ಹವ ಮಲ್ಲಿನಾಥ ಆಶ್ರಮದಲ್ಲಿ ಶಿವಾನುಭವ:
ಲಿಂಗಸುಗೂರು : ಇಂದಿನ ಯುವ ಪೀಳಿಗೆ ಅಜ್ಞಾನ ಅಂಧಕಾರದಲ್ಲಿ ಮುಳುಗಿ ತಂದೆ ತಾಯಿಗಳಿಗೆ ಗೌರವ ನೀಡದಿರುವುದರಿಂದ (Old Age Home ) ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ಪತ್ರಕರ್ತ ಡಾ.ಜಲಾಲುದ್ಧೀನ್ ಅಕ್ಬರ್ ಹೇಳಿದರು.
ಸ್ಥಳೀಯ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮ ಬಳಿ ಇರುವ ಹವ ಮಲ್ಲಿನಾಥ ಆಶ್ರಮದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ಪತ್ರಕರ್ತರ ದೃಷ್ಠಿಯಲ್ಲಿ ಆಧ್ಯಾತ್ಮಿಕತೆ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ ಅವರು, ಇಂದಿನ ಮಕ್ಕಳಿಗೆ ತಂದೆ-ತಾಯಿಗಳ, ಗುರು ಹಿರಿಯರ ಮಹತ್ವ ತಿಳಿಯದಾಗಿದೆ. ಯಾವ ದೇಶದಲ್ಲಿ ತಂದೆ-ತಾಯಿಯನ್ನ ದೇವರು ಎಂದು ತಿಳಿದು, ಹೆಗಲ ಮೇಲೆ ಹೊತ್ತು, ಅವರು ಬದುಕಿರುವವರೆಗೂ ಅವರನ್ನ ದೇವರಂತೆ ನೋಡಿಕೊಳ್ಳುತ್ತಿದ್ದರೋ, ಅದೇ ದೇಶದಲ್ಲಿ ಇಂದು ಮಕ್ಕಳೇ ತಂದೆ ತಾಯಿಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ (Old Age Home )ವೃದ್ಧಾಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿಂದಿನಿ0ದಲೂ ಗುರು ಪರಂಪರೆಯಲ್ಲಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಜೀವನ ನಡೆಸಲಾಗುತ್ತಿತ್ತು, ಆದರೆ ಇಂದು ಆಧುನಿಕತೆ ನೆಪದಲ್ಲಿ ಗುರು ಹಿರಿಯರಿಗೆ ಗೌರವ ನೀಡದೇ ಸಂಸ್ಕಾರ ಇಲ್ಲದೇ ಬದುಕು ನಡೆಸುತ್ತಿರುವುದು ವಿಪಾರ್ಯಸ ಸಂಗತಿಯಾಗಿದೆ ಎಂದರು.
