suddiduniya.com

Basavasagar dam :ಬಸವಸಾಗರ ಜಲಾಶಯಕ್ಕೆ 42ರ ಸಂಭ್ರಮ

ಬಸವಸಾಗರ ಜಲಾಶಯಕ್ಕೆ 42ರ ಸಂಭ್ರಮ

ಸೆ.22, 1982ರಲ್ಲಿ ಲೋಕಾರ್ಪಣೆ :

1964 ಮೇ 22ರಂದು ಅಂದಿನ ಪ್ರಧಾನ ಮಂತ್ರಿ ಲಾಲ್ ಬಹದ್ಧೂರು ಶಾಸ್ತಿ ಅವರು ಆಲಮಟ್ಟಿ ಹಾಗೂ( Basavasagar dam )ಬಸವಸಾಗರ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು. ಸುದೀರ್ಘ 18 ವರ್ಷಗಳ ಕಾಲ ಸಾವಿರಾರು ಕಾರ್ಮಿಕರ ಅವಿರತ ಪರಿಶ್ರಮದ ಫಲವಾದ ಬಸವಸಾಗರ ಜಲಾಶಯವನ್ನು 1982 ಸೆಪ್ಟೆಂಬರ್ 22ರಂದು ಆಗಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಅಂದಿನ ಬೃಹತ್ ನೀರಾವರಿ ಮಂತ್ರಿ ಬಿ.ಬಿ.ಚಿಮ್ಮನಕಟ್ಟಿ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆಗೊಳಿಸಿದರು.

Basavasagar dam

ಮುದ್ದೇಬಿಹಾಳ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ Basavasagar dam ಬಸವಸಾಗರ ಜಲಾಶಯ ನಿರ್ಮಾಣ ಮಾಡಲಾಗಿದೆ. ಜಲಾಶಯ ನಿರ್ಮಾಣಕ್ಕಾಗಿ 42 ಗ್ರಾಮಗಳು ಮುಳುಗಡೆಯಾಗಿದ್ದು, ಅಂತಹ ಗ್ರಾಮಗಳಿಗೆ ಸರ್ಕಾರ ಪುನರ್‌ವಸತಿ ಕಲ್ಪಿಸಿವೆ. ಅಣೆಕಟ್ಟು 29 ಮೀಟರ್ ಎತ್ತರ ಮತ್ತು 6.610 ಮೈಲಿ ಉದ್ದವಿದೆ. ಬಸವಸಾಗರ ಜಲಾಶಯ 10.93 ಕಿ.ಮೀ ಉದ್ದ ವಿಸ್ತೀರ್ಣ ಹೊಂದಿದೆ. ಜಲಾಶಯದಲ್ಲಿ ರೆಡಿಯಲ್ ಆಕಾರದ 30 ಗೇಟ್‌ಗಳನ್ನು ಹೊಂದಿದೆ. ಗೇಟ್ 15 ಮೀಟರ್ ಉದ್ದ 12 ಮೀಟರ್ ಅಗಲ ಹೊಂದಿದೆ. ಜಲಾಶಯ ಪೂರ್ಣಗೊಳಿಸಲು ಅಂದು ಒಟ್ಟು 50.48 ಕೋಟಿ ರೂ ಖರ್ಚು ಮಾಡಲಾಗಿದೆ.

