ಲಿಂಗಸುಗೂರಿನಲ್ಲಿ ಬಿಜೆಪಿ ಯುವ ಮೂರ್ಚದಿಂದ ಮೆರವಣಿಗೆ
ಲಿಂಗಸುಗೂರು : ಬಾಂಗ್ಲಾದೇಶದಲ್ಲಿ (Bangladesh )ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ತಾಲೂಕು (BJP) ಬಿಜೆಪಿ ಯುವ ಮೂರ್ಚಾದ ನೇತ್ರತ್ವದಲ್ಲಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಬಸ್ ನಿಲ್ದಾಣ ವೃತ್ತದ ಮಾರ್ಗವಾಗಿ ದೊಡ್ಡ ಹನುಮಂತ ದೇವರ ದೇವಸ್ಥಾನವರಿಗೆ ಮೆರವಣಿಗೆ ನಡೆಸಲಾಯಿತು ನಂತರ ದೊಡ್ಡ ಹನುಮಂತ ದೇವಸ್ಥಾನದಲ್ಲಿ ಬಾಂಗ್ಲಾ ದೇಶದಲ್ಲಿ (Bangladesh )ಹಿಂದೂಗಳಿಗೆ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಿಂದೂಗಳ ರಕ್ಷಣೆಗೆ ಅಗತ್ಯ
ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಬಾಂಗ್ಲಾದೇಶದಲ್ಲಿ (Bangladesh ) ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು ಹಾಗೂ ದೇವಸ್ಥಾನ, ಮಂದಿರಗಳ ಮೇಲೆ ದಾಳಿ ಮಾಡಿ ದೇವರ ಮೂರ್ತಿಗಳನ್ನು ಭಗ್ನಗೊಳಿಸುವ ಕೃತ್ಯಗಳು ನಡೆಯುತ್ತಿರುವುದು ಖಂಡನೀಯ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಹಿಂದೂಗಳ ರಕ್ಷಣೆ ಮಾಡಬೇಕೆಂದರು.
ಬಿಜೆಪಿ ಯುವ ಮುಖಂಡ ಈಶ್ವರ ವಜ್ಜಲ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಹಿಂಸಾಚಾರ ನಿಲ್ಲಬೇಕಾಗಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಳವಳಕಾರಿಯಾಗಿದೆ. ಹಿಂಸಾಚಾರ ನಿಲ್ಲಿಸಲು ಭಾರತ ಸರಕಾರ ಬಾಂಗ್ಲಾದೇಶದ ಆಡಳಿತದ ಜೊತೆ ಮಾತುಕತೆ ನಡೆಸಿ ಶಾಂತಿ ವ್ಯವಸ್ಥೆ ನೆಲಿಸುವಂತೆ ಮಾಡಬೇಕಾಗಿದೆ ಎಂದರು.
ಈ ವೇಳೆ ಬಿಜೆಪಿ ಯುವ ಮೂರ್ಚಾದ ಅಧ್ಯಕ್ಷರಗಳಾದ ಅಜಯಕುಮಾರ ಶಿವಂಗಿ, ಚಂದ್ರುಗೌಡ ಬಯ್ಯಾಪುರ, ಮುಖಂಡರಾದ ವೆಂಕನಗೌಡ ಐದನಾಳ, ದ್ಯಾಮಣ್ಣ ನಾಯಕ, ಚೆನ್ನಬಸವ ಹಿರೇಮಠ, ವೆಂಕನಗೌಡ ಗುಡದನಾಳ, ಅನಂತದಾಸ್, ಸೇರಿದಂತೆ ಅನೇಕರಿದ್ದರು.