ಆರ್.ಮಾನಸಯ್ಯ ವಿರುದ್ಧ ಅವಹೇಳನ
ಲಿಂಗಸುಗೂರು : ಹಿರಿಯ ಹೋರಾಟಗಾರ ಆರ್.ಮಾನಸಯ್ಯ ಅವರ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ಅವಹೇಳನ ಮಾಡಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಹಾಗೂ ಆರ್.ಮಾನಸಯ್ಯನವರಿಗೆ ಪೊಲೀಸ್ ಬಂದೋಬಸ್ತ್ ನೀಡಬೇಕು ಎಂದು ಆಗ್ರಹಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯಿಂದ ಪಟ್ಟಣದಲ್ಲಿ (TUCI protest )ಪ್ರತಿಭಟನೆ ನಡೆಸಿದರು.
ನವೆಂಬರ್ 16ರಂದು ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ ಮಾಡಿದ ದೇಶ ವಿರೋಧಿ ಹಾಗೂ ಸಂವಿಧಾನ ವಿರೋಧಿ ಭಾಷಣ ಖಂಡಿಸಿ ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಬಿಡುಗಡೆ ಮಾಡಿದ ಹೇಳಕೆ ನಾವು ಸಮರ್ಥಿಸುತ್ತೇವೆ. ಏಕೆಂದರೆ ದಲಿತ, ದುರ್ಬಲ ವರ್ಗಗಳ ಐಕಾನ್ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಂವಿಧಾನ ವಿರೋಧಿ ವಿ.ಡಿ.ಸಾವರ್ಕರ್ ಭಾವಚಿತ್ರದೊಂದಿಗೆ ಹಾಕಿದಲ್ಲದೆ, ದಲಿತ ಸಂಘಟನೆಗಳ ಬಾವುಟ ಬಣ್ಣದ ನೀಲಿ ಚಡ್ಡಿಗಳನ್ನು ತೊಟ್ಟು ಗಣವೇಶದಾರಿ ಪಥಸಂಚಲನ ನಡೆಸಲಾಗಿದೆ.ಇದು ಅಂಬೇಡ್ಕರ್ ಹಾಗೂ ದಲಿತ,ಶೋಷಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇದನ್ನು ವಿರೋಧಿಸಿ ಆರ್.ಮಾನಸಯ್ಯನವರು ಪತ್ರಿಕೆ ಹೇಳಿಕೆ ನೀಡಿದ್ದಾರೆ.
ಶ್ರೀರಾಮಸೇನೆ ಹೇಳಿಕೆ ಸಹಿಸುವುದಿಲ್ಲ :
ಇದನ್ನು ಸಹಿಸದ ಶ್ರೀರಾಮ ಸೇನೆ ಮುಖಂಡರು ಆರ್.ಮಾನಸಯ್ಯನವರ ಅವಹೇಳನ ಮಾಡಿ ಪತ್ರಿಕೆ ಹೇಳಿಕೆ ಹೊರಡಿಸಿ ಅವರ ಗಟ್ಟಿಮುಟ್ಟಾದ ರಾಜಿರಹಿತ ದಲಿತ, ರೈತ ಕಾರ್ಮಿಕ ವರ್ಗದ ಹೋರಾಟಗಳ ವರ್ಚಸ್ಸು ಹಾಳು ಮಾಡಲು ಅವರ ಮೇಲೆ ಇಲ್ಲ-ಸಲ್ಲದ ಪ್ರಚಾರಕ್ಕೆ ಶ್ರೀರಾಮ ಸೇನೆ ಮುಂದಾಗಿದೆ. ಈ ಹಿಂದುತ್ವ ಜಾತಿವಾದಿಗಳ, ದುಷ್ಟ ಪ್ರಚಾರವನ್ನು ನಾವು ಸಹಿಸುವುದಿಲ್ಲ,
ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಿ :
ಆರ್.ಮಾನಸಯ್ಯನವರು ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ವಾರದ ಗಡುವು ನೀಡಲಾಗಿದೆ. ಇಲ್ಲವಾದಲ್ಲಿ ಹಿಂದು ಸಂಘಟನೆಗಳು ಸೇರಿ ಅಣುಕು ಶವ ಸುಟ್ಟು ಪ್ರತಿಭಟಿಸುವ ಹೇಳಿಕೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಿ ಬಂಧಿಸಬೇಕು. ಆರ್.ಮಾನಸಯ್ಯ ಮನೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ.ಅಮೀರ್ ಅಲಿ, ಜಿಲ್ಲಾಧ್ಯಕ್ಷ ಜಿ.ಅಮರೇಶ, ತಿಪ್ಪರಾಜು ಗೆಜ್ಜಲಗಟ್ಟಾ, ಡಿ.ಜಿ.ಶಿವು, ಅಮರೇಗೌಡ ಗುಂತಗೋಳ, ಬಸವರಾಜ ಹಿರೇಹೆಸರೂರು, ಶಾಂತಕುಮಾರ ಚಿಕ್ಕನಗನೂರು, ಹುಲಗಪ್ಪ ಕೊಠಾ, ದೇವಮ್ಮ, ನಸೀರಾಬೇಗಂ, ಕೆ.ಆದಪ್ಪ, ತಿಮ್ಮಣ್ಣ ಪೂಜಾರಿ ಸೇರಿದಂತೆ ಇನ್ನಿತರಿದ್ದರು.