ಮಸ್ಕಿಯಲ್ಲಿ ಬೃಹತ್ ಪ್ರತಿಭಟನೆ
ಮಸ್ಕಿ : ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಸಾಮಾಜಿಕ ನ್ಯಾಯ ಒದಗಿಸಲು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅನ್ವಯ ರಾಜ್ಯ ಸರ್ಕಾರ ಒಳ ಮೀಸಲಾತಿ ತಕ್ಷಣೇ ಜಾರಿಗೊಳಿಸುವಂತೆ ಆಗ್ರಹಿಸಿ Internal reservation ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ನೇತ್ರತ್ವದಲ್ಲಿ ಮಸ್ಕಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಕ್ಟೋಬರ್ 2ವರಿಗೆ ಅಂತಿಮ ಗಡುವು ನೀಡಿದೆ.
ಆರ್ಥಿಕ ಸ್ಥಿತಿಗತಿ ಅಧ್ಯಯನ :
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಆಧರಿಸಿ ಆಯಾಜಾತಿ ಜನಸಂಖ್ಯಾವಾರು ಮೀಸಲಾತಿಯನ್ನು ವರ್ಗೀಕರಿಸಿ ಸಾಮಾಜಿಕ ನ್ಯಾಯ Internal reservation ದೊರಕಿಸಿಕೊಡುವ ಪರಮಾಧಿಕಾರವನ್ನು ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಗಳಿಗೆ ನೀಡಿರುವುದರಿಂದ ಇದರ ಸೂಕ್ಷ್ಮತೆಯನ್ನು ಮುಖ್ಯಮಂತ್ರಿಗಳು ಅತ್ಯಂತ ಗಂಭೀರವಾಗಿ ಅರ್ಥೈಸಿಕೊಂಡ 2024 ಆಗಸ್ಟ್ 1ರ ತೀರ್ಪನ್ನು ಸ್ವಾಗತಿಸುವುದರ ಜೊತೆಗೆ ಮಿಸಲಾತಿ ಹಂಚಿಕೆಗೆ ಇರಬಹುದಾದ ಕಾನೂನಿನ ತೊಡಕುಗಳ ನಿವಾರಣೆಯಾಗಿವೆ ಎಂದು ನೀಡಿರುವ ಹೇಳಿಕೆಯನ್ನು ಗಮನಿಸಿ ರಾಜ್ಯ ಸರ್ಕಾರ ಮೀಸಲಾತಿ ಹಂಚಿಕೆಯನ್ನು ತಕ್ಷಣವೇ ಜಾರಿ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿರುವುದರಿಂದ ಒಂದೂವರೆ ಕೋಟಿ ಪರಿಶಿಷ್ಟ ಜಾತಿ ಜನಾಂಗಗಳು ಅನುಮಾನದಿಂದ ಕಾಣುವಂತಾಗಿದೆ.
1974-75 ರಲ್ಲಿ ಪಂಜಾಬ್ ಸೇರಿದಂತೆ ಉತ್ತರಪ್ರದೇಶ, ಹರಿಯಾಣ, ಅವಿಭಜಿತ ಆಂಧ್ರಪ್ರದೇಶ ಗಳಲ್ಲಿ ಒಳಮೀಸಲಾತಿ ಅನುಷ್ಠಾನ ಜಾರಿಯಲ್ಲಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಮುನ್ನುಡಿಯನ್ನು ಬರೆದಿತ್ತು. ನಂತರದ ದಿನಗಳಲ್ಲಿ ಕೆಲ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದ ಪರಿಣಾಮ 2004 ರಲ್ಲಿ ಒಳ ಮೀಸಲಾತಿ ವಿಚಾರವು ಕಾನೂನಿನ ಕಗ್ಗಂಟಿಗೆ ಸಿಲುಕಿ ಸುಮಾರು 20 ವರ್ಷಗಳ ಕಾಲ ಸುಧೀರ್ಘವಾದ ವಿಚಾರಣೆಯೊಂದಿಗೆ ನೊಂದ ಸಮುದಾಯಗಳ ಆಶಾಕಿರಣವಾಗಿ 2024 ಆಗಸ್ಟ್ 01 ರ ತೀರ್ಪು ಹೊರಬಂದು ಪುನಃ ರಾಜ್ಯ ಸರ್ಕಾರಗಳಿಗೆ ಮೀಸಲಾತಿ ಹಂಚಿಕೆಯ ಹೊಣೆಗಾರಿಕೆಯ ಅಧಿಕಾರವನ್ನು ವಹಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ.
