suddiduniya.com

Honorarium :ಗೌರವಧನ ಬಿಡುಗಡೆಗಾಗಿ ಅಂಗನವಾಡಿ ನೌಕರರ ಹೋರಾಟ

Honorarium

ಲಿಂಗಸುಗೂರು : ಗೌರವಧನ (Honorarium )ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಅಂಗನವಾಡಿ ನೌಕರರ ಸಂಘದ ನೇತ್ರತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟಿಸಲಾಯಿತು.

ಕಳೆದ ಡಿಸೆಂಬರ್ ತಿಂಗಳಿನಿಂದ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ಬಿಡುಗಡೆಯಾಗಿಲ್ಲ, ಪ್ರತಿ ತಿಂಗಳು ಗೌರವಧನ ಬಿಡುಗಡೆ ಆಗುತ್ತಿಲ್ಲ ಇದರಿಂದ 2-3 ತಿಂಗಳಿಗೊಮ್ಮೆ ಗೌರವಧನಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.ಇದರಿಂದ ಕುಟಂಬ ನಿರ್ವಹಣೆಗೆ ಪರದಾಡುವಂತಾಗಿದೆ.2023ರ ಫೆಬ್ರುವರಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹೆಚ್ಚಿಸಿದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹಾಗೂ 2023ರ ಜುಲೈಯಲ್ಲಿ ಸಿಎಂ ಸಿದ್ಧರಾಮಯ್ಯನವರು ಹೆಚ್ಚಳ ಮಾಡಿದ ಗೌರವಧನ ಈವರಿಗೆ ಬಿಡುಗಡೆಯಾಗಿಲ್ಲ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Honorarium

2023ರಿಂದ ಬೇಡಿಕೆಗೆ ತಕ್ಕಂತೆ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಆಹಾರ ಪೂರೈಕೆ ಆಗುತ್ತಿಲ್ಲ, ಗುಣಮಟ್ಟದ ಬೆಲ್ಲ, ರವಾ ಪೂರೈಕೆ ಮಾಡದೇ ಕಳಪೆಮಟ್ಟದ್ದಾಗಿದೆ. ಮಕ್ಕಳ ಪೌಷ್ಟಿಕ ಆಹಾರಕ್ಕಾಗಿ ಗುಣಮಟ್ಟದ ಆಹಾರ ಪೂರೈಕೆಗೆ ಕ್ರಮಗೊಳ್ಳಬೇಕು ಎಂದು ಆಗ್ರಹಿಸಿದರು.

2024ರಲ್ಲಿ ಪೂರೈಕೆಯಾದ ಮೊಬೈಲ್‍್ಗಳು ಸರಿಯಾಗಿ ವರ್ಕ್ ಮಾಡುತ್ತಿಲ್ಲ, ಫೋಷನ ಟ್ರ್ಯಾಕ್ ಕೆಲಸ ಮಾಡಲು ತೊಂದರೆಯಾಗುತ್ತಿದ್ದು, ಫಲಾನುಭವಿಗಳ ಓಟಿಪಿ ನಂಬರ್ ಕೇಳುತ್ತಿದ್ದು,ಆದರೆ ಹಳ್ಳಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನರಿಂದ ಓಟಿಪಿ ಪಡೆಯುವುದು ತೊಂದರೆಯಾಗುತ್ತಿದೆ ಫೋಷಣ ಟ್ರಾಕ್ ಕೆಲಸ ಮಾಡಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.

ಪೋಷಣ ಅಭಿಯಾನದ ಸಿಮಂತ ಕಾರ್ಯಕ್ರಮಕ್ಕಾಗಿ ಅನ್ನಪ್ರಾಸನ್ ಗಾಗಿ ಕಳೆದ ಎರಡು ವರ್ಷಗಳಿಂದ 250 ರೂಪಾಯಿ ಬಿಡುಗಡೆಯಾಗಿಲ್ಲ ಆದರೆ ಕಾರ್ಯಕರ್ತೆಯರೇ ಸ್ವಂತ ಹಣದಲ್ಲಿ ಖರ್ಚು ಮಾಡಿ ಕಾರ್ಯಕ್ರಮ ಮಾಡುವಂತೆ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ, 2-3 ವರ್ಷಗಳಿಂದ ಬಿಡುಗಡೆಯಾಗಬೇಕಾದ ಅನ್ನಪ್ರಾಸನ್ ಹಣ ಬಿಡುಗಡೆಗೊಳಿಸಬೇಕು. ಮಾತೃವಂದನಾ ಯೋಜನೆಗಾಗಿ ಕಾರ್ಯಕರ್ತೆಯರಿಗೆ 250 ರೂಪಾಯಿ ಹಾಗೂ ಸಹಾಯಕಿಯರಿಗೆ 100 ರೂಪಾಯಿ ಪ್ರೋತ್ಸಾಹ ಧನ ಕಳೆದ ಒಂದು ವರ್ಷದಿಂದ ಬಿಡುಗಡೆಯಾಗಿಲ್ಲ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

Honorarium
Honorarium

ಕಳೆದ ನಾಲ್ಕೈದು ವರ್ಷಗಳಿಂದ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಎನ್‍.ಪಿ.ಎಸ್‍ ಹಣ ಹಾಗೂ ಎನ್‍ ಪಿ ಎಸ್ ಇಲ್ಲದವರ ಹಿಡಿಗಂಟು ಕೂಡಲೇ ಬಿಡುಗಡೆ ಮಾಡಬೇಕು ನಿವೃತ್ತಿಯಾದ ಕಾರ್ಯಕರ್ತೆಯರ ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ನಿವೃತ್ತಿ ಹೊಂದಿದ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳಿಗೆ 6 ಸಾವಿರ ರೂಪಾಯಿ ಮತ್ತು ಸಹಾಯಕಿಯರಿಗೆ 4 ಸಾವಿರ ರೂಪಾಯಿ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಬಾಲಭವನ ಮತ್ತು ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ನಿವೇಶನ ಲಭ್ಯವಿದ್ದರೂ ಭವನ ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಕೂಡಲೇ ಭವನ ನಿರ್ಮಾಣ ಮಾಡಲು ಇಲಾಖೆ ಮುಂದಾಗಬೇಕು. ಕಳೆದ ಎರಡ್ಮೂರು ವರ್ಷಗಳಿಂದ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಸುಕನ್ಯ ಹಣ ಬಂದಿರುವುದಿಲ್ಲ ಮತ್ತು ಮತ್ತು ಮಾತೃವಂದನಾ ಹಣ ಫಲಾನುಭವಿಗಳಿಗೆ ಬಿಡುಗಡೆಯಾಗಿಲ್ಲ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸರಸ್ವತಿ ಈಚನಾಳ, ಲಕ್ಷ್ಮೀ ನಗನೂರು, ಮಹೇಶ್ವರಿ ಹಟ್ಟಿ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!