suddiduniya.com

SDA Suicide : ಎಸ್‍ಡಿಎ ರುದ್ರಣ್ಣ ಆತ್ಮಹತ್ಯೆ,ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

SDA suicide

ಲಿಂಗಸುಗೂರು : ಬೆಳಗಾವಿ ಜಿಲ್ಲೆ ಬೆಳಗಾವಿ ತಹಶೀಲ ಕಚೇರಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಅವರ  ಆತ್ಮಹತ್ಯೆಗೆ ( SDA suicide )ಕಾರಣರಾದವ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.

SDA suicide
SDA suicide

ಬೆಳಗಾವಿ ತಹಶೀಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಇವರು ನವೆಂಬರ್ 5ರಂದು ತಾಲೂಕು ಕಚೇರಿಯ ತಹಶೀಲ್ ಚೇಂಬರ್ ನಲ್ಲಿಯ ಪ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ನೌಕರ ರುದ್ರಣ್ಣ ಆತ್ಮಹತ್ಯೆಗೂ ಮುನ್ನ ಕಚೇರಿಯ ವಾಟ್ಸಪ್ ಗ್ರೂಪ್‌ನಲ್ಲಿ ತನ್ನ ಸಾವಿಗೆ ತಹಶೀಲ್ದಾರರಾದ ಬಸವರಾಜ ನಾಗರಾಳ, ಸಿಬ್ಬಂದಿ ಅಶೋಕ ಕಬ್ಬಲಗೇರಿ ಮತ್ತು ಸೋಮು ಎಂಬುವವರು ಕಾರಣರೆಂದು ಮೆಸೇಜ್ ಮಾಡಿದ್ದಾರೆ. ತಹಶೀಲ್ದಾರರು ಒಂದು ವರ್ಷದಿಂದ ಕಿರುಕುಳ ನೀಡುತ್ತಿರುವಂತೆ ಹೇಳಿಕೊಂಡಿದ್ದಾರೆ. ಮೃತ ನೌಕರರಾದ ರುದ್ರಣ್ಣ ಯಡವಣ್ಣವರ ಇವರ ಸಾವಿನ ಕುರಿತು ನ್ಯಾಯೋಚಿತ ತನಿಖೆ ಕೈಗೊಂಡು ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

SDA suicide

ಅಷ್ಟೇ ಅಲ್ಲದೆ, ಕಂದಾಯ ಇಲಾಖೆಗಳಲ್ಲಿ ನೌಕರರು ಸಂಖ್ಯಾ ಬಲದಲ್ಲಿ ಕಡಿಮೆ ಇದ್ದಾರೆ. ಹೆಚ್ಚಿರುವ ಜನಸಂಖ್ಯೆಗೆ ಪೂರಕವಾಗಿ ಹುದ್ದೆಗಳು ಮಂಜೂರಾಗದೇ ಹೆಚ್ಚಿನ ಕೆಲಸದ ಒತ್ತಡವನ್ನು ಅನುಭವಿಸುತ್ತಿದೆ. ಜೊತೆಗೆ ರಾಜ್ಯದ ಸಾಕಷ್ಟು ಕಚೇರಿಗಳಲ್ಲಿ ವಿವಿಧ ಹಂತದ ಮೇಲಾಧಿಕಾರಿಗಳು ಸಾರ್ವಜನಿಕರ ಎದುರಿಗೆ ನೌಕರರನ್ನು ನಿಂದಿಸುವುದು, ವೈಯುಕ್ತಿಕ ಕೆಲಸಗಳಿಗೆ ರಜೆ ನೀಡುವುದನ್ನು ನಿರಾಕರಿಸುವುದು ಮತ್ತು ವೃತ್ತಿಪರ ನೌಕರರಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸಗಳನ್ನು ನೀಡುವುದು, ಇದರಿಂದ ನೌಕರರ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದನ್ನು ಸಾಕಷ್ಟು ನೌಕರರು ಕಂದಾಯ ಇಲಾಖೆಯ ನೌಕರರ ಸಂಘದ ಗಮನಕ್ಕೆ ತಂದು ತಮ್ಮ ಆಳಲನ್ನು ತೊಡಿ ಕೊಂಡಿರುತ್ತಾರೆ ಆದುದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದ ನೌಕರರು ಸಾರ್ವಜನಿಕರ ಎದುರು ಸೌಜನ್ಯದಿಂದ ವರ್ತಿಸುವಂತೆ, ಸಾಮರ್ಥ್ಯವು ಹೆಚ್ಚಿನ ಕೆಲಸದ ಒತ್ತಡವನ್ನು ನೀಡದಂತೆ ಹಾಗೂ ಯಾವುದೇ ರೀತಿಯ ಕಿರಕುಳ ನೀಡದಂತೆ ಸರ್ಕಾರದಿಂದ ಆದೇಶ ಹೊರಡಿಸುವಂತೆ ಆಗ್ರಹಿಸಿದರು.

ಈ ವೇಳೆ ಕಂದಾಯ ಇಲಾಖೆ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ ನಾಯಕ, ಪದಾಧಿಕಾರಿಗಳಾದ ತುಳಜಾರಾಮಸಿಂಗ್, ಎಸ್.ಮುಗದುಮ್, ಅಮರೇಶ ಶೇಕಣ್ಣನವರ್, ಅಮರೇಶ, ಬಸವರಾಜ, ಮಲ್ಲಿಕಾರ್ಜುನ, ಕಿರಣ್, ಸೌಮ್ಯ, ಶಿವಕುಮಾರ ದೇಸಾಯಿ, ಪೂರ್ಣಿಮಾ, ವಿನಯಕುಮಾರ, ಹನುಮಂತ, ಮಹೇಶ, ಟಿ.ಎಲ್.ತಿಮ್ಮಪ್ಪ, ಮಂಜುನಾಥ, ಮುಂಕದರಾವ್, ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!