suddiduniya.com

Dalita Sahitya :ಡಿ.14,15 ರಂದು ರಾಯಚೂರಿನಲ್ಲಿ ದಲಿತ ಸಾಹಿತ್ಯ ಸಮ್ಮೇಳನ

Dalita Sahitya

ಲಿಂಗಸುಗೂರು : ಡಿಸೆಂಬರ್ 14 ಮತ್ತು 15ರಂದು ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ( Dalita Sahitya )ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.

Dalita Sahitya

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿಪರ ಚಿಂತಕರೆಲ್ಲರೂ ಒಂದಡೆ ಸೇರಿ 1994 ಅಕ್ಟೋಬರ್ 14ರಂದು ದಲಿತ ಸಾಹಿತ್ಯ ( Dalita Sahitya )ಪರಿಷತ್ ಹುಟ್ಟು ಹಾಕಿದ್ದೇವೆ, ಪರಿಷತ್‌ಗೆ 30 ವರ್ಷದ ಸಂಭ್ರಮದಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ದಲಿತ ಸಾಹಿತ್ಯ ಪರಿಷತ್ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಮನುಷ್ಯತ್ವ, ಹಾಗೂ ಬುದ್ಧ,ಬಸವ,ಅಂಬೇಡ್ಕರ್ ತತ್ವದಡಿಯಲ್ಲಿ ಬರಹಗಾರರಿಗೆ ಪರಿಷತ್‌ನಲ್ಲಿ ಕೆಲಸ ಮಾಡುವ ಮುಕ್ತ ಅವಕಾಶ ಒದಗಿಸಲಾಗಿದೆ. ಈಗಾಗಲೇ ರಾಜ್ಯದ ವಿವಿಧಡೆ 10 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದೇವೆ. 2008ರಲ್ಲಿ ಪ್ರಥಮ ಸಮ್ಮೇಳನ ವಿಜಯಪುರ,ಬೀದರ್,ಕೊಪ್ಪಳ, ಬೆಳಗಾವಿ, ಮೈಸೂರು, ಬಾಗಲಕೋಟೆ,ಧಾರವಾಡ, ವಿಜಯಪುರದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಯುವಕರಿಗಾಗಿ ಯುವ ಸಾಹಿತ್ಯ ಸಮ್ಮೇಳನ, ದಸಾಪ ಬೆಳ್ಳಿ ಹಬ್ಬದ ಅಂಗವಾಗಿ ನರಗುಂದಲ್ಲಿ ಗಜಲ್ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಆನಲೈನ್ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ದಲಿತ ಸಾಹಿತ್ಯ ಪರಿಷತ್ ಪ್ರಕಾಶನ ಆರಂಭಿಸಿ 75ಕ್ಕೂ ಹೆಚ್ಚು ಮೌಲಿಕ ಕೃತಿ ಪ್ರಕಟ ಮಾಡಿರುವುದು ಹೆಮ್ಮೆ ಸಂಗತಿಯಾಗಿದೆ ಎಂದರು.

ವಿಜಯಪುರದಲ್ಲಿ ನಡೆದ 10 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ 11ನೇ ಸಾಹಿತ್ಯ ಸಮ್ಮೇಳನ ರಾಯಚೂರಿಗೆ ನೀಡುವಂತೆ ಮನವಿ ನೀಡಿದ್ದರಿಂದ ದಲಿತ ಸಾಹಿತ್ಯ (Dalita Sahitya ) ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಹಲವು ಹೋರಾಟದ ನೆಲವಾದ ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ತಿರ್ಮಾನಿಸಿದ್ದರಿಂದ ಡಿಸೆಂಬರ್ 14 ಮತ್ತು 15ರಂದು ರಾಯಚೂರಿನ ಜಂಬಲದಿನ್ನಿ ರಂಗಮ0ದಿರದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ಜಿಲ್ಲಾ ಹಾಗೂ ತಾಲೂಕು ಘಟಕವಾರು ಪೂರ್ವಭಾವಿ ಸಭೆಗಳು ನಡೆಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಚಿತ ಪ್ರವೇಶವಿದೆ. ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಸಮ್ಮೇಳನಕ್ಕೆ ಬರುವವರಿಗೆ ಊಟ-ವಸತಿ ಸೌಕರ್ಯ ಒದಗಿಸಲಾಗುತ್ತಿದೆ. ರಾಜ್ಯದ 31 ಜಿಲ್ಲೆಗಳಿಂದ ಸುಮಾರು 4-5 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಹೊರ ರಾಜ್ಯದಿಂದಲೂ ಬರಹಗಾರರು, ಕವಿಗಳು ಚಿಂತಕರು ಭಾಗವಹಿಸಲಿದ್ದಾರೆ ಎಂದರು.

