ದೇಶದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ಗಣಿ
ಲಿಂಗಸುಗೂರು : ಪ್ರಸ್ತುತ ಭಾರತದಲ್ಲಿ ಸಕ್ರೀಯವಾಗಿರುವ ಏಕೈಕ್ ಚಿನ್ನದ ಗಣಿಯಾಗಿರುವ ತಾಲೂಕಿನ ( Hatti Gold Mine ) ಹಟ್ಟಿ ಚಿನ್ನದ ಗಣಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 761 ಕೆಜಿ ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಿದೆ.
ಸಿಂಧೂ ನಾಗರೀಕತೆ ಸಮಯದಿಂದಲೇ ಹಟ್ಟಿ ಹಾಗೂ ಕೋಲಾರ ಚಿನ್ನದ ಗಣಿಯಿಂದ ಚಿನ್ನ ರಫ್ತಾಗುತ್ತಿದೆ, ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಅಶೋಕನ ಕಾಲದಲ್ಲಿದ್ದ ಪುರಾತನ ಚಿನ್ನದ ಗಣಿಯಾಗಿದೆ. ಈ ಹಿನ್ನಲೆಯಲ್ಲಿ( Hatti Gold Mine )ಹಟ್ಟಿ ಚಿನ್ನದ ಗಣಿಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. 1887 ರಲ್ಲಿ ಹೈದರಾಬಾದ್ ನಿಜಾಮನಿಗೋಸ್ಕರ ಗಣಿಯನ್ನು ಹೈದರಾಬಾದ್ ಡೆಕ್ಕನ್ ಕಂಪನಿಯು ಚಿನ್ನದ ಗಣಿಗಾರಿಕೆಯನ್ನು ಮಾಡಲ್ಲಿ ಪ್ರಾರಂಭಿಸಿತು. 1956ರಲ್ಲಿ ಕರ್ನಾಟಕ ಏಕಿಕರಣಗೊಂಡ ನಂತರ ಅದರ ಹೆಸರನ್ನು (Hatti Gold Mine )ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದೆ. ವಾರ್ಷಿಕವಾಗಿ 1.8 ಟನ್‍ಚಿನ್ನ ಉತ್ಪಾದಿಸುವ ಮೂಲಕ ದೇಶದ ಹಳೆಯ ಹಾಗೂ ಪ್ರಮುಖ ಚಿನ್ನದ ಗಣಿಯಾಗಿದೆ. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಹಟ್ಟಿ ಚಿನ್ನದ ಗಣಿ ಆರು ತಿಂಗಳಲ್ಲಿ ನಿಗದಿತ ಗುರಿಗೂ ಮೀರಿ ಚಿನ್ನ ಉತ್ಪಾದಿಸಿದೆ.
761 ಕೆಜಿ ಚಿನ್ನ ಉತ್ಪಾದನೆ :
2024ರ ಏಪ್ರೀಲ್‍ನಿಂದ ಸೆಪ್ಟೆಂಬರ್ ತಿಂಗಳವರಿಗೆ 757.811 ಕೆಜಿ ಚಿನ್ನ ಉತ್ಪಾದನೆಗೆ ಗುರಿ ನಿಗದಿ ಮಾಡಲಾಗಿತ್ತು. ಆದರೆ ಈ ಆರು ತಿಂಗಳು ಅವಧಿಯಲ್ಲಿ 762.133 ಕೆಜಿ ಚಿನ್ನ ಉತ್ಪಾದಿಸುವ ಮೂಲಕ ಗುರಿಗಿಂತ ಅಧಿಕ ಚಿನ್ನ ಉತ್ಪಾದನೆ ಮಾಡಲಾಗಿದೆ. ಹೆಚ್ಚುವರಿಯಾಗಿ 4.322 ಕೆಜಿ ಚಿನ್ನ ಉತ್ಪಾದನೆ ಮಾಡಲಾಗಿದೆ. ನಿಕ್ಷೇಪವಿರುವ ಅದಿರು ಬಂದಿದ್ದರಿಂದ ಗುರಿಗೂ ಮೀರಿ ಸಾಧನೆ ಮಾಡಲು ಕಾರಣವಾಗಿದೆ.
