ಹಟ್ಟಿ ಚಿನ್ನದ ಗಣಿ
ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಯ (Hatti Gold Mine) ಅಧಿಸೂಚಿತ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿ ಪೂರ್ಣಗೊಳಿಸಿ ಅಧಿಸೂಚಿತ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಿ ಕಾರ್ಮಿಕರ ಉಪಯೋಗಕ್ಕೆ ನೀಡುವಂತೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ಮಂಗಳವಾರದಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಟ್ಟಿ ಚಿನ್ನದ ಗಣಿಯ ( Hatti Gold Mine ) ಅಧಿಸೂಚಿತ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿ ಪೂರ್ಣಗೊಳಿಸಿಅಧಿಸೂಚಿತ ಪ್ರದೇಶ ಸಮಿತಿಯು ಹಲವು ವರ್ಷಗಳಿಂದ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ವಾಸವಾಗಿರುವ ಕ್ಯಾಂಪ್ ಪ್ರದೇಶದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡರೂ ಉದ್ಘಾಟನೆಗೊಳ್ಳದೇ ಉಪಯೋಗಕ್ಕೆ ಇಲ್ಲದಂತಾಗಿದೆ.
9 ವರ್ಷದಿಂದ ನಡೆಯುತ್ತಿದೆ ಕಾಮಗಾರಿ :
ಸರ್ಕಾರದ ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ 2009-10ನೇ ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು ರೂಪಾಯಿ 50 ಲಕ್ಷ ವೆಚ್ಚದಲ್ಲಿ ಒಟ್ಟು 20 ವಾಣಿಜ್ಯ ಮಳಿಗಳು ನಿರ್ಮಿಸಿತು. ವಾಣಿಜ್ಯ ಮಳಿಗೆಗಳ ಕಾಮಗಾರಿ 9 ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.
ಕಾರ್ಮಿಕರ ಕುಟುಂಬದವರು ತರಕಾರಿ ಖರೀದಿಸಲು ಅನುಕೂಲವಾಗಲೆಂದು 2006-07ರಲ್ಲಿ ಸುಮಾರು ರೂಪಾಯಿ 48 ಲಕ್ಷ ಮೊತ್ತದ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲಾಯಿತು. ಆದರೆ ಕೊನೆಯ ಹಂತದಲ್ಲಿ ಕಾಮಗಾರಿಯನ್ನು ನಿಲ್ಲಸಿಲಾಯಿತು. ಈಗ ಈ ಕಾಮಗಾರಿ ಸ್ಥಗಿತಗೊಂಡು ಸುಮಾರು 12 ವರ್ಷಗಳಾಗಿವೆ.
ನೀರು ಶುದ್ಧಿಕರಣ ಘಟಕಗಳು :
2009-10ನೇ ಸಾಲಿನ ನಗರೋತ್ಥಾನ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಮಾಧ್ಯಮ ಪಟ್ಟಣಗಳ ಅಭಿವೃದ್ಧಿ ಕಾಮಗಾರಿಗಳ 1ನೇ ಹಂತದ ಕಾಮಗಾರಿಯಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈ ಮಾಸ್ಟ್ ಬೀದಿ ದೀಪಗಳು ಅಳವಡಿಸಲಾಯಿತು. ಅಳವಡಿಸಿ 12 ವರ್ಷಗಳು ಗತಿಸಿದರೂ ಒಂದು ದಿನವೂ ಉರಿದಿಲ್ಲ. ಹಟ್ಟಿ ಕ್ಯಾಂಪ್‌ನಲ್ಲಿ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಲ್ಲಿ ಅಂದಾಜು 66 ಲಕ್ಷ ಮೊತ್ತದಲ್ಲಿ 5 ಆರ್‌ಒ(ನೀರು ಶುದ್ಧಿಕರಣ ಘಟಕಗಳು) ಮಂಜೂರು ಮಾಡಲಾಗಿದೆ. 5ರಲ್ಲಿ ಕೇವಲ 4 ಆರ್‌ಒ ಪ್ಲಾಂಟ್‌ಗಳು ಪೂರ್ಣಗೊಂಡಿವೆ. ಪೂರ್ಣಗೊಂಡು ಒಂದು ವರ್ಷವಾದರೂ ಇನ್ನೂ ಉದ್ಘಾಟನಡೆಗೊಂಡಿಲ್ಲ, ಶೀಘ್ರವೇ ಉದ್ಘಾಟಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು.
ಹೀಗೆ ಇಲ್ಲಿಯ ಅಧಿಸೂಚಿತ ಪ್ರದೇಶ ಸಮಿತಿ ವತಿಯಿಂದ ಕೋಟಿ ಕೋಟಿ ರೂಪಾಯಿಗಳು ಖರ್ಚುಮಾಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಅದರಲ್ಲಿ ಒಂದೂ ಕಾಮಗಾರಿಯ ಕಾರ್ಮಿಕರ ಉಪಯೋಗಕ್ಕೆ ಬಾರದೇ ಸರ್ಕಾರ ಕೋಟ್ಯಾನುಗಟ್ಟಲೆ ಹಣ ಪೋಲು ಮಾಡಲಾಗುತ್ತಿದೆ. ಈ ಅಧಿಸೂಚಿತ ಪ್ರದೇಶ ಸಮಿತಿಯ ಅಧ್ಯಕ್ಷರು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಆಗಿರುತ್ತಾರೆ. ಉಪಾಧ್ಯಕ್ಷರು ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತರು ಆಗಿರುತ್ತಾರೆ. ಕಾರ್ಯದರ್ಶಿಯಾಗಿ ಅಧಿಸೂಚಿತ ಪ್ರದೇಶ ಸಮಿತಿಯ ಮುಖ್ಯಾಧಿಕಾರಿಗಳು ಇರುತ್ತಾರೆ. ಹಟ್ಟಿ ಚಿನ್ನದ ಗಣಿ ಆಡಳಿತ ವರ್ಗ ಅಧಿಕಾರಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಇವರೆಲ್ಲರ ನಿರ್ಲಕ್ಷ್ಯದಿಂದ ಸರ್ಕಾರದ ಹಣ ಪೋಲಾಗುತ್ತಿದೆ.
ಆದುದರಿಂದ ಈ ಕೂಡಲೇ ಸಂಬಂಧ ಪಟ್ಟ ಇಲಾಖೆ ಸೂಚನೆ ನೀಡಿ ಈ ಅಪೂರ್ಣ ಕಾಮಗಾರಿಗಳು ಪೂರ್ಣಗೊಳಿಸಿ ಕಾರ್ಮಿಕರಿಗೆ ಉಪಯೋಗವಾಗುವಂತೆ ಕ್ರಮಜರುಗಸಬೇಕು. 15ದಿನಗಳ ಒಳಗಾಗಿ ಕ್ರಮಜರುಗಿಸದಿದ್ದಲ್ಲಿ. ಹಟ್ಟಿ ಚಿನ್ನದ ಗಣಿ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿ ಎದುರುಗಡೆ ಅನಿರ್ದಿಷ್ಟಾವಧಿಗೆ ಧರಣಿ ನಡೆಸಲಾಗುವುದು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ಉಪಾಧ್ಯಕ್ಷ, ಪವನ ಕಮದಾಳ, ನಾಗರಾಜ್ ಮಲ್ಕಾಪೂರು ಇದ್ದರು.
One thought on “Hatti Gold Mine :ಅಧಿಸೂಚಿತ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿ ಪೂರ್ಣಗೊಳಿಸಿ”