33 ಟಿಎಂಸಿ ನೀರು ಸಂಗ್ರಹದ ಬಸವಸಾಗರ ಅಣೆಕಟ್ಟಿನಲ್ಲಿ ಮೂವತ್ತು ಸ್ಪಿಲ್‌ವೇ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಈ ಪ್ರತಿಯೊಂದು ಸ್ಪಿಲ್‌ವೇ ಗೇಟ್‌ಗಳು ಓಜಿ ಪ್ರಕಾರದವು. ಇದು ಸಾಮಾನ್ಯ ಮತ್ತು ಮೂಲಭೂತ ವಿನ್ಯಾಸವಾಗಿದ್ದು, ಹೆಚ್ಚುವರಿ ನೀರನ್ನು ಅಣೆಕಟ್ಟಿನ ಹಿಂದಿನಿAದ ನಯವಾದ ಇಳಿಜಾರಿನ ಕೆಳಗೆ ನದಿಗೆ ವರ್ಗಾಯಿಸುತ್ತದೆ. ಇವುಗಳನ್ನು ಸಾಮಾನ್ಯವಾಗಿ ಓಜೀ ಕರ್ವ್ ಅನ್ನು ಅನುಸರಿಸಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಾಗಿ, ಅಣೆಕಟ್ಟು ಮತ್ತು ಸ್ಥಳಾಕೃತಿಯನ್ನು ರಕ್ಷಿಸಲು ಅವುಗಳನ್ನು ಕಾಂಕ್ರೀಟ್ನೊAದಿಗೆ ಕೆಳಭಾಗದಲ್ಲಿ ಮತ್ತು ಬದಿಗಳಲ್ಲಿ ಜೋಡಿಸಲಾಗುತ್ತದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು, ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಶೋರಾಪುರ ತಾಲೂಕುಗಳು, ಬಿಜಾಪುರ ಜಿಲ್ಲೆಯ ಸಿಂದಗಿ ಮತ್ತು ಇಂಡಿ ತಾಲೂಕುಗಳು ಮತ್ತು ರಾಯಚೂರು ಜಿಲ್ಲೆಯ ಲಿಂಗಸೂಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ 4.21 ಲಕ್ಷ ಹೆಕ್ಟೇರ್‌ಗೆ ನೀರಾವರಿಗೆ ನೀರು ಒದಗಿಸಿದೆ. ಬಲದಂಡೆ ಮುಖ್ಯ ನಾಲೆ 3573 ಕ್ಯೂಸೆಕ್ ನೀರು ಹರಿಯುವ ಸಾಮಾರ್ಥ್ಯದಲ್ಲಿ ನಾಲೆ ನಿರ್ಮಾಣ ಮಾಡಲಾಗಿದೆ. ಅದರಂತೆ ಎಡದಂಡೆ ಮುಖ್ಯ ನಾಲೆಯಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಜಲಾಶಯದ ಇತಿಹಾಸದಲ್ಲಿ ದುರಂತದ ಎರಡು ಸಂಗತಿಗಳು ನಡೆದಿವೆ. 1992 ರಲ್ಲಿ, ಎರಡು ನೀರಾವರಿ ಗೇಟ್‌ಗಳು ಭಾಗಶಃ ವಿಫಲವಾದವು. 2005 ರಲ್ಲಿ, ಅಣೆಕಟ್ಟಿನ ಒಂದು ಗೇಟ್‌ನ ಕುಸಿದು ಬಿದ್ದು ಘಟನೆಗಳನ್ನು ಇಲ್ಲಿನ ಜನರು ಇನ್ನೂ ಮರೆತಿಲ್ಲ, ಲಿಂಗಸುಗೂರು ಪಟ್ಟಣದಿಂದ 18 ಕಿ.ಮೀ ದೂರ ಇರುವ Basavasagar dam ಬಸವಸಾಗರ ಜಲಾಶಯದ ಮುಂಭಾಗದಲ್ಲಿ ಹಿರೇಜಾವೂರು ಗ್ರಾಮದಲ್ಲಿ ವಿಶ್ವಜ್ಯೋತಿ ಬಸವಣ್ಣನವರ ಕಂಚಿನ ಮೂರ್ತಿ ಪ್ರತಿಷ್ಠಾಪಿಸಿಲಾಗಿದೆ.

ಕೈಗಾರಿಕೆಗಳಿಗೂ ನೀರು :

ಬಸವಸಾಗರ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆ ಮೂಲಕ ಲಕ್ಷಾಂತರ ಹೇಕ್ಟರ್ ಭೂಮಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಮತ್ತುಷ್ಟು ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಅನೇಕ ಪಟ್ಟಣಗಳಿಗೆ ಕುಡಿವ ನೀರು ಒದಗಿಸಲಾಗಿದೆ. ಇದುಲ್ಲದೆ ಜಲ ವಿದ್ಯುತ್ ಘಟಕಗಳಿಗೆ ನೀರು ಒದಗಿಸಿ ವಿದ್ಯುತ್ ಉತ್ಪಾದನೆಗೆ ಮುಂದಾಗುತ್ತಿದೆ. ಕೆಲವು ಕೈಗಾರಿಕೆಗಳಿಗೆ ನೀರು ಒದಗಿಸಲಾಗುತ್ತಿದೆ.

ಮಳೆಗಾಲದಲ್ಲಿ ಜಲಾಶಯ ಭರ್ತಿಯಾದಾಗ ಅದರಿಂದ ಹೆಚ್ಚುವರಿ ನೀರು ಕೃಷ್ಣಾನದಿಗೆ ಹರಿಸುತ್ತಿರುವ ದೃಶ್ಯ ನಯನ ಮನೋಹರಕವಾಗಿರುತ್ತದೆ. ಇದನ್ನು ವಿಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತೆ. ಪ್ರವಾಸಿಗರನ್ನು ಮತ್ತಷ್ಟು ಸೆಳೆಯಲು ಉದ್ಯಾನವನ ನಿರ್ಮಾಣ ಮಾಡಬೇಕಾಗಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!