಯಕ್ತಪಡಿಸಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿಯಲ್ಲಿ ತಾಲೂಕಿನ ಅಮರೇಶ್ವರ ಕ್ರಾಸ್ನಿಂದ ದೇವರಭೂಪುರ ಗ್ರಾಮದ ರೈತರ ಜಮೀನುವರಿಗೆ ಎತ್ತುಗಳು, ಟ್ಯಾಕ್ಟರ್ಗಳ ಪಾದಯಾತ್ರೆ ನಡೆಸಿದರು.
ತಾಲೂಕಿನ ದೇವರಭೂಪುರ ಗ್ರಾಮದ ಸುತ್ತಮುತ್ತ ಸುಮಾರು 25 ರೈತರ ಜಮೀನನಲ್ಲಿ ಬೆಳೆಯಲಾಗಿದ್ದ ಪಪ್ಪಾಯಿ, ದಾಳಿಂಬೆ ಸೇರಿ ಇತರೆ (Crop damage )ಬೆಳೆಗಳನ್ನು ಅರಣ್ಯಾಧಿಕಾರಿಗಳು ನಾಶ ಮಾಡಿ ಜಮೀನು ತುಂಬೆಲ್ಲಾ ಸಸಿ ನೆಡಲು ಗುಂಡಿಗಳನ್ನು ತೋಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದರು.Crop damage ಇದರ ವಿರುದ್ಧ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ತಾಲೂಕಿನ ಚಾಮರಾಜನಗರ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಅಮರೇಶ್ವರ ಕ್ರಾಸ್ನಲ್ಲಿ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಮುಖಂಡರು, ಸುಪ್ರೀಂ ಕೋರ್ಟ್ ಮತ್ತು ರ್ಕಾರ ಆದೇಶ, ಸುತ್ತೋಲೆಗಳನ್ನು ಉಲ್ಲಂಘಿಸಿ ರಾಜಕೀಯ ಪ್ರೇರಿತ ಒತ್ತುವರಿ ತೆರವಿಗೆ ದುಂಡಾವರ್ತನೆ ನಡೆಸಿರುವುದನ್ನು ಖಂಡಿಸಿದರು. ದೌರ್ಜನ್ಯ ನಡೆಸಿದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ರೈತರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಹಾಕಿದರು.
ಮಾತಿನ ಜಟಾಪಟಿ :
ಒಂದು ಗಂಟೆಕಾಲ ನಡೆದ ಪ್ರತಿಭಟನೆ ನಂತರ ತೆರವುಗೊಳಿಸಿದ ಭೂಮಿಯಲ್ಲಿ ಉಳುಮೆ ಮಾಡುತ್ತೇವೆ ಎಂದು ಎತ್ತು, ಟ್ರ್ಯಾಕ್ಟರ್, ಜೆಸಿಬಿ ಸೇರಿದಂತೆ ಮಡಿಕೆ, ಕುಂಟೆ ಸಮೇತ ನಾಲ್ಕು ಕಿಲೊ ಮೀಟರ್ ಪಾದಯಾತ್ರೆ ಮೂಲಕ ತೆರಳಿ ನೂರಾರು ರೈತರು ಉಳಿಮ ಮಾಡಿದರು. ಉಳಿಮಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ಗಾವಲು ಹಾಕಲಾಗಿತ್ತು. ದೌರ್ಜನ್ಯ ತೆರವುಗೊಳಿಸಿದ್ದ ಜಮೀನದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ರೈತರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಜಟಾಪಟಿಗಳು ನಡೆಯುತ್ತಲೆ ಬಂದವು. ನೂರಾರು ರೈತರ ಜಯಕಾರ, ಎತ್ತುಗಳ ಓಡಾಟ, ಟ್ರ್ಯಾಕ್ಟರ್, ಫೋಕ್ಲೈನ್ ತಡೆಯಲಾಗದೇ ಮೌನವಾಗಿದ್ದು ರೈತರ ಶಕ್ತಿಗೆ ಸಾಕ್ಷಿಯಾಗಿತ್ತು. ಇನ್ನೊಂದಡೆ ರೈತ ಮುಖಂಡರು, ಅಧಿಕಾರಿಗಳು ಸೌಹರ್ದಯುತ ಮಾತುಕತೆ ಸಮಸ್ಯೆಗೆ ಮುಂದಾಗಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದರು.
ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ರೈತರು :
ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಮತ್ತು ಗೋವಿಂದರಾಜು ಅವರ ಜೊತೆ ಕೋಡಿಹಳ್ಳಿ ಚಂದ್ರಶೇಖರ್ ಚರ್ಚಿಸಿ, ಮೂರು ಎಕರೆ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬುದು ಸರ್ಕಾರದ ಆದೇಶವಿದೆ ಆದರೆ ಈ ಆದೇಶ ನಿಮಗೆ ಅನ್ವಯವಾಗುವದಿಲ್ವೇ..?ನೀವು ನಾಶ ಮಾಡಿದ ರೈತರ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಲು ನಿಮ್ಮ ಬಳಿ ದಾಖಲೆಗಳು ಇದ್ದರೆ ಕೊಡಿ, ಅದು ಬಿಟ್ಟು ಏಕಾಏಕಿಯಾಗಿ ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿಗಳ ( Crop damage )ಬೆಳೆ ಹಾನಿ ಮಾಡಿದೀರಿ ನಿಮಗೆ ಮನುಷ್ಯತ್ವ ಇಲ್ವಾ, Crop damage ನೀವು ಹಾಳು ಬೆಳೆ ನಷ್ಟ ಪರಿಹಾರ ನೀಡಬೇಕು. ರೈತರ ಕಷ್ಟ ಅರ್ಥ ಆಗೋಲ್ವಾ ರೈತರ ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಸರ್ವೆ ನಡೆಸಿ :
ಕಂದಾಯ, ಅರಣ್ಯ ಇಲಾಖೆ ರೈತರ ಸಮ್ಮುಖ ಜಂಟಿ ಸರ್ವೆ ನಡೆಸಬೇಕು, ರೈತರು ಪರಿಸರ ವಿರೋಧಿಗಳಲ್ಲ ರೈತರು ಕೂಡ ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು. ಅಧಿಕಾರಿಗಳು ಕೂಡ ಬಡ ರೈತರ ಮೇಲೆ ದೌರ್ಜನ್ಯ ನಡೆಸಬಾರದೆಂದು ಹೇಳಿದರು.
ಗುಂಡಿ ಮುಚ್ಚಿದ ರೈತರು :
ಆಗ ಅರಣ್ಯಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ತಮ್ಮಗಳ ಜತೆ ತಂದಿದ್ದ ಎತ್ತುಗಳು ಹಾಗೂ ಟ್ರಾಕ್ಟರ್ ಗಳಿಂದ ಅರಣ್ಯ ಇಲಾಖೆ ಅಗೆದ ಗುಂಡಿಗಳನ್ನು ಮುಚ್ಚಲು ರೈತ ಸಮೂಹ ಮುಂದಾಯಿತು. ಆಗ ಅಲ್ಲಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡಿ ಮುಚ್ಚುವುದನ್ನು ತಡೆಯಲು ಮುಂದಾದರು.
ಅಸಹಾಯಕರಾದ ಅಧಿಕಾರಿಗಳು :
ನೂರಾರು ಸಂಖ್ಯೆಯ ರೈತರು ಅಧಿಕಾರಿಗಳ ಮಾತಿಗೆ ಕಿವಿಗೊಡದೇ ಅರಣ್ಯ ಅಧಿಕಾರಿಗಳು ಅಗೆದಿದ್ದ ಗುಂಡಿಗಳನ್ನು ಅರಣ್ಯ ಅಧಿಕಾರಿಗಳ ಎದುರಲ್ಲೇ ಮುಚ್ಚಿ ಸಮತಟ್ಟು ಮಾಡಿದರು. ಇವೆಲ್ಲವೂ ಕಣ್ಣೆದರೇ ನಡೆದರೂ ಅಸಹಾಯಕರಾಗಿ ಕೈಚೆಲ್ಲಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದೆ ತೆರಳಿದರು.
ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ದೇವದರ್ಗ, ಮಾನ್ವಿ, ಸಿರವಾರ, ಮಸ್ಕಿ, ಲಿಂಗಸುಗೂರು ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿಷ್ಠಿತರು ನೂರಾರು ಎಕರೆ ಜಮೀನದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರೆಸಾರ್ಟ, ತೋಟ, ಕಂಕರ್ ಮಷಿನ್ ಸೇರಿದಂತೆ ಬೃಹತ್ ಕೈಗಾರಿಕೆ ಹಾಕಿಕೊಂಡಿದ್ದಾರೆ. ನಾವು ಪ್ರತಿಷ್ಠಿತರ ಪಟ್ಟಿ ನೀಡುತ್ತೇವೆ. ಅಂತಹ ಒತ್ತುವರಿ ತೆರವುಗೊಳಿಸಿ ನಮ್ಮಲ್ಲಿಗೆ ದಾಖಲೆ ಸಮೇತ ಬನ್ನಿ ನಾವು ಬಿಟ್ಟುಕೊಡುತ್ತೇವೆ ಎಂದು ಸಾಮೂಹಿಕವಾಗಿ ಸವಾಲು ಹಾಕಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಹನುಮಂತಪ್ಪ ಕಾಕರಗಲ್ಲ ಮಾತನಾಡಿ, ಅರಣ್ಯಾಧಿಕಾರಿಗಳು ರೈತರು ಒತ್ತುವರಿ ಮಾಡಿದ್ದರು ಕೂಡ ನಾಡಿಗೆ ಅನ್ನ ನೀಡುತ್ತಾರೆ. ನಾಲ್ಕಾರು ಎಕರೆಗಳಿಂದ ಶ್ರೀಮಂತರಾಗಲು ಸಾಧ್ಯವಿಲ್ಲ. ಬನ್ನಿ ಜಿಲ್ಲೆಯಲ್ಲಿ ಶಾಸಕರು, ಸಂಸದರು, ಪ್ರತಿಷ್ಠಿತರು ನೂರಾರು ಎಕರೆ ಒತ್ತುವರಿ ಮಾಡಿಕೊಂಡು ಲೂಟ ನಡೆಸಿದ್ದಾರೆ. ಮೊದಲು ಅವರನ್ನು ತೆರವುಗೊಳಿಸಿ’ ಎಂದು ಸವಾಲು ಹಾಕಿದರು.
ಸಿಪಿಐ ಪುಂಡಲೀಕ ಪಟಾತ್ತಾರ, ವಲಯ ಅರಣ್ಯಾಧಿಕಾರಿಗಳಾ ವಿದ್ಯಾಶ್ರೀ, ರಾಜೇಶ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಸ್ವಾಮಿ, ಗೌರವಾಧ್ಯಕ್ಷ ಭೈರೇಗೌಡ, ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಪ್ರಸಾದರಡ್ಡಿ, ಕಾನೂನು ಸಲಹೆಗಾರ ಕುಪಣ್ಣ ಮಾಣಿಕ್ ವಕೀಲ, ದಸಂಸ ಮುಖಂಡರಾದ ಹನುಮಂತಪ್ಪ ಕಾಕರಗಲ್, ಶಿವಪ್ಪ ಪಲಕನಮರಡಿ, ಮಹಾದೇವಪ ಪರಂಪುರ, ಮೌನೇಶ ಗೋಸೆ, ಭಾಷಾಸಾಬ, ಮಹಾಂತೇಶ, ಲಾಲಸಾಬ, ಮೊಹಮ್ಮದಸಾಬ, ಮಹಾದೇವಿ ಗೋನಾಳಮಠ, ಗುರುಬಾಯಿ ಹಿರೇಮಠ ಸೇರಿ ಇತರರಿದ್ದರು.