ಶಿಕ್ಷಣ ಕಲಿತು ಸಂಸ್ಕಾರ ಮರೆತ ಯುವ ಪೀಳಿಗೆ :
ಇತ್ತೀಚಿಗೆ ಶಿಕ್ಷಣ ಕ್ಷೇತ್ರ ಸಾಕಷ್ಟು ಪ್ರಗತಿ ಕಾಣುತ್ತಿದೆ ಎಲ್ಲರೂ ಶಿಕ್ಷಣ ಕಲಿಯುತ್ತಿದ್ದಾರೆ ಆದರೆ ಸಂಸ್ಕಾರ ಮರೆಯುತ್ತಿದ್ದಾರೆ. ಈಗಾಗಿ ಶಿಕ್ಷಣದ ಜೊತೆ ಸಂಸ್ಕಾರ ಕಲಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಲಿ ಎಂದು ಪಾಲಕರು ಕಷ್ಟಪಡುತ್ತಾರೆ. ಆದರೆ ಮಕ್ಕಳು ಉನ್ನತಸ್ಥಾನಕ್ಕೇರಿ ವಿದೇಶದಲ್ಲಿ ಕೆಲಸ ಮಾಡುತ್ತಾರೆ ತಂದೆ ತಾಯಿಯನ್ನು(Old Age Home) ವೃದ್ಧಾಶ್ರಮಕ್ಕೆ ಸೇರಿಸಿರುವ ಮತ್ತು ತಂದೆ ತಾಯಿ ಸತ್ತಾಗ ಕೂಡಾ ಅವರ ಅಂತ್ಯಸ0ಸ್ಕಾರಕ್ಕೆ ಮಕ್ಕಳು ಬರದೇ ಇರುವ ಬಗ್ಗೆ ಸಾಕಷ್ಟು ಪ್ರಕರಣಗಳು ನಮ್ಮ ಸುತ್ತಮುತ್ತ ಇವೆ. ಇವತ್ತಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳುವುದು ಹೋಗಲಿ, ಅವರ ಮೇಲೆ ದೌರ್ಜನ್ಯ ಕೂಡ ಮಾಡುವ ಘಟನೆಗಳು ಎಲ್ಲೆಡೆ ನಡೆಯುತ್ತಿವೆ. ಆದರೆ ಮಕ್ಕಳಿಗೆ ತಂದೆ ತಾಯಿ ಚಿಕ್ಕಂದಿನಿ0ದಲೇ ಉತ್ತಮ ಸಂಸ್ಕಾರ ಕೊಟ್ಟು, ಮಾತಾಪಿತೃಗಳ ಮಹತ್ವವನ್ನು ಅವರಲ್ಲಿ ಬಿತ್ತಿದರೆ, ಖಂಡತವಾಗಿಯೂ ಅವರು ಕೊನೆಯ ವರೆಗೂ ತಮ್ಮ ಪೋಷಕರನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದಕ್ಕೆ ಮಠಮಾನ್ಯಗಳು, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತಲು ಶ್ರಮಿಸಬೇಕಿದೆ. ಸಂಸ್ಕಾರ ಶಿಬಿರ ಹಮ್ಮಿಕೊಳ್ಳಬೇಕಾಗಿದೆ ಎಂದರು.
ಆಶ್ರಮಕ್ಕೆ ನಿವೇಶನ ಮಂಜೂರಕ್ಕೆ ಪ್ರಯತ್ನ :
ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಮಾತನಾಡಿ, ಮೊಬೈಲ್ ಹಾವಳಿಯಿಂದಾಗಿ ಸಮಾಜವೇ ಇಂದು ಕಲ್ಮಶವಾಗಿದ್ದು, ಇದರ ದುಷ್ಪರಿಣಾಮ ಯುವ ಪೀಳಿಗೆ ಹಾದಿ ತಪ್ಪುವಂತೆ ಮಾಡಿದೆ ಈಗಾಗಿ ನಮ್ಮ ಸುಂದರ ಬದುಕಿಗೆ ಶರಣರ ಚಿಂತನೆಗಳು ಅಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ಆಯೋಜನೆ ಮಾಡುವ ಮೂಲಕ ಸಮಾಜ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಹವ ಮಲ್ಲಿನಾಥ್ ಆಶ್ರಮಕ್ಕೆ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಖಾಲಿ ನಿವೇಶನದ ಬೇಡಿಕೆ ಇಡಲಾಗಿದೆ ಇದಕ್ಕಾಗಿ ಅರ್ಜಿ ಸಲ್ಲಿಸಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿವೇಶನ ಮಂಜೂರು ಮಾಡಿಸುವುದಕ್ಕೆ ಪ್ರಯತ್ನ ಮಾಡುವುದಾಗಿ ಮತ್ತು ಆಶ್ರಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವೆ ಎಂದರು.
