suddiduniya.com

Jagdish Sharma sampa : ಮಹಾಭಾರತ ಪ್ರತಿಯೊಬ್ಬ ಭಾರತೀಯನ ಚರಿತ್ರೆ

Jagdish Sharma sampa

ಲಿಂಗಸುಗೂರು : ಮಹಾಭಾರತ ಪುರಾತನ ಗ್ರಂಥವಲ್ಲದೇ ಪ್ರತಿಯೊಬ್ಬ ಭಾರತೀಯನ ಚರಿತ್ರೆಯಾಗಿದೆ ಎಂದು ವಿದ್ವಾನ್ ಜಗದೀಶ ಶರ್ಮಾ ಸಂಪ (Jagdish Sharma sampa )ಹೇಳಿದರು.

ಪಟ್ಟಣದ ವಿವಿ ಸಂಘದ ಬಸವಸಭಾಂಗಣದಲ್ಲಿ ವಿವಿ ಸಂಘ ಹಾಗೂ ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವ್ಯಾಸ ಪ್ರಣೀತ ಅನ್ವಯಿಕ ಮಹಾಭಾರತ ಒಂದು ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಹೆಸರಿನಲ್ಲಿ ಪುರಾತನ ಗ್ರಂಥ ಅದುವೇ ಮಹಾಭಾರತ, ಈ ರೀತಿ ದೇಶದ ಹೆಸರಿನಲ್ಲಿರುವ ಗ್ರಂಥ ಬೇರೆ ದೇಶಗಳಲ್ಲಿ ಇಲ್ಲ, ಮಹಾಭಾರತ 5000 ವರ್ಷಗಳ ಹಿಂದೆ ನಡೆದ ಚರಿತ್ರೆಯಾಗಿದೆ. ಮಹಾಭಾರತ ಗ್ರಂಥದ ಹಿನ್ನಲೆ ಬಗ್ಗೆ ಅನೇಕ ಇತಿಹಾಸಕಾರರು ತಮ್ಮದೇ ರೀತಿಯಲ್ಲಿ ವ್ಯಾಕ್ಯಾನಿಸಿದ್ದಾರೆ. ಒಂದು ಲಕ್ಷ ಶ್ಲೋಕ ಇರುವ ಬೃಹತ್ ಗ್ರಂಥವೇ ಮಹಾಭಾರತವಾಗಿದೆ. ಭಾರತೀಯನ ಪ್ರತಿಯೊಬ್ಬರ ಚರಿತ್ರೆಯೇ ಮಹಾಭಾರತವಾಗಿದೆ ಎಂದರು.

Jagdish Sharma sampa

ಮಹಾಭಾರತ ಕೃತಿಯ ಒಳಗಿನ ಹಾಗು ಹೊರಗಿನ ಸಾಕ್ಷಿಗಳ ಆಧಾರದಲ್ಲಿ ಗಮನಿಸಿದಾಗ ಮಹಾಭಾರತ ನಿಜವಾಗಿ ನಡೆದ ಕಥೆ ಎನ್ನುವುದು ಸ್ಪಷ್ಟವಾಗಿ ನಮ್ಮ ಅರಿವಿಗೆ ಬರುತ್ತದೆ. ಮಹಾಭಾರತ ಹೆಸರಿಸುವ ಎಲ್ಲಾ ಊರುಗಳು ಉತ್ತರಭಾರತ ಇಂದಿಗೂ ಇವೆ. ಮಹಾಭಾರತದಲ್ಲಿ ನಡೆದಿರುವ ಘಟನೆಗಳು ಇಂದು ಕುರುಹುಗಳಾಗಿ ಅಲ್ಲಿವೆ. ಶೇ.90ರಷ್ಟ ಆಗಿನ ಹೆಸರುಗಳೇ ಇನ್ನೂ ಚಾಲ್ತಿಯಲ್ಲಿವೆ. ಆಗಿನ ಇಂದ್ರಪ್ರಸ್ಥ ಈಗಿನ ದೆಹಲಿಯಾಗಿದೆ. 18ದಿನಗಳ ನಡೆದ ಕುರುಕ್ಷೇತ್ರ ಯುದ್ಧ ನಡೆದ ಸ್ಥಳ ಇಂದಿಗೂ ಕಾಣಸಿಗುತ್ತೆ ಹರಿಯಾಣದ ಕುರುಕ್ಷೇತ್ರ ಇಂದು ಜಿಲ್ಲಾಕೇಂದ್ರವಾಗಿದೆ ಮಹಾಭಾರತದಲ್ಲಿ ನಡೆದ ಘಟನೆಗಳು ಇನ್ನೂ ಜೀವಂತವಾಗಿದೆ ಎಂದರು.

