suddiduniya.com

khasgateshwar math :ಮೈಸೂರು ದಸರಾ ನೆನೆಪಿಸಿದ ಖಾಸ್ಗತೇಶ್ವರ ಜಾತ್ರಾಮಹೋತ್ಸವ

khasgateshwar

ಹುಣಸಗಿ : ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ( khasgateshwar ) ಶಾಂತಾಶ್ರಮದ ವಾರ್ಷಿಕೋತ್ಸವ ಹಾಗೂ ವಿರಕ್ತ ಶಿವಯೋಗಿಗಳ 2ನೇ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಗ್ರಾಮದಲ್ಲಿ ಪೂರ್ಣಕುಂಭ ಮೇಳ ಹಾಗೂ ಆನೆ ಮೇಲೆ ಖಾಸ್ಗತೇಶ್ವರ ಶ್ರೀಗಳ  ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

khasgateshwar

ಜಾತ್ರಾಮಹೋತ್ಸವದಲ್ಲಿ ಬೆಳಿಗ್ಗೆ ಕಸಳಾರೋಹಣದ ನಂತರ ( khasgateshwar )ಖಾಸ್ಗತೇಶ್ವರ ಸ್ವಾಮೀಜಿಯವರು ಮೂರ್ತಿ ಇರುವ ಅಂಬಾರಿ ಹೊತ್ತ ಆನೆ ಹಾಗೂ ಸಾರೋಟದಲ್ಲಿ ವಿರಾಜಮಾನರಾಗಿದ್ದ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರಗಳನ್ನು ಗ್ರಾಮದಿಂದ ಶಾಂತಾಶ್ರಮವರಿಗೆ ನೂರಾರು ಕುಂಭ ಹಾಗೂ ಕಳಸದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ನಾನಾ ಕಲಾತಂಡಗಳ ತಮ್ಮ ಕಲಾಪ್ರದರ್ಶನ ನೀಡುವ ಮೆರವಣಿಗೆ ಕಳೆ ತಂದಿದ್ದರು.

ಮೈಸೂರು ದಸರಾ ನೆನಪಿಸಿದ ಜಾತ್ರೆ :

ಮೈಸೂರು ದಸರಾ ಅಂದರೆ ಅಂಬಾರಿ ಮೆರವಣಿಗೆ ವಿಶೇಷತೆಯಾಗಿದೆ. ದಸರಾ ಮುಗಿದು ಇನ್ನೂ ಹದಿನೈದು ದಿನಗಳು ಕಳೆದಿಲ್ಲ, ಅಂತಹ ವಿಶೇಷತೆ, ಅಷ್ಟೇ ಸಂಭ್ರಮ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ನಡೆದ ಖಾಸ್ಗತೇಶ್ವರ ಜಾತ್ರಾಮಹೋತ್ಸವದಲ್ಲಿ ಕಂಡು ಬಂತು.ಜಾತ್ರಾಮಹೋತ್ಸವದಲ್ಲಿ ದಾವಣಗೇರಿಯಿಂದ ತರಿಸಿದ್ದ ಆನೆ ಮೇಲೆ ಅಂಬಾರಿ ಇಟ್ಟು ಅದರಲ್ಲಿ ಖಾಸ್ಗತೇಶ್ವರ ಮಹಾಸ್ವಾಮಿಗಳ ಮೂರ್ತಿ ಇಟ್ಟು ಅಂಬಾರಿ ಮೆರವಣಿಗೆ ಇಡೀ ಗ್ರಾಮದಲ್ಲಿ ಸಂಭ್ರಮದ ವಾತವಾರಣ ಮನೆ ಮಾಡಿತ್ತು.

ತಿಳಿದು ಬದುಕು ಪ್ರವಚನ ಹೊಸ ಚೈತನ್ಯ :

ಕಲ್ಲದೇವನಹಳ್ಳಿ ಗ್ರಾಮದ ಖಾಸ್ಸತೇಶ್ವರ ಶಾಂತಾಶ್ರಮದ ವಾರ್ಷಿಕೋತ್ಸವ ಹಾಗೂ ವಿರಕ್ತ ಶಿವಯೋಗಿಗಳ 2ನೇ ಜಾತ್ರಾ ಮಹೋತ್ಸವ ನಿಮಿತ್ಯ ಅಕ್ಟೋಬರ್ 17 ರಿಂದ ಅ.21ವರಿಗೆ ತಿಳಿದು ಬದುಕು ಪ್ರವಚನ ಕಾರ್ಯಕ್ರಮ ನಡೆಯಿತು. ಕಳೆದ ಐದು ದಿನಗಳ ಕಾಲ ನಡೆದ ತಿಳಿದು ಬದುಕು ಪ್ರವಚನ ಕಲ್ಲದೇವನಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೊಸ ಚೈತನ್ಯ ತಂದಿದೆ. ಸಾರ್ಥಕ ಜೀವನದ ಸದ್ವಿಚಾರದ ವಿಚಾರ ತಿಳಿಸುವ ಪ್ರವಚನ ಬದುಕಿನ ಪರಿವರ್ತನೆಗೆ ಕಾರಣವಾಯಿತು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!