suddiduniya.com

Municipality :ಲಿಂಗಸುಗೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

Municipal election

ಹೈಕೋರ್ಟ ತಡೆಯಾಜ್ಞೆ : ಚುನಾವಣೆ ಮುಂದಕ್ಕೆ


ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮೀಸಲಾತಿ ಗೊತ್ತುಪಡಿಸಲಾಗಿತ್ತು. ಅದರಂತೆ Municipality ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆಪ್ಟೆಂಬರ್ ೧೮ರಂದು ಚುನಾವಣೆ ನಿಗದಿ ಮಾಡಿ ತಹಶೀಲ್ದಾರ ಶಂಶಾಲ0 ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಿದ್ದರು.

ಯಾತಕ್ಕೆ ತಡೆಯಾಜ್ಞೆ ?..:

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಫಾತೀಮಾ ಮೌಲಾಸಾಬ, ಪ್ರಮೋಧ ಕುಮಾರ್, ಮೌಲಾಸಾಬಾ ಛೋಟುಸಾಬ್, ಶರಣಪ್ಪ ಬಸಪ್ಪ ಈ ನಾಲ್ಕು ಜನರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡದೇ ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ0ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷಾಂತರ ಕಾಯ್ದೆಯಡಿಯಲ್ಲಿ ಈ ನಾಲ್ಕ ಜನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಈ ನಾಲ್ಕ ಜನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಸದಸ್ಯತ್ವ ಅನರ್ಹಗೊಳಿಸಿದ್ದಾರೆಂದು ಜಿಲ್ಲಾಧಿಕಾರಿಗಳ ಆದೇಶ ವಿರುದ್ಧ ಈ ನಾಲ್ವರು ಸದಸ್ಯರು ಕಲುಬುರಗಿ ಹೈಕೋರ್ಟಗೆ ಮೊರೆ ಹೋಗಿದ್ದರು, ಇದನ್ನು ಪರಿಶೀಲಿಸಿದ ನ್ಯಾಯಾಲಯವು Municipality ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ನೀಡಿ ಸೆಪ್ಟೆಂಬರ್ 19ಕ್ಕೆ ವಿಚಾರಣೆ ಮುಂದೂಡಲಾಗಿದೆ.

LINGASUGUR PURSABE

ಪ್ರವಾಸ ಮೊಟಕು :

ಪುರಸಭೆಯಲ್ಲಿ ಬಹುಮತ ಇರುವ ಕಾಂಗ್ರೆಸ್ ಪಕ್ಷವು ತನ್ನ ಸದಸ್ಯರನ್ನು ಬೇರೆ ಪಕ್ಷದ ತಮ್ಮತ್ತ ಸೆಳೆಯದಂತೆ ಕಾಂಗ್ರೆಸ್‌ನ ಸದಸ್ಯರನ್ನು ಕಳೆದ ೧೫ದಿನಗಳ ಹಿಂದೆಯೇ ಪ್ರವಾಸಕ್ಕೆ ಕಳಿಸಲಾಗಿತ್ತು, ಆದರೆ ಚುನಾವಣೆ ಮುಂದೂಡಿದ್ದರಿ0ದ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಪ್ರವಾಸ ಮೊಟಕುಗೊಳಿಸಿ ಊರಿಗೆ ವಾಪಸ್ಸು ಆಗುತ್ತಿದ್ದಾರೆ.

Municipality
Municipality

ಸ್ಪರ್ದಿಸಲು ಅವಕಾಶ ನೀಡಿ :

ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ ತಡೆಯಾಜ್ಞೆ ನೀಡಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ದಿಸಲು ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮತಹಾಕಲು ಅವಕಾಶ ನೀಡಬೇಕೆಂದು ಅನರ್ಹಗೊಂಡಿದ್ದ ನಾಲ್ಕು ಜನ ಸದಸ್ಯರಾದ ಫಾತೀಮಾ ಮೌಲಾಸಾಬ, ಪ್ರಮೋಧ ಕುಮಾರ್, ಮೌಲಾಸಾಬಾ ಛೋಟುಸಾಬ್, ಶರಣಪ್ಪ ಬಸಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಲಿಂಗಸುಗೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಸೆ.18ರಂದು ದಿನ ನಿಗದಿ ಮಾಡಲಾಗಿತ್ತು. ಆದರೆ ಕಲುಬುರಗಿ ಹೈಕೋರ್ಟ ಪೀಠ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸೆಪ್ಟೆಂಬರ್ 19ರವರಿಗೆ ತಡೆಯಾಜ್ಞೆ ನೀಡಿದ್ದರಿಂದ ಸೆ.19ರಂದು ವಿಚಾರಣೆ ನಂತರ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಮುಂದಿನ ದಿನಾಂಕ ನಿಗದಿ ಮಾಡುವೆ ಎಂದು ತಹಶೀಲ್ದಾರ ಶಂಶಾಲ0 ತಿಳಿಸಿದ್ದಾರೆ.


Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!