ನ್ಯಾಯಾಲಯದ ತೀರ್ಪು ಪ್ರಕಟವಾಗಿ ಒಂದೂವರೆ ತಿಂಗಳು ಗತಿಸಿದರೂ ರಾಜ್ಯ ಸರ್ಕಾರವು ಇನ್ನೂ ಅನುಷ್ಠಾನದ ವಿಚಾರದಲ್ಲಿ ಹಿಂದೇಟು ಹಾಕುತ್ತಿರುವುದು ಹತ್ತಾರು ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ. Internal reservation ಕಾಂಗ್ರೆಸ್ ಪಕ್ಷವು 2022 ರಲ್ಲಿ ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶವನ್ನು ಆಯೋಜಿಸಿ, ಹಿರಿಯ ನಾಯಕರ ಸಮ್ಮುಖದಲ್ಲಿಯೇ ಸರ್ಕಾರ ರಚನೆಯಾದ ಮೊದಲ ಅಧಿವೇಶನದಲ್ಲಿದಲ್ಲಿಯೇ ಒಳ ಮೀಸಲಾತಿ ಬೇಡಿಕೆಯನ್ನು ಜಾರಿ ಮಾಡುತ್ತೇವೆ ಎಂದು ಘೋಷಿಸಿದ್ದರೂ ಇದುವರೆಗೂ ಸಕಾರಾತ್ಮಕವಾದ ನಿಲುವನ್ನು ಕೈಗೊಳ್ಳದೇ ” ನೋಡೋಣ.”, “ಮಾಡೋಣ..” ಎಂಬ ಕಾಲಹರಣದ ಧೋರಣೆಗಳು ” ನುಡಿದಂತೆ ನಡೆದಿದ್ದೇವೆ. ಎಂಬ ತಮ್ಮ ಘೋಷವಾಕ್ಯಕ್ಕೆ ತದ್ದಿರುದ್ಧವಾಗಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ರೂ.60 ಸಾವಿರ ಕೋಟಿ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಅನುದಾನದಿಂದಲೇ ಬಳಕೆ ಮಾಡಿದಾಗಲೂ ಎಸ್‌ಸಿ ಸಮುದಾಯಗಳು ಅತ್ಯಂತ ಸಾವಾಧಾನದಿಂದ ಸರ್ಕಾರದ ಬೆಂಬಲಕ್ಕೆ ನೈತಿಕವಾಗಿ ನಿಂತಿರುವುದನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸಿದಂತೆ ಕಾಣುತ್ತಿಲ್ಲ. ಹಾಗೆಯೇ Internal reservation ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಲು ಸಾವಿರಾರು ಕೋಟಿ ಅನುದಾನದ ಅಗತ್ಯವು ಇಲ್ಲ. ಇಚ್ಛಾಶಕ್ತಿಯೊಂದಿದ್ದರೆ ಒಂದೇ ಸಾಲಿನ ಅನುಮೋದನೆಯ ಹಾಗೂ ಒಂದೇ ಕ್ಷಣದ ದೃಢಸಂಕಲ್ಪವು ಕೋಟ್ಯಾಂತರ ಅವಕಾಶವಂಚಿತ ಸಮುದಾಯಗಳಿಗೆ ಸಂಜೀವಿನಿಯಾಗುತ್ತದೆ. ಇಂತಹ ಮಹತ್ವದ ನಿರ್ಧಾರವನ್ನು ತಮ್ಮ ನೇತೃತ್ವದ ಸರ್ಕಾರ ತೆಗೆದುಕೊಳ್ಳಬಹುದೆಂಬ ಆತ್ಮವಿಶ್ವಾಸದಿಂದಲೇ ತಮ್ಮ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸಿ ಸ್ಥಿರ ಸರ್ಕಾರ ರಚನೆಯಾಗಲು ನಮ್ಮ ಸಮುದಾಯಗಳ ಅವಿಶ್ರಾಂತ ಪರಿಶ್ರಮವಿದೆ. ಸಾಮಾಜಿಕ ನ್ಯಾಯದ ಜವಾಬ್ದಾರಿಯನ್ನು ನೆರವೇರಿಸಲು ಅಕ್ಟೋಬರ್ 2 ನ್ನು ಅಂತಿಮ ಗಡುವು ನೀಡಲಾಗಿದೆ ಎಂದು ಸಿಎಂಗೆ ಬರೆದ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.