11ನೇ ಅಖಿಲ ಭಾರತ ದಲಿತ ಸಾಹಿತ್ಯ (Dalita Sahitya )ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ವಿಚಾರವಾಗಿ ಹಲವು ಮಾನದಂಡಗಳನ್ನು ನಾವು ಹಾಕಿಕೊಂಡಿದ್ದೇವೆ, ಯಾರಾದರೂ ಸಮ್ಮೇಳನಾಧ್ಯಕ್ಷರ ಹೆಸರು ಸೂಚಿಸಬಹುದು, 31 ಜಿಲ್ಲಾ ಅಧ್ಯಕ್ಷರಗಳಿಗೆ ಹೆಸರು ಸೂಚಿಸುವಂತೆ ತಿಳಿಸಲಾಗಿದೆ, ಇದಲ್ಲದೆ ಈ ಹಿಂದಿನ ಸಮ್ಮೇಳನ ಅಧ್ಯಕ್ಷರು ಹಾಗೂ ಹಿರಿಯ ಚಿಂತಕರೊ0ದಿಗೆ ಚರ್ಚಿಸಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ, ಮಹಿಳಾ ಮೀಸಲಾತಿ ಸೇರಿದಂತೆ ಎಲ್ಲಾ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲಾಗುತ್ತಿದೆ. ಸಮ್ಮೇಳನದ ದಿನದಂದು ಸಂವಿಧಾನದೊAದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದರು.

10 ಸಮ್ಮೇಳನಕ್ಕಿಂತ 11ನೇ ಸಮ್ಮೇಳನ ಹಲವು ವಿಶೇಷತೆಗಳಿವೆ, ಪ್ರತಿ ಜಿಲ್ಲೆಯಿಂದ ಇಬ್ಬರಿಗೆ ಸಾಧಕರಿಗೆ ಸನ್ಮಾನ ಒಟ್ಟು 100 ಸಾಧಕರಿಗೆ ಸನ್ಮಾನ ಮಾಡಲಾಗುವುದು, ಗೌರವ ಪ್ರಶಸ್ತಿ, ಯುವ ಸಾಹಿತಿ ಪ್ರಶಸ್ತಿ ನೀಡಲಾಗುವುದು, ಸಮ್ಮೇಳನಕ್ಕೆ ಸಂವಿಧಾನ ಭಾರತ ಎಂದು ಕರೆಯಲಾಗುತ್ತಿದೆ. ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಹೋರಾಟ, ಚಳುವಳಿಗೆ ಪ್ರಮುಖ ಸ್ಥಾನವಿದೆ. ಈಗಾಗಿ ರಾಯಚೂರು ಜಿಲ್ಲೆಯ ದಲಿತ ಹಾಗೂ ಬಂಡಾಯ ಸಾಹಿತ್ಯದ ಬಗ್ಗೆ ವಿಶೇಷ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಭಾರತದ ಸಂವಾದ ಕಾರ್ಯಕ್ರಮ, ಎರಡು ದಿನಗಳ ಕಾಲ ಕವಿಗೋಷ್ಠಿ, ವಿಚಾರ ಸಂಕಿರಣ ಸೇರಿ ಒಟ್ಟು ಆರು ಗೋಷ್ಠಿಗಳು ನಡೆಯಲಿವೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ದಲಿತ ಸಾಹಿತ್ಯ (Dalita Sahitya )ಪರಿಷತ್‌ಗೆ 30 ವರ್ಷ ತುಂಬಿದ್ದರಿ0ದ ಇದರ ಸವಿನೆನಪಿಗಾಗಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ 30 ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ, ಈಗಾಗಲೇ 25 ಪುಸ್ತಕಗಳು ಸಿದ್ಧವಾಗಿವೆ ಎಂದರು. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ, ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಈ ವೇಳೆ ಸಮ್ಮೇಳನದ ಸಂಚಾಲಕ ಡಾ.ಹುಸೇನಪ್ಪ ಅಮರಾಪುರ, ದಸಾಪ ತಾಲೂಕಾಧ್ಯಕ್ಷ ಅಮರೇಶ ವೆಂಕಟಾಪುರ, ದಸಾಪ ಯುವ ಘಟಕದ ಅಧ್ಯಕ್ಷ ಪಾರ್ಥ ಸಿರವಾರ, ಡಾ.ಮಹಾಂತಗೌಡ ಪಾಟೀಲ್, ಡಾ.ಪರಮಾನಂದ ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!