ಮಠಮಾನ್ಯಗಳಿಗೆ ಭಕ್ತರೇ ಆಸ್ತಿ :
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಸಮಿತಿ ಸದಸ್ಯ ಶಿವರಾಜ ಕೆಂಭಾವಿ ಮಾತನಾಡಿ, ಪೋಷಕರು ತಮಗಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಇಂದನ ಯುವ ಪೀಳಿಗೆಗೆ ಅರ್ಥವೇ ಆಗುತ್ತಿಲ್ಲ. ಇದು ಜಾಗತೀಕರಣದ ಪ್ರಭಾವವೇ ಆಗಿದೆ. ವೃದ್ಧರಿಗೆ (Old Age Home )ವೃದ್ಧಾಶ್ರಮ, ಏನೂ ಅರಿಯದ ಚಿಕ್ಕಮಕ್ಕಳನ್ನು ಪ್ಲೇಹೋಮ್‌ಗಳಿಗೆ ಸೇರಿಸುತ್ತಿರುವುದು ಸಮಾಜದ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು. ಮಕ್ಕಳು ಚಿಕ್ಕವರಿರುವಾಗಲೇ ಅವರಲ್ಲಿನ ಒಳ್ಳೆಯ ಗುಣಗಳನ್ನು ಬೆಳೆಸಬೇಕು.ಉತ್ತಮ ಸಂಸ್ಕಾರಗಳಿ0ದ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯ ಎಂದರು. ಯಾವುದೇ ಆಶ್ರಮ ಹಾಗೂ ಮಠಕ್ಕೆ ಭಕ್ತರೇ ಆಸ್ತಿಯಾಗಿದ್ದಾರೆ. ಮಠಗಳ ಬೆಳವಣಿಗೆ ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು. Old Age Home
ಕಾರ್ಯಕ್ರಮದಲ್ಲಿ ಅಫಜಲಪುರ ತಾಲೂಕಿನ ಅವರಳ್ಳಿ ಕೈಲಾಸ ಆಶ್ರಮದ ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಸಂಸ್ಕಾರಯುತ ಬದುಕು, ಶಿಕ್ಷಣ ಇಲ್ಲದಾಗಿದೆ. ಶಿಕ್ಷಣ ಕೇವಲ ಉದ್ಯೋಗಕ್ಕೆ ಮಾತ್ರ ಎಂಬುವ0ತಾಗಿದೆ ಶಿಕ್ಷಣ ನಮಗೆ ಜ್ಞಾನಕ್ಕಾಗಿ ಸಂಸ್ಕಾರಕ್ಕಾಗಿ ಇರಬೇಕು. ಆದರೆ ಶಿಕ್ಷಣ ಪಡೆದು ಸಂಸ್ಕಾರ ಮರೆತು ಅಂಧಕಾರದಲ್ಲಿ ತೇಲುವಂತಾಗಿದೆ. ಅಂಧಕಾರದಿ0ದ ಹೊರಬಂದು ಉತ್ತಮ ನಾಗರಿಕರಾಗಿ ತಮ್ಮೊಬ್ಬರಿಗೆ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಪುರಸಭೆ ನೂತನ ಅಧ್ಯಕ್ಷರಾಗಿದ ಆಯ್ಕೆಯಾದ ಬಾಬುರೆಡ್ಡಿ ಮುನ್ನೂರು ಅವರನ್ನು ಆಶ್ರಮದವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹವ ಮಲ್ಲಿನಾಥ ಆಶ್ರಮದ ಮಹಾದೇವ ತಾತಾ ದಿವ್ಯಸಾನಿಧ್ಯ ವಹಿಸಿದ್ದರು. ನಾಗಪ್ಪ ವಕೀಲರು, ಸಂಪಾದಕ ಅಮರೇಶ ಕಲ್ಲೂರು, ಡಾ.ಚಂದ್ರಶೇಖರ್ ಸರ್ಜಾಪುರ, ಪ್ರಮೋದ ಕನಕಗಿರಿ, ಮಂಜುನಾಥ ವಕೀಲರು ಉಪಸ್ಥಿತರಿದ್ದರು.