ಬ್ಯಾಂಕ್ ನಲ್ಲಿ 7000 ಕೋಟಿ ರೂಪಾಯಿ ಇಟ್ಟಿರುವ ಈ ಹಳ್ಳಿ ಜನ..!
ಸುದ್ದಿ ದುನಿಯಾ ವಿಶೇಷ (ಲಿಂಗಸುಗೂರು) : 1200 ಕುಟಂಬಗಳು ವಾಸ ಇರುವ ಈ ಹಳ್ಳಿ ಏಷ್ಯದಲ್ಲಿಯೇ ಅತ್ಯಂತ ಶ್ರೀಮಂತ ಹಳ್ಳಿ (Richest village )ಎಂಬ ಕೀರ್ತಿಗೆ ಪಾತ್ರವಾಗಿದೆ, ಹಾಗಾದರೆ ಆ ಹಳ್ಳಿ ಯಾವುದು, ಯಾವ ರಾಜ್ಯದಲ್ಲಿ ಇದೆ ನೋಡೋಣ ಬನ್ನಿ.
ಉದ್ಯೋಗ ಅರಸಿ ಹಳ್ಳಿಯಿಂದ ಪಟ್ಟಣಕ್ಕೆ ಹೋದ ಮೇಲೆ ಹಳ್ಳಿಗಳು ಅಕ್ಷರಶಃ ವೃದ್ಧಾಶ್ರಮಗಳಾಗಿ ಬದಲಾಗುತ್ತಿವೆ, ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ಉತ್ತಮ ಆರ್ಥಿಕವಾಗಿ ಸ್ಥಿತಿವಂತರಾದ ಕೂಡಲೇ ತಮ್ಮ ಹಳ್ಳಿಯನ್ನೇ ಮರೆತು ಬಿಡುವ, ಹಳ್ಳಿ ಕಡೆಗೆ ತಿರುಗಿ ನೋಡದ ಕಾಲಘಟ್ಟದಲ್ಲಿ ಕೂಡಾ ತಾವು ವಿದೇಶಿಯಲ್ಲಿದ್ದರೂ ದೊಡ್ಡಮಟ್ಟದ ಉದ್ದಿಮೆದಾರರಾಗಿ ಬೆಳೆದರೂ ತಮ್ಮ ಸ್ವಗ್ರಾಮದ ನಂಟು ಬಿಡದೇ ಹುಟ್ಟಿದ ಹಳ್ಳಿಯನ್ನು ಶ್ರೀಮಂತ ಹಳ್ಳಿ ( Richest village )ಎಂಬ ಪಟ್ಟಕ್ಕೇರಿಸುವ ಕೆಲಸ ಈ ಹಳ್ಳಿಗರು ಮಾಡಿದ್ದಾರೆ.
ಮಾಧಾಪರ್ :
“ ಮಾಧಾಪರ್” ಗುಜರಾತ್ ರಾಜ್ಯದ ಕಚ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ, ಈ ಪುಟ್ಟ ತನ್ನತ್ತ ಸೆಳೆಯುವಂತೆ ಮಾಡಿದೆ ಇದು ಏಷ್ಯದಲ್ಲಿಯೇ ಶ್ರೀಮಂತ ಹಳ್ಳಿ ( Richest village )ಎಂಬ ಕೀರ್ತಿಗೆ ಪಾತ್ರವಾಗಿದೆ. ಪಟೇಲ್ ಸಮುದಾಯದವರೇ ಹೆಚ್ಚಿರುವ ಈ ಗ್ರಾಮದಲ್ಲಿ 2011ರಲ್ಲಿ 17 ಸಾವಿರ ಜನಸಂಖ್ಯೆ ಇತ್ತು. ಇದೀಗ 32 ಸಾವಿರ ಜನರು ವಾಸವಿದ್ದಾರೆ. ಇಲ್ಲಿರುವ 1200 ಕುಟಂಬಗಳು ವಿವಿಧ ದೇಶದಲ್ಲಿ ಕಟ್ಟಡ ನಿರ್ಮಾಣ ಉದ್ಯಮದರಾಗಿದ್ದಾರೆ. ದೊಡ್ಡ ಉದ್ದಿಮೆದಾರರಾಗಿದ್ದರೂ ಕೂಡಾ ತಮ್ಮ ಸ್ವಾಗ್ರಾಮದ ನಂಟು ಮಾತ್ರ ಬಿಟ್ಟಿಲ್ಲ, ಈಗಾಗಿ ಮಾಧಾಪರ್ ಶ್ರೀಮಂತ ಹಳ್ಳಿಯಾಗಲು (Richest village )ಸಾಧ್ಯವಾಗಿದೆ.
