suddiduniya.com

Kalaberake Sendi : ಕಲಬೆರಕೆ ಶೇಂದಿ ಮಾರಾಟ ದಂದೆ ಮೇಲೆ ರೈಡ್‍

Kalaberake Sendi

ರಾಯಚೂರು: ಬೀದರ್- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅಕ್ರಮ ಸಿಎಚ್ ಪೌಡರ್, ಕಲಬೆರಕೆ ಶೇಂದಿ (Kalaberake Sendi )ಮಾರಾಟ ಮಾಡಲು ಯತ್ನಿಸಿದ್ದ ದಂದೆ ಮೇಲೆ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಆರು ಜನ ಆರೋಪಿಗಳನ್ನು ಬಂಧಿಸಿ 150 ಲೀಟರ್ ಕಲಬೆರಕೆ ಶೇಂದಿ( Kalaberake Sendi ) ಜಪ್ತಿ ಮಾಡಿಕೊಂಡಿದ್ದಾರೆ.

Kalaberake Sendi

ಬಂಧಿತ ಆರೋಪಿಗಳನ್ನು ಬಸವರಾಜ, ಶ್ರೀಕಾಂತ್, ಶಿವರಾಜ, ತಿಮ್ಮಪ್ಪ, ನರಸಮ್ಮ ಮತ್ತು ಮಾರೆಪ್ಪ ಎಂದು ಹೇಳಲಾಗಿದೆ. ತೆಲಂಗಾಣದ ಕೃಷ್ಣಾದಿಂದ ರಾಯಚೂರಿಗೆ ಕಲಬೆರಕೆ ಶೇಂದಿ ಮಾರಾಟ ಮತ್ತು ಸಾಗಣೆ ಮಾಡಲು ಮುಂದಾಗಿದ್ದು, ಖಚಿತ ಮಾಹಿತಿ ಮೇರೆಗೆ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ, ಬಾಟಲಿಗಳಲ್ಲಿ ತುಂಬಿರುವ 150 ಲೀಟರ್ ಶೇಂದಿ ವಶಕ್ಕೆ ಪಡೆದುಕೊಳ್ಳಲಾಗಿದೆ.

 ಬೀದಿ ನಾಯಿ ದಾಳಿಗೆ ಬಾಲಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ತಾಲೂಕಿನ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಬಾಲಕನನ್ನು ದೇವಸುಗೂರು ಗ್ರಾಮದ ನಿವಾಸಿ ರಾಮು ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಬಾಲಕನು ಮನೆಗೆ ಹೋಗುತ್ತಿದ್ದ ವೇಳೆ ಏಕಾಏಕಿ ಹುಚ್ಚು ನಾಯಿ ದಾಳಿ ಮಾಡಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ನೋಡಿ ನಾಯಿಯನ್ನು ಓಡಿಸಿ, ಬಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಯಲ್ಲಿ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಒಂದು ವಾರದಲ್ಲಿ ರಾಯಚೂರು ನಗರದಲ್ಲಿ ಬೀದಿ ನಾಯಿಗಳು ಕಡಿತದಿಂದ ಮೂವರಿಗೆ ಗಂಭೀರ ಗಾಯಗೊಂಡು ಘಟನೆ ಕೂಡ ನಡೆದಿತ್ತು.

 ರಾಯಚೂರು ನಗರದ ಹೊರವಲಯದ ಮಲಿಯಬಾದ್ ಗ್ರಾಮದ ಗುಡ್ಡದಲ್ಲಿ ರಾತ್ರಿ ಚಿರತೆ ದಾಳಿಗೆ ಎರಡು ಕರುಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮಲಿಯಾಬಾದ್ ಗ್ರಾಮದ ನಿವಾಸಿ ಈರೇಶ ಎಂಬುವವರಿಗೆ ಸೇರಿದ ಎರಡು ಕರುಗಳು ಸಾವನ್ನಪ್ಪಿವೆ. ಮಂಗಳವಾರ ಕರುಗಳ ಮೇಲೆ ದಾಳಿಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುವ 10 ಜನರ ತಂಡ ಮಲಿಯಾಬಾದ್ ಅರಣ್ಯ ಪ್ರದೇಶದ ಬಳಿ ಬಿಡಾರ ಹೂಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಗುಡ್ಡದ ಬಳಿ ಅನವಶ್ಯಕವಾಗಿ ಓಡಾಡಬಾರದು. ಜಾನುವಾರುಗಳ ಮಾಲೀಕರು ರಾತ್ರಿ ವೇಳೆ ದನಕರುಗಳನ್ನು ಮನೆಯ ಜಮೀನಿನಲ್ಲಿ ಕಟ್ಟಬೇಕು ಎಂದು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

   
Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!