suddiduniya.com

Dalita sahitya sammelana : ರಾಯಚೂರು ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನಕ್ಕೆ ಕವನಗಳ ಆಹ್ವಾನ

Dalita sahitya sammelana

ಲಿಂಗಸುಗೂರು : ರಾಯಚೂರು ನಗರದಲ್ಲಿ ಡಿಸೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ 11ನೇ) Dalita sahitya sammelana) ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ರಾಯಚೂರು ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನಕ್ಕಾಗಿ ಕವನಗಳ ಆಹ್ವಾನಿಸಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಅಮರೇಶ ವೆಂಕಟಾಪುರ ತಿಳಿಸಿದ್ದಾರೆ.

Dalita sahitya sammelana

ರಾಯಚೂರು ನಗರದ ಜಿಲ್ಲಾ ಮಂದಿರದಲ್ಲಿ ಡಿಸೆಂಬರ್ 14 ಮತ್ತು 15ರಂದು( Dalita sahitya sammelana) ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ರಾಯಚೂರು ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನವನ್ನು ಹೊರತರಲಾಗುವುದು. ಆಸಕ್ತ ಕವಿಗಳು, ಬರಹಗಾರರು ತಮ್ಮ ಒಂದು ಕವನ ಮತ್ತು ಇತ್ತೀಚಿನ ಭಾವಚಿತ್ರವನ್ನು ಈ ಕೆಳಗೆ ತಿಳಿಸಿದ ವಿಳಾಸಕ್ಕೆ ತಲುಪಿಸಬಹುದು. 

ಕವನ ಸಂಕಲನ :

ದಲಿತ ಸಾಹಿತಿ-ಬಂಡಾಯ ಸಾಹಿತಿ, ದಲಿತ-ಬಂಡಾಯ ಸಾಹಿತ್ಯ ವಿಷಯ ವಸ್ತು ಒಳಗೊಂಡಿರುವ ಕಾವ್ಯಗಳನ್ನು ಕಳುಹಿಸಬಹುದು. ಅಲ್ಲದೇ ಬುದ್ಧ-ಬಸವ-ಅಂಬೇಡ್ಕರ ವಿಚಾರಧಾರೆಗಳ ಕುರಿತಾದ ಕವನಗಳನ್ನು ಕಳುಹಿಸಬಹುದು. ದಲಿತರ ಇಂದಿನ ಸ್ಥಿತಿಗತಿ, ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಕೂಡ ಹೊಂದಿರಬಹುದು. 

ತಾವು ಕಳುಹಿಸಿದ ಕವನಗಳನ್ನು ಪ್ರಕಟಿಸುವ ನಿರ್ಧಾರ ಅಂತಿಮವಾಗಿ ಸಂಪಾದಕ ಮಂಡಳಿಯದ್ದಾಗಿರುತ್ತದೆ. ತಮ್ಮ ಕವನಗಳನ್ನು ಕನ್ನಡ ನುಡಿ 4.0 ತಂತ್ರಾಂಶದಲ್ಲಿ ಮುದ್ರಿಸಿ ವಾಟ್ಸಪ್ ನಂಬರಿಗಾಗಲಿ ಸೂಚಿಸಿರುವ ಈ ಮೇಲ್ ಗಾಗಲಿ ಕಳುಹಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ, ಕವನ ಸಂಕಲನದ ಸಂಪಾದಕರಾದ ಡಾ.ಮಹಾಂತಗೌಡ ಪಾಟೀಲ, ಪ್ರಾಂಶುಪಾಲರು, ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಸ್ಕಿ ರಾಯಚೂರು,ಮೊಬೈಲ್-9480039671, Email-dsplingasugur@gmail.com, ಸಂಪಾದಕ ಮಂಡಳಿ ಡಾ. ಮಲ್ಲಯ್ಯ ಅತ್ತನೂರು ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವದುರ್ಗ, ಮೊಬೈಲ್-9008569112, ಆಂಜನೇಯ ರಾಮತ್ನಾಳ, ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರ್ವಿಹಾಳ, ಮೊಬೈಲ್- 9972181814,  ನಿಂಗಪ್ಪ ತಿಡಿಗೋಳ, ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು, ಮಸ್ಕಿ  ಮೊಬೈಲ್-7795544554, ಇವರನ್ನು ಸಂಪರ್ಕಿಸಬಹುದೆಂದು ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಮರೇಶ ವೆಂಕಟಾಪೂರ ತಿಳಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!