ಕೆಲವು ದಶಕಗಳ ಹಿಂದೆ ಸಾಮಾನ್ಯ ಹಳ್ಳಿಗಳಂತೆ ಇಲ್ಲಿಯೂ ನಿರುದ್ಯೋಗ ಸಮಸ್ಯೆ ಇತ್ತು, ವ್ಯಾಪಾರವನ್ನೇ ಅವಲಂಬಿಸಿರುವ ಇಲ್ಲಿಯ ಜನರು, ಉದ್ಯೋಗ ಅರಸಿ ವಿವಿಧ ದೇಶಗಳಿಗೆ ತೆರಳಬೇಕಾಯಿತು. ಇನ್ನೂ ಕೆಲವರು ಗ್ರಾಮಗಳಲ್ಲಿ ವಿವಿಧ ವ್ಯಾಪಾರ ಮಾಡುತ್ತಾ ತಮ್ಮ ಜೀವನ ನಡೆಸಿದ್ದಾರೆ. ವಿದೇಶದಲ್ಲಿ ಕಟ್ಟಡ ನಿರ್ಮಾಣ ಉದ್ದಿಮೆಯಲ್ಲಿ ಉತ್ತಮ ಸಾಧನೆ ಮಾಡಿ ಆರ್ಥಿಕವಾಗಿ ಸದೃಢರಾಗಿದ್ದರೂ ಕೂಡಾ ತಾವು ಹುಟ್ಟಿದ ಹಳ್ಳಿಯೊಂದಿಗಿನ ಸಂಬಂಧವನ್ನು ಯಾವತ್ತೂ ಕಡಿದುಕೊಳ್ಳಲಿಲ್ಲ. ವಿದೇಶದಲ್ಲಿದ್ದರೂ ತಮ್ಮ ಉಳಿತಾಯ ಹಣವನ್ನು ಮಾಧಾಪರ್ ಗ್ರಾಮದಲ್ಲಿರುವ ಅಂಚೆ ಕಚೇರಿ ಹಾಗೂ ಬ್ಯಾಂಕ್ ಗಳಲ್ಲಿ ಠೇವಣಿ ಮಾಡಿದ್ದಾರೆ. ಮಾಧಾಪರ್ ಗ್ರಾಮವು ಕಚ್ ಜಿಲ್ಲೆಯ ಕುಗ್ರಾಮವಾಗಿತ್ತು. ಆದರೆ ಭುಜ್‌ನ ಹೊರವಲಯದಲ್ಲಿರುವ ಈ ಗ್ರಾಮವನ್ನು ಇಲ್ಲಿನ ಜನರು ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿಯನ್ನಾಗಿ (Richest village )ಮಾಡಿದ್ದಾರೆ.
7 ಸಾವಿರ ಕೋಟಿ ರೂ.ಠೇವಣಿ :
ಮಾಧಾಪರ್ ಗ್ರಾಮದದವರು ಅಮೆರಿಕ, ಯುಕೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರೀಕಾ, ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಕಟ್ಟಡ ನಿರ್ಮಾಣ ಉದ್ಯೋಗ ಸೇರಿ ಇನ್ನಿತರ ಉದ್ಯೋಗ ಮಾಡುತ್ತಿರುವ ಈ ಹಳ್ಳಿ ಜನರು ತಮ್ಮ ದುಡಿಮೆಯ ಶೇ.70ಕ್ಕೂ ಅಧಿಕ ಹಣವನ್ನು ತಮ್ಮ ಮತ್ತು ತಮ್ಮ ಕುಟಂಬಸ್ಥರ ಹೆಸರಿನಲ್ಲಿ ಮಾಧಾಪರ್ ಗ್ರಾಮದಲ್ಲಿರುವ ವಿವಿಧ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಖಾತೆ ತೆಗೆದು ಠೇವಣಿ ಮಾಡಿದ್ದಾರೆ. ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ಠೇವಣಿ ಮಾಡಿದ್ದಾರೆ.
