suddiduniya.com

Girl Child Circle: ಬೀದರನಲ್ಲೊಂದು ವಿಶಿಷ್ಟ ಸರ್ಕಲ್‍..ಏನು.. ನಿಮಗೆ ಗೊತ್ತಾ..?

Girl Child Circle

ಸುದ್ದಿ ದುನಿಯಾ ವಿಶೇಷ ಲಿಂಗಸುಗೂರು : ಕರ್ನಾಟಕದ ಗಡಿ ಜಿಲ್ಲೆಯಾಗಿರುವ ಬೀದರ್ ನಗರದಲ್ಲೊಂದು ರಾಜ್ಯಕ್ಕೆ ಪ್ರಥಮ ಹಾಗೂ ವಿಶೇಷ ಸರ್ಕಲ್ ನಿರ್ಮಾಣ ಮಾಡಲಾಗಿದೆ. ಯಾವ ಸರ್ಕಲ್, ಅದರ ವಿಶೇಷತೆ ಏನು..?

Girl Child Circle

ಹೆಣ್ಣು ಬ್ರೂಣ ಹತ್ಯೆ ತಡೆಗೆ ಕಾಯ್ದೆ ಕಾನೂನುಗಳು ಕಠಿಣವಾಗಿದ್ದರೂ ಸಹ ರಾಜ್ಯದ ಮೈಸೂರು,ಮಂಡ್ಯ,ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕಂಡು ಬಂದಿವೆ. ಇಂತಹ ಪ್ರಕರಣಗಳ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗಡಿ ಜಿಲ್ಲೆ ಬೀದರನಲ್ಲಿ ವಿಶೇಷ ಸರ್ಕಲ್‍ ಮಾಡಲಾಗಿದೆ.

Girl Child Circle :ರಾಜ್ಯ ಹಾಗೂ ದೇಶದಲ್ಲಿ ಮಹಾಪುರುಷರ ಹಾಗೂ ಅಪ್ರತಿಮ ಸಾಧಕರ ಮೂರ್ತಿ ಪ್ರತಿಷ್ಠಾಪಿಸಿ ಸರ್ಕಲ್‍  ನಿರ್ಮಿಸಿದ್ದು ಕಂಡಿದ್ದೇವೆ ಆದರೆ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಬೀದರ ನಗರಸಭೆ ಶರಣ ಉದ್ಯಾನವನ ಸಮೀಪ ಸಬ್ಬಲ್‍ ಬರೀದ್‍ ಶಾಹಿ ಮಾರ್ಗದಲ್ಲಿ ಹೆಣ್ಣು ಮಗು ಸರ್ಕಲ್‍ ನಿರ್ಮಿಸಿದೆ.

Girl Child Circle
ಹೆಣ್ಣು ಮಗು ಸರ್ಕಲ್

2018ರಲ್ಲಿ ಬೀದರ್ ಜಿಲ್ಲಾಧಿಕಾರಿಯಾಗಿದ್ದ ಎಚ್‌.ಆರ್‌.ಮಹಾದೇವ ಹೆಣ್ಣು ಮಗು ವೃತ್ತ (Girl Child Circle) ನಿರ್ಮಿಸಲು ತೀರ್ಮಾನಿಸಿ ನಗರಸಭೆ ಮೂಲಕ ವೃತ್ತ ನಿರ್ಮಾಣ ಮಾಡಿಸಿದ್ದರು. ವೃತ್ತದ ಸುತ್ತಲೂ ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ  ಎಂದು ಕನ್ನಡ, ಹಿಂದಿ ಭಾಷೆಯಲ್ಲಿ ಬರೆಸಲಾಗಿದೆ. ಸಿರಾಮಿಕ್‍ನಲ್ಲಿ ತಾಯಿ ಹೆಣ್ಣು ಮಗುವನ್ನು ಎತ್ತಿಕೊಂಡಿರುವ ಪುತ್ಥಳಿಯನ್ನು ಹುಬ್ಬಳ್ಳಿ ಕಲಾವಿಧ ಸಿದ್ಧಗೊಳಿಸಿದ ಪುತ್ಥಳಿಯನ್ನು  2021ರಲ್ಲಿ ಜನೆವರಿ 26ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ ಉದ್ಘಾಟಿಸಿದ್ದಾರೆ.

ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಲು ರಾಜ್ಯದಲ್ಲಿಯೇ ಮೊದಲು ಬೀದರನಲ್ಲಿ ನಿರ್ಮಿಸಿದ ಹೆಣ್ಣು ಮಗು ವೃತ್ತದ (Girl Child Circle) ಮೂಲಕ ಸಾಗುವವರಿಗೆ ಹೆಣ್ಣ ಮಗುವಿನ ಮೇಲೆ ಹೆಚ್ಚಿನ ಗೌರವ ಭಾವನೆ ಮೂಡಿಸುವಂತಾಗಿದೆ. ಇಂತಹ ವೃತ್ತಗಳು ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ಆಗಬೇಕಾಗಿದೆ. ಎಲ್ಲಿ ಎಲ್ಲಿ ಹೆಚ್ಚಾಗಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆದಿವೆಯೂ ಅಂತಹ ಕಡೆಗಳಲ್ಲಿ ಹೆಣ್ಣು ಮಗು ವೃತ್ತ ನಿರ್ಮಾಣ ವಾಗಬೇಕು ಅಥವಾ ರಸ್ತೆ ಮಾರ್ಗಕ್ಕೆ ಹೆಣ್ಣು ಮಗು ಮಾರ್ಗ ಎಂದು ಹೆಸರಿಟ್ಟು ಹೆಣ್ಣು ಮಕ್ಕಳ ಮೇಲೆ ಗೌರವ ಹೆಚ್ಚಿಸುವ ಕೆಲಸ ವಾಗಬೇಕಾಗಿದೆ.

ಕಠಿಣ ಕಾನೂನು ಅಗತ್ಯ :

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಸಮಾಜಕ್ಕೆ ಪೀಡುಗಾಗಿದೆ. ಇದನ್ನು ತಡೆಗಟ್ಟಲು ದೇಶದಲ್ಲಿ ಅನೇಕ ಕಾಯ್ದೆ ಕಾನೂನುಗಳು ಜಾರಿಗೆ ತಂದರೂ ಸಹ ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ವಿರುದ್ಧ ಹೆಣ್ಣು ಭ್ರೂಣ ಹತ್ಯೆಯಂಥ ಮಹಾಪಾಪದಲ್ಲಿ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಕೃತ್ಯದಲ್ಲಿ ಪಾಲ್ಗೊಳ್ಳುವವರಿಗೆ ಮೊದಲು ಭಯ ಹುಟ್ಟಿಸುವ ಕಠಿಣ ಕಾನೂನು ಜಾರಿಗೆ ತರಬೇಕಾಗಿದೆ.

ಸಹಾಯವಾಣಿಗೆ ಕರೆ ಮಾಡಿ :

ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಮಹಿಳಾ ಸಹಾಯವಾಣಿ (1092), ಮಕ್ಕಳ ಸಹಾಯವಾಣಿ (1098) ಹಾಗೂ ಆರೋಗ್ಯಸಹಾಯವಾಣಿ (104)ಗೆ ದೂರು ನೀಡಬೇಕು. ಇದು ಭ್ರೂಣ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!