suddiduniya.com

Free guarantee :ಗ್ಯಾರಂಟಿಗಳಿಗೆ ಹಣ ಸಾಕಾಗುತ್ತಿಲ್ಲ, ಇನ್ನೂ ಅಭಿವೃದ್ಧಿಗೆ ಹೇಗೆ ಸಾಧ್ಯ

Free guarantee

ಲಿಂಗಸುಗೂರು : ಈಗಿನ ಸರಕಾರದಲ್ಲಿ ಗ್ಯಾರಂಟಿಗಳಿಗೆ (Free guarantee )ಹಣ ಜೋಡಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಇನ್ನುಳಿದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಶಾಸಕ ಮಾನಪ್ಪ ವಜ್ಜಲ್‍ ಹೇಳಿದರು.

Free guarantee

ತಾಲೂಕಿನ ಮುದಗಲ್ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೆಚ್ಚು ಹಳ್ಳಿಗಳನ್ನು ಹೊಂದಿದ ಹೋಬಳಿಯಾದ ಮುದಗಲ್ ಪಟ್ಟಣದಲ್ಲಿ ಪತ್ರಿಕಾ ಭವನದ ಅವಶ್ಯಕತೆ ಇತ್ತು, ಇದನ್ನು ಮುದಗಲ್ ಪತ್ರಕರ್ತರ ಬಳಗ ಸದ್ಯ ಬಾಡಿಗೆ ಕಟ್ಟಡದಲ್ಲಿ ಪತ್ರಿಕಾ ಭವನ ನಡೆಸಲು ಮುಂದಾಗಿರುವುದು ಶಾಘ್ಲನೀಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಪತ್ರಿಕಾ ಭವನ ಜನಸಾಮಾನ್ಯರಿಗೆ ನ್ಯಾಯ ಸಿಗುವ ಭವನವಾಗಬೇಕು. ಇಲ್ಲಿನ ಪತ್ರಕರ್ತರ  ಬಳಗ ಮುದಗಲ್ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ 15 ಲಕ್ಷ ರೂಪಾಯಿ ಅನುದಾನ ಬೇಡಿಕೆ ಇಟ್ಟಿದ್ದು ಇದನ್ನು ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.

ಕಾಂಗ್ರೆಸ್‍ ಜಾರಿಗೆ ತಂದಿರುವ ಪಂಚ ಗ್ಯಾರಂಟಿ (Free guarantee) ಯೋಜನೆಗಳಿಂದಾಗಿ ಕುಡಿವ ನೀರಿಗೂ ದುಡ್ಡಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಜನರ ಅತಿ ಅಗತ್ಯವಾದ ಕುಡಿವ ನೀರು ಸೇರಿ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಅದರ ಬದಲಾಗಿ ಗ್ಯಾರಂಟಿ ಯೋಜನೆಗಳಿಗೆ (Free guarantee )ಹಣ ಜೋಡಣೆ ಮಾಡುವುದೇ ಸರಕಾರಕ್ಕೆ ದೊಡ್ಡ ಸವಾಲಾಗಿದೆ ವಿನಾಃ ಇನ್ನೂಳಿದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇಲ್ಲದಂತಾಗಿದೆ. ಈ ಸರಕಾರದಲ್ಲಿ ಕೆಲಸಗಳೇ ಆಗುತ್ತಿಲ್ಲ, ಇದು ನನ್ನ ಸಮಸ್ಯೆಯಲ್ಲ ನನ್ನಂತ ರಾಜ್ಯದ ಎಲ್ಲಾ ಶಾಸಕರ ಸಮಸ್ಯೆಯಾಗಿದೆ ಎಂದರು.

Free guarantee

ಮುದಗಲ್ ತಾಲೂಕು ಕೇಂದ್ರವನ್ನಾಗಿ ಮಾಡುವುದು ನನ್ನ ಪ್ರಮುಖ ಗುರಿಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ.ಮತ್ತು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರನ್ನು ಸಾಕಷ್ಟು ಭಾರಿ ಮನವಿ ಮಾಡಿದರೂ, ಸದ್ಯಕ್ಕೆ ಯಾವುದೇ ಹೊಸ ತಾಲೂಕು ಮಾಡುವುದಿಲ್ಲ ಎಂದು ಸಿಎಂ ಸಿದ್ಧರಾಮಯ್ಯನವರು ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸರಕಾರದಲ್ಲಿ ಮುದಗಲ್ ತಾಲೂಕು ಅಸಾಧ್ಯ ಬಿಜೆಪಿ ಸರಕಾರದ ಬಂದ ಮೇಲೆ ಮುದಗಲ್ ತಾಲೂಕು ಮಾಡಿಯೇ ಸಿದ್ಧ ಶಾಸಕ ವಜ್ಜಲ್ ವಿಶ್ವಾಸ ವ್ಯಕ್ತಪಡಿಸಿದರು.

