suddiduniya.com

Road Accident :ಇಂಜಿನಿಯರ್ ಗಳ ಪಾಲಿಗೆ ಯಮನಾದ ಲಾರಿ..!!

Road Accident

ಸಿಂಧನೂರು : ರಸ್ತೆಯ ಪಕ್ಕದಲ್ಲಿ ನಿಂತಿದ್ದ ನೀರಾವರಿ ಇಲಾಖೆ ಇಬ್ಬರು ಇಂಜಿನಿಯರ್, ಕಂಪ್ಯೂಟರ್ ಆಪರೇಟರ್ ಪಾಲಿಗೆ ಲಾರಿಯೊಂದು ಅಕ್ಷರಃ ಯಮನಾಗಿ ಬಂದು ಪಲ್ಟಿಯಾಗಿ ಇವರ ಮೇಲೆ ಉರುಳಿ ಬಿದ್ದು ಈ ಮೂರು ಜನ ಸ್ಥಳದಲ್ಲಿಯೇ ಸಾವುನ್ನಪ್ಪಿದ ಘಟನೆ (Road Accident ) ಸೋಮವಾರ ರಾತ್ರಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪ್ ಬಳಿ ನಡೆದಿದೆ.

ನೀರಾವರಿ ಇಲಾಖೆಯ ಜವಳಗೇರಾ ಉಪವಿಭಾಗದ ಕಿರಿಯ ಇಂಜಿನಿಯರ್ ಗಳಾಗಿದ್ದ ಶಿವಕುಮಾರ ಕುರಿ (28), ಮಲ್ಲಿಕಾರ್ಜುನ ದಿನ್ನಿ (29) ಕಂಪ್ಯೂಟರ್ ಆಪರೇಟರ್ ಮಹೆಬೂಬು (30) ಇವರು ಸ್ಥಳದಲ್ಲಿಯೇ ಸಾವುನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಜವಳಗೇರಾದಲ್ಲಿನ ತಮ್ಮ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದು, ಪಿಡಬ್ಲ್ಯೂಡಿ ಕ್ಯಾಂಪಿನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿ ಬೈಕ್ ನಲ್ಲಿ ಮೂವರು ಮಾತನಾಡುತ್ತಾ ನಿಂತಿದ್ದ ಸಂದರ್ಭದಲ್ಲಿ ಭತ್ತದ ಹೊಟ್ಟಿನ ಮೂಟೆ ತುಂಬಿಕೊಂಡು ಅತಿವೇಗದಿಂದ ಬಂದ ಲಾರಿಯೊಂದು (Road Accident ) ಇವರ ಬಳಿ ಬಂದು ಏಕಾಏಕಿಯಾಗಿ ಪಲ್ಟಿಯಾಗಿ ಇವರ ಮೇಲೆ ಉರುಳಿ ಬಿದ್ದಿದ್ದರಿಂದ ಭತ್ತದ ಹೊಟ್ಟಿನ ಮೂಟೆಗಳ ಚೀಲಗಳ ಮಧ್ಯೆ ಸಿಲುಕಿ ಈ ಮೂವರು ಸಾವುನ್ನಪ್ಪಿದ್ದಾರೆ.

Road Accident

ಪಲ್ಟಿಯಾದ ಲಾರಿಯಿಂದ ನೆಲಕ್ಕುರುಳಿದ್ದ ನೂರಾರು ಭತ್ತದ ಹೊಟ್ಟಿನ ಚೀಲಗಳ ಮಧ್ಯೆ ಸಿಲುಕಿ ಮೃತರಾದ ಇಬ್ಬರು ಇಂಜಿನಿಯರ್ ಹಾಗೂ ಒಬ್ಬ ಕಂಪ್ಯೂಟರ್ ಆಪರೇಟರ್ ಮೃತದೇಹ ಹೊರ ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಟ್ಟು ಕೊನೆಗೆ ಜೆಸಿಬಿ ಸಹಾಯದಿಂದ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ನಗರ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ ದೌಡಾಯಿಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಲಾರಿ ಅಪಘಾತದಲ್ಲಿ ಸಾವುನ್ನಪ್ಪಿದ ಇಬ್ಬರು ಇಂಜಿನಿಯರ್ ಗಳು ಲಿಂಗಸುಗೂರು ತಾಲೂಕಿನವರಾಗಿದ್ದಾರೆ. ಶಿವಕುಮಾರ ಶೇಖರಪ್ಪ ಕುರಿ ಇವರು ಲಿಂಗಸುಗೂರು ತಾಲೂಕಿನ ರಾಂಪುರ(ನ), ಗ್ರಾಮದವರು, ಮಲ್ಲಿಕಾರ್ಜುನ ದಿನ್ನಿ ಇವರು ಸರ್ಜಾಪುರ ಗ್ರಾಮದವರಾಗಿದ್ದಾರೆ. ಇವರ ಅಕಾಲಿಕ ಮರಣ ಕುಟಂಬದಲ್ಲಿ ಹಾಗೂ ಗ್ರಾಮದಲ್ಲಿ ದುಖಃದ ಮಡುವು ಕಟ್ಟಿದೆ. ಶಿವಕುಮಾರ ಕುರಿ ಇತ್ತೀಚಿಗೆ ಪಿಎಸ್‍ಐ ಆಗಿ ಆಯ್ಕೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಬದುಕಿ ಬಾಳಬೇಕಾಗಿದ್ದ ಈ ಮೂವರ ಪಾಲಿಗೆ ಲಾರಿಯೇ ಯಮದೂತನಾಗಿ ಬಂದು ಜೀವ ತೆಗೆದುಕೊಂಡಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!