suddiduniya.com

Power distribution station : ವಿದ್ಯುತ್ ವಿತರಣಾ ಕೇಂದ್ರ ಎತ್ತಂಗಡಿಗೆ ಕರವೇ ಆಕ್ರೋಶ

Power distribution station

ಆನಾಹೊಸೂರು

ಲಿಂಗಸುಗೂರು : ತಾಲೂಕಿನ ಆನಾಹೊಸೂರು ಗ್ರಾಮದಲ್ಲಿನ 132/11 ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು (Power distribution station) ಬೇರೆಡೆ ಎತ್ತಂಗಡಿ ಮಾಡಿರುವುದು ಖಂಡನೀಯ ಕೂಡಲೇ ಯಥಾವತ್ ಆನಾಹೊಸೂರು ಗ್ರಾಮದಲ್ಲಿಯೇ ಮುಂದುವರಿಸುವAತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Power distribution station
Power distribution station


ರಾಂಪೂರು ಏತ ನೀರಾವರಿ ಯೋಜನೆ, ಕುಡಿವ ನೀರು, ಪಂಪಸೆಟ್, ಮನೆ ಮನೆಗೆ ವಿದ್ಯುತ್ ಪೂರೈಕೆಗೆ ಆನಾಹೊಸೂರು ಗ್ರಾಮದಲ್ಲಿ 132/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಆದರೆ ಆರ್ ಬಿ ಶುಗರ್ಸ ಲಿಮಿಟೆಡ್ ಕಂಪನಿ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಸರ್ಕಾರಿ ಜಮೀನು ಕಬಳಿಸುವ ಜೊತೆಗೆ ಈಗ ವಿದ್ಯುತ್ ವಿತರಣಾ ಕೇಂದ್ರ ಸ್ಥಳಾಂತರಿಸಲು ಹುನ್ನಾರ ನಡೆಸಿದ್ದಾರೆ.

Power distribution station
Power distribution station

ಆನಾಹೊಸೂರಿನಲ್ಲಿ ಮುಂದುವರಿಸಿ :

ಸರ್ಕಾರಿ ನಿಯಮ ಉಲ್ಲಂಘಿಸಿ ಜಮೀನು ಖರೀದಿ ಸೇರಿದಂತೆ ಕಾನೂನು ಉಲ್ಲಂಘಿಸಿ ಸಕ್ಕರೆ ಉತ್ಪಾದನೆ ಕಾರ್ಖಾನೆ ಹಾಕುತ್ತಿದ್ದಾರೆ ಅಲ್ಲದೆ ರೈತರ ಹಿತ ಕಡೆಗಣಿಸಿ ಆನಾಹೊಸೂರು (Power distribution station )ವಿದ್ಯುತ್ ವಿತರಣಾ ಕೇಂದ್ರವನ್ನು ಚಿಕ್ಕ ಉಪ್ಪೇರಿಯ ತಮ್ಮ ಸ್ವಂತ ಜಮೀನಿನಲ್ಲಿ ಹಾಕಿಸಿಕೊಳ್ಳು ಯತ್ನ ತರೆವ್ಮರೆಯಲ್ಲಿ ನಡೆದಿದ್ದು ಕಂಡು ಬಂದಿದೆ. ಆರ್.ಬಿ.ಶುಗರ್ಸ ಕಂಪನಿ ನಿಯಮ ಉಲ್ಲಂಘಿಸಿ ಆರಂಭಿಸುತ್ತಿರುವ ಸಕ್ಕರೆ ಕಾರ್ಖಾನೆ ಕುರಿತು ತನಿಖೆ ನಡೆಸಿ ವೈಜ್ಞಾನಿಕ ವರದಿ ತರಿಸಿಕೊಂಡು ಸಾಮಾನ್ಯ ಜನರ ಮೇಲಾಗುವ ದುಷ್ಪರಿಣಾಮ ಕಡಿವಾಣ ಹಾಕಬೇಕು. ರೈತ ಹಿತ ದೃಷ್ಠಿಯಿಂದ ಆನಾಹೊಸೂರು ಗ್ರಾಮದಿಂದ ಚಿಕ್ಕ ಉಪ್ಪೇರಿಗೆ ಸ್ಥಳಾಂತರಿಸಲು ಮುಂದಾಗಿರುವ ವಿದ್ಯುತ್ ವಿತರಣಾ ಉಪ ಕೇಂದ್ರವನ್ನು ಸ್ಥಳಾಂತರ ಮಾಡದೇ ಆನಾಹೊಸೂರು ಗ್ರಾಮದಲ್ಲಿ ಮುಂದುವರಿಸುವ0ತೆ ಆಗ್ರಹಿಸಿದರು.

Power distribution station


ಈ ವೇಳೆ ಕರವೇ ತಾಲೂಕಾಧ್ಯಕ್ಷ ಜಿಲಾನಿಪಾಶಾ, ಅಮರೇಶ, ಹನುಮಂತ ನಾಯಕ, ಅಜೀಜ್‌ಪಾಶಾ, ಅಲ್ಲಾಬಕ್ಷಾ ಮನಿಯಾರ್, ರವಿ ಬರಗುಡಿ, ಇಲಿಯಾಸ್, ಜಾಫರ್, ಶಬ್ಬೀರ್, ಮಲ್ಲಿಕಾರ್ಜುನ ಪೋಳ್, ಮೊಹಿಸಿನ್ ಖಾನ್, ಬಸವರಾಜ, ಮಲ್ಲನಗೌಡ ಸೇರಿದಂತೆ ಇನ್ನಿತರಿದ್ದರು

.


Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!