ಮುದಗಲ್ ಕೋಟೆ ಉತ್ಸವ ಮಾಡುವಂತೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೆ ಅಧಿವೇಶನದಲ್ಲಿ ಒತ್ತಾಯ ಮಾಡಿದ್ದೇನೆ. ಇಲಾಖೆ ನಿರ್ದೇಶಕರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸಚಿವರು ಸೂಚನೆ ನೀಡಿದಿದ್ದರಿಂದ ಜಿಲ್ಲಾಧಿಕಾರಿಗಳು ಸೋಮವಾರ ಉತ್ಸವಕ್ಕೆ ಬೇಕಾಗುವ ಖರ್ಚು ವೆಚ್ಚ ವರದಿ ನೀಡಲಿದ್ದಾರೆ. ಇನ್ನೂ ಮುಂದೆ ಪ್ರತಿ ವರ್ಷ ಮುದಗಲ್ ಕೋಟೆ ಉತ್ಸವ ಸರಕಾರದಿಂದಲೇ ಆಚರಣೆ ಮಾಡುವಂತೆ ಶತ ಪ್ರಯತ್ನ ಮಾಡಿದ್ದೇನೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮ್ರೈಕೋ ಯೋಜನೆಯಡಿಯಲ್ಲಿ ತಾಲೂಕಿನ ಮುದಗಲ್‍ ಭಾಗದ 61 ಗ್ರಾಮ ಹಾಗೂ ತಾಂಡಗಳಿಗೆ ತಲಾ 51 ಲಕ್ಷ ರೂಪಾಯಿ ಅನುದಾನ ಒದಗಿಸಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪಿಎಂಜೆಎಸ್‍ವೈ ಯೋಜನೆ ಮತ್ತು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳಿಗಾಗಿ 40 ಕೋಟಿ ರೂ ಅನುದಾನ ಮೀಸಲಿಟ್ಟು ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.  ಇದಲ್ಲದೆ ಎಲ್ಲಾ ತಾಂಡಗಳಿಗೆ ತಲಾ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಮತ್ತು ತಾಂಡ ಹಾಗೂ ಗ್ರಾಮಗಳು ಸೇರಿ 150 ಹೈಮಾಸ್ಕ್ ವಿದ್ಯುತ್ ದೀಪಗಳನ್ನು ಮಂಜೂರು ಮಾಡಿದ್ದೇನೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ, ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಹುಲ್ಲೇಶ ಸಾಹುಕಾರ, ಹಿರಿಯ ಪತ್ರಕರ್ತರಾದ ಅನಂತರಾವ್ ದೇಶಪಾಂಡೆ, ರಾಘವೇಂದ್ರ ಗುಮಾಸ್ತೆ, ಜಿಲ್ಲಾ ಸಮಿತಿ ಸದಸ್ಯರಾದ ಶಿವರಾಜ ಕೆಂಭಾವಿ, ಶರಣಯ್ಯ ಒಡೆಯರ್, ದೇವಣ್ಣ ಕೋಡಿಹಾಳ, ಹಿರಿಯ ಪತ್ರಕರ್ತರಾದ ಶರಣಪ್ಪ ಆನಾಹೊಸೂರು, ಚಂದ್ರಣ್ಣ ಗಂಗಾವತಿ, ಶಶಿಧರ ಕಂಚಿಮಠ, ಅಮ್ಜದ್ ಕಂದಗಲ್, ಬಸವರಾಜ ಆಶಿಹಾಳ, ಬಸವರಾಜ ಹೂನೂರು, ಹನುಮಂತ ನಾಯಕ, ನಾಗರಾಜ ಮಡಿವಾಳ, ಸುರೇಶ, ಮಂಜುನಾಥ, ವಾಹೀದ್ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!