ಪ್ರತಿಷ್ಠಿತ 17 ಬ್ಯಾಂಕ್ ಇಲ್ಲಿವೆ :
ಮಾಧಾಪರ್ ಗ್ರಾಮದಲ್ಲಿ ರಾಷ್ಟ್ರದ ಪ್ರತಿಷ್ಠಿತ 17 ರಾಷ್ಟ್ರೀಕೃತ ಬ್ಯಾಂಕ್ ಗಳಿವೆ. ಆಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ , ಹೆಚ್‍ಡಿಎಫ್‍ಸಿ, ಐಸಿಐಸಿ, ಎಸ್‍ಬಿಐ, ಪಿಎನ್‍ಬಿ ಸೇರಿದಂತೆ ಒಟ್ಟು 17 ಬ್ಯಾಂಕ್ ಗಳಿವೆ. ಎಲ್ಲಾ ಬ್ಯಾಂಕ್ ಗಳಲ್ಲಿ ಮಧಾಪುರ ಹಳ್ಳಿಯ ಜನರು 7000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದಾರೆ. ಗ್ರಾಮದಲ್ಲಿ ತೆರೆದಿರುವ ಈ ಬ್ಯಾಂಕ್‌ಗಳ ವಾರ್ಷಿಕ ವಹಿವಾಟು ಅನೇಕ ಮಹಾನಗರಗಳಲ್ಲಿ ವಾರ್ಷಿಕ ವಹಿವಾಟಿಕ್ಕಿಂತ ಹೆಚ್ಚಾಗಿದೆ.
ನಗರಕ್ಕೆ ಸ್ಪರ್ದೆ ಮಾಡುತ್ತಿರುವ ಮಧಾಪುರ :
7000ಕ್ಕೂ ಅಧಿಕ ಕೋಟಿ ರೂಪಾಯಿ ಮೊತ್ತದ ಠೇವಣಿಯಿಂದಲೇ ಗ್ರಾಮ ಶ್ರೀಮಂತವಾಗಿದೆ. ಬ್ಯಾಂಕ್ ನಲ್ಲಿ ತಮ್ಮ ಹೆಸರಿನಲ್ಲಿ ಠೇವಣಿ ಇಟ್ಟಿದ್ದಲ್ಲದೆ ಗ್ರಾಮದಲ್ಲಿ ರಸ್ತೆ ನಿರ್ಮಾಣ, ಕುಡಿವ ನೀರು, ನೈರ್ಮಲ್ಯೀಕರಣ, ಸುಸಜ್ಜಿತ ಸರ್ಕಾರಿ ಶಾಲೆ ನಿರ್ಮಾಣ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಿಗಾಗಿ ದೇಣಿಗೆ ನೀಡಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ನಗರ ಪ್ರದೇಶದಲ್ಲಿರುವಂತಹ ನೀರು, ರಸ್ತೆ ವ್ಯವಸ್ಥೆ, ದೊಡ್ಡ ದೊಡ್ಡ ಬಂಗಲೆಗಳು, ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೆರೆ, ದೇವಸ್ಥಾನ ಹೀಗೆ ಜನರ ದೈನಂದಿನ ಜೀವನಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಮಧಾಪುರ ಗ್ರಾಮದಲ್ಲಿ ಕಾಣಬಹುದಾಗಿದೆ. ನಿರುದ್ಯೋಗ ಸಮಸ್ಯೆ ಇದ್ದ ಈ ಗ್ರಾಮದಲ್ಲಿ ಉದ್ಯೋಗವಕಾಶಗಳು ಲಭ್ಯವಾಗುವ ಜೊತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಉದ್ಯಮಿಗಳ ಹಾಗೂ ಶ್ರೀಮಂತರ ತವರಾಗಿದ್ದರಿಂದ ಈ ಗ್ರಾಮವು ಹಲವು ನಗರಗಳೊಂದಿಗೆ ಸ್ಪರ್ಧೆಯಲ್ಲಿದೆ.