suddiduniya.com

cricket :ರಾಷ್ಟ್ರಮಟ್ಟದ ಕ್ರಿಕೆಟ್‍ ಪಂದ್ಯಾವಳಿಗೆ ನಾಲ್ಕು ವಿದ್ಯಾರ್ಥಿಗಳು ಆಯ್ಕೆ

cricket :

ಲಿಂಗಸುಗೂರು : 14 ಮತ್ತು 17 ವಯೋಮಿತಿ ಬಾಲಕರ ಕ್ರಿಕೆಟ್‍ ( cricket )ಪಂದ್ಯಾವಳಿಯ ರಾಷ್ಟ್ರಮಟ್ಟದ ತಂಡಕ್ಕೆ ರಾಯಚೂರು ಜಿಲ್ಲೆಯ ನಾಲ್ಕು ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ ಉಪನಿರ್ದೇಕರ ಕಚೇರಿ ಹಾಗೂ ಚಿಕ್ಕೂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗೋಕಾಕ ಪ್ರಾಥಮಿಕ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರದಲ್ಲಿ  ಚಿಕ್ಕೂಡಿಯಲ್ಲಿ ನಡೆದ ನವೆಂಬರ್ 05, 06 ರವರಿಗೆ ನಡೆದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ರಾಜ್ಯಮಟ್ಟದ ಕ್ರಿಕೇಟ್ (cricket ) ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಆಟ ಪ್ರದರ್ಶನ ನೀಡಿದ ಲಿಂಗಸುಗೂರು ತಾಲೂಕಿನ 3 ಜನ ಹಾಗೂ ಮಾನವಿ ತಾಲೂಕಿನ ಒಬ್ಬ ವಿದ್ಯಾರ್ಥಿ ಒಟ್ಟು ನಾಲ್ಕು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಎಸ್‍.ಬಿ.ಪಬ್ಲಿಕ್ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿ ಜೀವನ್ ಕುಮಾರ್, ಪಟ್ಟಣದ ಆಂಗ್ಲಿಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸ್ಕಂದ.ಎಸ್.ಮೇಟಿ, ಸ್ಪಂದನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಅಭಿಷೆಕ.ಜಿ, ಮಾನವಿ ತಾಲೂಕಿನ ಶೇಖ್ ಮೊಹಮದ್ ಯೂಸಪ್ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

cricket :

ಲಿಂಗಸುಗೂರು ಲೆದರ್ ಬಾಲ್ ಇಂಡಿಯನ್ ಪಬ್ಲಿಕ್  ಕ್ರಿಕೇಟ್ (cricket )ಅಕಾಡೆಮಿ ತರಭೇತದಾರ ಅಹ್ಮದ್ ಖಾದರ್ ಬಾಷ್ ಮತ್ತು ಅಜ್ಮೀರ್ ಅವರ ನೇತೃತ್ವದಲ್ಲಿ ಲಿಂಗಸುಗೂರು ತಾಲೂಕು ಕ್ರೀಡಾಂಗಣದಲ್ಲಿ ಸತತ 13 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರಾಢಶಾಲಾ ವಿದ್ಯಾರ್ಥಿಗಳಿಗೆ  ಉಚಿತ ಕ್ರಿಕೆಟ್ ಕೋಚಿಂಗ್ ನೀಡುತ್ತಿದ್ದಾರೆ. ನಮ್ಮ ಕೋಚಿಂಗ್‌ನ ಆಕಾಡೆಮಿಯಿಂದ ತಾಲೂಕಿನ 3 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ವಿಷಯ, ವಿದ್ಯಾರ್ಥಿಗಳ ಸಾಧನೆಗೆ  ಅಹ್ಮದ್ ಖಾದರ್ ಭಾಷ್ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!