ಮಹಾಭಾರತದ ಸನ್ನಿವೇಶಗಳು ನಮ್ಮ ವಾಸ್ತವದ ನಿತ್ಯದ ಬದುಕಿನಲ್ಲಿ ನಡೆಯುತ್ತಿವೆ. ನಾವೇ ಕಾಲಿಟ್ಟು ಜಾರಿ ಪಾಠ ಕಲಿಯಬಾರದು, ಬೇರೆಯವರು ಜಾರಿದಾಗ ಅದನ್ನು ನೋಡಿ ಪಾಠ ಕಲಿತು ಬದುಕು ನಡೆಸುವ ಇಂತಹ ಪಾಠಗಳು ಮಹಾಭಾರತದಲ್ಲಿವೆ. ಮಹಾಭಾರತ ಅಂದಿಗೂ ಇಂದಿಗೂ ಸಲ್ಲುವ ಕೃತಿಯಾಗಿದೆ. ಮಹಾಭಾರತ ಪ್ರತಿ ವ್ಯಕ್ತಿಯಲ್ಲಿ ಸಿಗುತ್ತೆ ಎಂದರು. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ನಾವಾಗಿದ್ದೇವೆ ಎಂದರು.

Jagdish Sharma sampa

ಮಹಾಭಾರತದ ಸರ್ವಕಾಲಿಕ ಸತ್ಯದರ್ಶನದ ವಿಷಯದ ಕುರಿತು ಉಪನ್ಯಾಸ ನೀಡಿದ ಬಾಗಲಕೋಟೆ ನಾಗಸಂಪಿಗೆ ವಿದ್ವಾನ್ ಬಿಂದು ಮಾಧವಾಚಾರ್ಯರು, ಮಹಾಭಾರತ ಸರ್ವಾಕಾಲಿಕವಾದ ಮಹತ್ವ ನೀಡುವ ಕೃತಿಯಾಗಿದೆ ಇದಕ್ಕೆ ಸಮಾನವಾದ ಕೃತಿ ಮತ್ತೊಂದಿಲ್ಲ, ನಮ್ಮ ಜೀವನದಲ್ಲಿ ನಾನು, ನನ್ನಿಂದ ಎನ್ನುವ ಅಹಂಕಾರ ಬಿಟ್ಟು ಸನ್ಮಾರ್ಗದಿಂದ ನಡೆಯುವಂತಹ ಎಲ್ಲಾ ಅಂಶಗಳು ಮಹಾಭಾರತದಲ್ಲಿವೆ ಎಂದರು. ಮಹಾಭಾರತಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದು ಶಂಕರಚಾರ್ಯರು, ಭಗವದ್ಗೀತೆ ಹಾಗೂ ವಿಷ್ಣುಸಹಸ್ರನಾಮಗಳು ಮಹಾಭಾರತದಲ್ಲಿನ ಅಂತರ್ಗತವಾದ ಕಣ್ಣುಗಳು. ವಿಷ್ಣುಸಹ್ರಸನಾಮಕ್ಕೆ ಮೊಟ್ಟಮೊದಲು ಸಂಸ್ಕೃತದಲ್ಲಿ ವ್ಯಾಖ್ಯಾನ ಮಾಡಿದ್ದು ಶಂಕರಚಾರ್ಯರು ಎಂದರು.ಇರುವ ಸತ್ಯವನ್ನೇ ತಿಳಿಸುವುದೇ ಇತಿಹಾಸ ಅಂತಹ ಮಹಾನ್ ಇತಿಹಾಸವೇ ಮಹಾಭಾರತವಾಗಿದೆ. ಮಹಾಭಾರತದ ಬಗ್ಗೆ ಇಂದಿನ ಯುವ ಪೀಳಿಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿರುವುದು ಶ್ಲಾಘನೀಯ ಎಂದರು.

Jagdish Sharma sampa

ಸಮಾರಂಭದಲ್ಲಿ ಕಜ್ಜಿಡೋಣಿ ಶಂಕರಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶರಣರು, ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‍,ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಬಸವಂತರಾಯ ಕುರಿ, ಪುಟ್ಟರಾಜ ಗವಾಯಿ ಶಿಷ್ಯ ವೃಂದರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು, ವಿರೇಶ ಪವಾರ್ ಸ್ವಾಗತಿಸಿದರು,ಡಾ.ಸಿ.ಬಿ.ಚಿಲ್ಕರಾಗಿ ವಿದ್ವಾಂಸರ ಕಿರುಪರಿಚಯ ನೀಡಿದರು, ಶರಣಗೌಡ ಅಗಸಿಮಂದಿನ ಕಾರ್ಯಕ್ರಮ ನಿರ್ವಹಿಸಿದರೆ ಶೇಖರಪ್ಪ ಪಿರಡ್ಡಿ ವಂದಿಸಿದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!