ಲಿಂಗಸುಗೂರು ತಾಲೂಕಿನಲ್ಲಿರುವ (Hatti Gold Mine) ಹಟ್ಟಿ ಚಿನ್ನದ ಗಣಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಹಟ್ಟಿ ಚಿನ್ನದ ಘಟಕವಲ್ಲದೆ ಹೀರಾ ಬುದ್ದಿನ್ನಿ, ಊಟಿ ಚಿನ್ನದ ಘಟಕಗಳನ್ನು ಹೊಂದಿದೆ. ಹಟ್ಟಿ ಚಿನ್ನದ ಗಣಿಯು ಕಳೆದ 2023-24 ನೇ ಸಾಲಿನಲ್ಲಿ 7.51.000 ಮೆಟ್ರಿಕ್ ಟನ್ ಚಿನ್ನದ ಅಧಿರನ್ನು ಸಂಸ್ಕರಿಸುವ ಗುರಿ ಹೊಂದಲಾಗಿತ್ತು. 2022-23ನೇ ಸಾಲಿನಲ್ಲಿ 1411.425 ಕೆಜಿ ಚಿನ್ನ ಉತ್ಪಾದಿಸಲಾಗಿದೆ.
ಕಾರ್ಮಿಕರ ಅವಿರತ ಶ್ರಮ :
ಹಟ್ಟಿ ಚಿನ್ನದ ಗಣಿಯಲ್ಲಿ ಶಿಫ್ಟ್ ಆದಾರದಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರು ಸೇರಿ 3678 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರ ಅವಿರತ ಶ್ರಮದ ಫಲವಾಗಿ ನಿಗದಿತ ಗುರಿ ಮೀರಿ ಚಿನ್ನ ಉತ್ಪಾದನೆಗೆ ಕಾರಣವಾಗಿದೆ.
10ಗ್ರಾಂ ಗೆ 80 ಸಾವಿರ ರೂಪಾಯಿ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಶುದ್ದ ಚಿನ್ನದ ಬೆಲೆ 80 ಸಾವಿರ ರೂಪಾಯಿ ಇದೆ. ಬಂಗಾರದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿಲ್ಲೇ ಇದೆ. ಇದರ ಲಾಭ ಪಡೆಯಲು ಹಟ್ಟಿ ಚಿನ್ನದ ಗಣಿ ಆಡಳಿತ ವರ್ಗ ಗಣಿ ಮತ್ತಷ್ಟು ಅಭಿವೃದ್ಧಿ ಪಡಿಸುವ ಮಹತ್ವದ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಹಿಂದೆ ಉತ್ಪಾದನೆ ವೆಚ್ಚ ಅಧಿಕವಾಗುತ್ತದೆಂದು ಪ್ರತಿ ಟನ್ ಅದಿರಿಗೆ 5 ಗ್ರಾಂ ಚಿನ್ನ ಸಿಕ್ಕಲ್ಲಿ ಮಾತ್ರ ಗಣಿಗಾರಿಕೆ ಮಾಡಿ 3 ಗ್ರಾಂ ಮತ್ತು 4 ಗ್ರಾಂ ಚಿನ್ನ ಸಿಕ್ಕಲ್ಲಿ ಉತ್ಪಾದನೆ ಕೈಗೊಳ್ಳದೆ ಬಿಡಲಾಗಿತ್ತು. ಈಗ ಹಿಂದೆ ಬಿಟ್ಟುಹೋಗಿರುವ ಪ್ರದೇಶದಲ್ಲಿ ಪುನಃ ಗಣಿಗಾರಿಕೆ ಮುಂದುವರಿಸಲು ಯೋಜನೆ ರೂಪಿಸಿದೆ.