suddiduniya.com

Priyank Kharge :ಪ್ರೀಯಾಂಕ್ ಖರ್ಗೆ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ

Priyank Kharge

ಲಿಂಗಸುಗೂರು : ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಸಚಿವ ಪ್ರೀಯಾಂಕ್ ಖರ್ಗೆಗೂ (Priyank Kharge )ಸಂಬಂಧವೇ ಇಲ್ಲ, ಈ ಪ್ರಕರಣದಲ್ಲಿ ಖರ್ಗೆಯವರ ಹೆಸರು ತಳಕು ಹಾಕಿ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಡೆ ಹಾಸ್ಯಾಸ್ಪದವಾಗಿದೆ ಮೇಲಾಗಿ ರಾಜೀನಾಮೆ ಕೇಳುವ ನೈತಿಕತೆಗೆ ಬಿಜೆಪಿಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಆರೋಪಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್‍ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು 138 ಸ್ಥಾನ ನೀಡಿ ಸ್ಪಷ್ಟ ಬಹುಮತ ಹಾಗೂ ಸುಭದ್ರ ಸರಕಾರ ರಚನೆಗೆ ಅವಕಾಶ ನೀಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಿದ್ಧರಾಮಯ್ಯನವರು ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮ್ಯಯ್ಯನವರ ನೇತ್ರತ್ವದ ಕಾಂಗ್ರೆಸ್‍ ಸರಕಾರ ರಾಜ್ಯದಲ್ಲಿ ನೀಡುತ್ತಿರುವ ಪಂಚ ಗ್ಯಾರಂಟಿಗಳ ಜನಪ್ರೀಯತೆ ಸಹಿಸದ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ, ಮಂತ್ರಿ ಮಂಡಲದ ಸಚಿವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸರಕಾರವನ್ನು ಇಕಟ್ಟಿಗೆ ಸಿಲುಕಿಸುವ ಕುತಂತ್ರ ನಡೆಸಿದ್ದಾರೆ, ಆದರೆ ಬಿಜೆಪಿಯ ಕುತಂತ್ರ, ತಂತ್ರಗಳು ಯಶಸ್ವಿಯಾಗುವುದಿಲ್ಲ ಎಂದರು.

ಇತ್ತೀಚಿಗೆ ಕಲಬುರುಗಿಯಲ್ಲಿ ಗುತ್ತೇದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರೀಯಾಂಕ್ ಖರ್ಗೆ (Priyank Kharge )ಅವರ ಹೆಸರನ್ನು ತಳಕು ಹಾಕಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಅವರು ಪದೇ ಪದೇ ಸಚಿವ ಖರ್ಗೆಯವರ ರಾಜಿನಾಮೆಗೆ ಒತ್ತಾಯಿಸುತ್ತಿರುವದು ಹಾಸ್ಯಸ್ಪದವಾಗಿದೆ. ರಾಜೀನಾಮೆ ಕೇಳುವ ನೈತಿಕತೆಗೆ ಬಿಜೆಪಿ ನಾಯಕರಿಗಿಲ್ಲ ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರೀಯಾಂಕ ಖರ್ಗೆಯವರು (Priyank Kharge )ಪ್ರಶ್ನಾತೀತ ನಾಯಕರಾಗಿದ್ದಾರೆ. ಸದಾ ಅಭಿವೃದ್ಧಿಪರ ಚಿಂತನೆಗಳ ಮೂಲಕ ಜನಪರ ಅಭಿವೃದ್ಧಿಪರ ಮುಂದಾಲೋಚನೆ ಯುಳ್ಳುವರಾಗಿದ್ದಾರೆ. ಇ.ಎಸ್.ಐ. ಆಸ್ಪತ್ರೆ 371(ಜೆ) ಜಾರಿ, ಬುದ್ಧ ವಿವಾಹಾರ, ರೇಲ್ವೆ ಬಿಡಿ ಭಾಗ ತಯಾರಿಕೆ ಫ್ಯಾಕ್ಟರಿ, ಹೈಕೋರ್ಟ, ಜಯದೇವ ಆಸ್ಪತ್ರೆ ಸೇರಿ ಸಾವಿರಾರು ಗುರುತರ ಕಾಮಗಾರಿಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಂತಹ ನಾಯಕರನ್ನು ಮುಂದೆ ರಾಜ್ಯದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಬರುತ್ತಾರೆ ಎಂದು ಸಹಿಸದೇ ಬಿ.ಜೆ.ಪಿ.ಯು ಯಾವುದೇ ಪ್ರಕರಣ ಸಂಬಂಧವಿರದೇ ಪ್ರೀಯಾಂಕ ಖರ್ಗೆಯವರಿಗೆ ತಳಕು ಹಾಕುತ್ತಾ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದರು. ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಸಿಐಡಿಗೆ ಒಪ್ಪಿಸಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರಿಗೆ ಶಿಕ್ಷೆ ಯಾಗುವುದು ಖಚಿತವಾಗಿದೆ.

ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿಯವರು ಈ ಮುಂಚೆ ಕಾಂಗ್ರೇಸ್ ಪಕ್ಷದಲ್ಲಿದ್ದು, ಅಧಿಕಾರದ ಆಸೆಗೆ ಬಿ.ಜೆ.ಪಿ.ಪಕ್ಷ ಸೇರಿದ್ದು, ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಸ್ವಂತ ಬುದ್ಧಿವಂತಿಕೆಯಿಂದ ಇಲ್ಲಿಯವರೆಗೆ ಯಾವ ಹೇಳಿಕೆಯನ್ನು ನೀಡಿರುವುದಿಲ್ಲ. ಮೂಡ ಹಗರಣದಲ್ಲಿ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯಿಸಿದ್ದರು, ಬೆಳಗಾವಿ ಅಧಿವೇಶನದಲ್ಲಿ ಬಿ.ಜೆ.ಪಿ. ಶಾಸಕ ಸಿ.ಟಿ. ರವಿ ಅವರ ಅಚಾತುರ್ಯದ ಮಾತುಗಳಿಂದ ಅವರನ್ನು ಖಂಧಿಸದೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ರಾಜಿನಾಮೆಗೆ ಒತ್ತಾಯಿಸಿದ್ದರು. ಈಗ ಪ್ರೀಯಾಂಕ ಖರ್ಗೆಯವರ (Priyank Kharge )ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ. ಚಲುವಾದಿ ನಾರಾಯಣಸ್ವಾಮಿಯವರು ಮಾಡುವ ಆರೋಪಗಳಲ್ಲಿ ಯಾವುದೇ ಹುರುಳಿರುವುದಿಲ್ಲ. ಮತ್ತು ಬಿ.ಜೆ.ಪಿ.ಯವರ ಕೈಗೊಂಬೆಯಾಗಿ ಇದೇ ರೀತಿಯಾಗಿ ಹೇಳಿಕೆಗಳನ್ನು ಮುಂದುವರಿಸಿದ್ದೇ ಆದಲ್ಲಿ ಅವರ ರಾಜೀನಾಮೆಯನ್ನು ಮತ್ತು ಬಿ.ಜೆ.ಪಿ. ರಾಜ್ಯಧ್ಯಕ್ಷ ಬಿ.ವಾಯ್.ವಿಜೇಯಂದ್ರ ಇವರ ನಡವಳಿಕೆಗಳ ವಿರುದ್ಧ ರಾಜ್ಯಾದ್ಯಾಂತ ಪಕ್ಷ ತೆಗೆದುಕೊಳ್ಳುವ ಹೋರಾಟಕ್ಕೆ ನಾವು ಅಣಿಯಾಗುತ್ತೇವೆ ಎಂದರು.

ಈ ವೇಳೆ ಪುರಸಭೆ ಸದಸ್ಯರಾದ ರುದ್ರಪ್ಪ ಬ್ಯಾಗಿ,ಸಂತೋಷ ಸೊಪ್ಪಿಮಠ,ಕುಪ್ಪಣ್ಣ ಕೌತಾಳ, ಸಂಜೀವಪ್ಪ ಚಲುವಾದಿ, ವೆಂಕಟೇಶ ರಾಠೋಡ್ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!