ರೈತ ಸಂಘದಿ0ದ ಪ್ರತಿಭಟನೆ :
ಲಿಂಗಸುಗೂರು (lingasuguru) : ಮುಡಾ ಹಗರಣಕ್ಕಿಂತ( Muda scam) ತಾಲೂಕಿನ ಸುಣ್ಣಕಲ್ (sunkallu)ಗ್ರಾಮದಲ್ಲಿ ಅಬಕಾರಿ ಸಚಿವ(Minister of Excise) ಆರ್.ಬಿ.ತಿಮ್ಮಾಪುರ ಒಡೆತನದ ಸಕ್ಕರೆ ಕಾರ್ಖಾನೆಗಾಗಿ (Sugar factory) ಸರ್ಕಾರಿ ಭೂಮಿ (govt land) ಕಬಳಿಕೆ ಮಾಡಿದ್ದು ದೊಡ್ಡ ಹಗರಣವಾಗಿದೆ(big scam) ಎಂದು ಸಿಪಿಐಎಂಎಲ್ ಪಾಲಿಟ್ ಬ್ಯೂರ್ ಸದಸ್ಯ ಆರ್.ಮಾನಸಯ್ಯ ಆರೋಪಿಸಿದ್ದಾರೆ.
ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆರ್.ಮಾನಸಯ್ಯ ಮಾತನಾಡಿದರು.
ಪಟ್ಟಣದ ಎಸಿ ಕಚೇರಿ ಆವರಣದಲ್ಲಿ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ 48 ಗಂಟೆ ಪ್ರತಿಭಟನೆ ಧರಣಿ (protest) ಉದ್ದೇಶಿಸಿ ಮಾತನಾಡಿದ ಅವರು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ (R.b.timmapur) ಅವರು ತಾಲೂಕಿನ ಸುಣ್ಣಕಲ್ ಗ್ರಾಮದಲ್ಲಿ 2018ರಲ್ಲಿ ಕಬ್ಬಿನ ಸಿಪ್ಪೆ ಸುಟ್ಟು ಅದರಿಂದ 12 ಮೇಗಾವ್ಯಾಟ್‌ನಿಂದ 15 ಮೇಗಾವ್ಯಾಟ್‌ನವರಿಗೆ ವಿದ್ಯುತ್ ಉತ್ಪಾದಿಸುವುದಾಗಿ ಸರ್ಕಾರದಿಂದ ಪರವಾನಿಗೆ ಪಡೆದುಕೊಂಡು ಎರಡು ವರ್ಷದಲ್ಲಿ ಸಂಪೂರ್ಣವಾಗಿ ಯೋಜನೆ ಕಾಮಗಾರಿ ಮುಗಿಸುವುದಾಗಿ ಪರವಾನಿಗೆ ಪತ್ರದಲ್ಲಿ ಹೇಳಲಾಗಿದೆ.
ಆದರೆ ಆರು ವರ್ಷ ಕಳೆಯುತ್ತಾ ಬಂದರೂ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಿಲ್ಲ, ಅಲ್ಲಿ ಈವರಿಗೂ ವಿದ್ಯುತ್ ಉತ್ಪಾದನೆ ಬೇಕಾಗುವ ಮಷಿನ್‌ರಗಳೂ ಇಲ್ಲ, ಬದಲಾಗಿ ಟಿಪ್ಪರ್, ಹಿಟಾಚಿಗಳಿವೆ. ಗುರುಗುಂಟಾದಲ್ಲಿ ವಿದ್ಯುತ್ ಸ್ಟೇಶನ್ ಸ್ಥಾಪನೆ ಮಾಡುವುದಾಗಿ ಹೇಳಿದೆ ಆದರೆ ಗುರುಗುಂಟಾದಲ್ಲಿ ಯಾವುದೇ ಸ್ಟೇಶನ್ ಇಲ್ಲ, ಅವರು ಇಲ್ಲಿಗೆ ಬಂದಿರುವುದು ವಿದ್ಯುತ್ ಉತ್ಪಾದನೆ ಮಾಡಲು ಅಲ್ಲ, ಬದಲಾಗಿ ಸರ್ಕಾರಿ ಭೂಮಿ ಕಬಳಿಕೆ ಮಾಡಲು ಎಂದು ಆರೋಪಿಸಿದರು.
ಸುಣ್ಣಕಲ್ ಗ್ರಾಮದಲ್ಲಿ 62 ಎಕರೆ ಸರ್ಕಾರಿ ಭೂಮಿ ಇದೆ ಅದರ ಸುತ್ತಲೂ ಇರುವ ವೇಷಗಾರರು, ಕುರುಬ ಸಮುದಾಯದವರಿಗೆ ಎದುರಿಸಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿದ್ದಾರೆ, ಇದಲ್ಲದೆ ಕಂದಾಯ ಇಲಾಖೆಯ 49 ಎಕರೆ ಹಾಗೂ ಅರಣ್ಯ ಇಲಾಖೆಯ 43 ಎಕರೆ ಭೂಮಿಯನ್ನು ಆರ್.ಬಿ.ಶುಗರ್ಸ್ ಕಬಳಿಕೆ ಮಾಡಿ ಡೋಜರ್ ಹಾಗೂ ಹಿಟಾಚಿಯಿಂದ ಭೂಮಿಯನ್ನು ಲೇವಲ್ ಮಾಡುವ ಕೆಲಸ ನಡೆಯುತ್ತಲೇ ಇದೆಎಂದರು.
ರೈತರ ಮೇಲೆ ದೌರ್ಜನ್ಯ :
ಸರ್ವೆ 73ರ 26 ಎಕರೆ 38 ಗುಂಟೆ ಖಾರೇಜಖಾತ ಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಹಾಗೂ ಪಹಣಿಯ ಸಾಗುವಳಿ ಕಾಲಂನಲ್ಲಿ ಹೆಸರಿರುವ ಬಡ ರೈತರಾದ ಹನುಮಪ್ಪ ಚೌಡಕಿ ಹಾಗೂ ಹನುಮಪ್ಪ ಕುರಬರ್ ಇವರ ಮೇಲೆ ಬಾಡಿಗೆ ಗುಂಡಾಗಳಿ0ದ ದೌರ್ಜನ್ಯ ಮಾಡಿ ಇವರ ಗುಡಿಸಲು ಕಿತ್ತು ಹಾಕುವ ಬೆದರಿಕೆ ಹಾಕಿದ್ದಾರೆ ಇದಕ್ಕೆ ಪೊಲೀಸ್ ಇಲಾಖೆಯವರು ಸಾಥ್ ನೀಡುತ್ತಿರುವುದು ದುರಂತವಾಗಿದೆ ಎಂದರು.
ಈ ಬಗ್ಗೆ ಕರ್ನಾಟಕ ರೈತ ಸಂಘ ನೀಡಿದ ದೂರಿನ್ವಯ ತಹಶೀಲ್ದಾರರು ಸರ್ವೆಗೆ ಆದೇಶ ಮಾಡಿದ್ದರು, 60 ಎಕರೆ ಭೂಮಿಯನ್ನು ಒಂದೇ ಗಂಟೆಯಲ್ಲಿ ಸರ್ವೆ ಮಾಡಿ ಕಂದಾಯ ಹಾಗೂ ಅರಣ್ಯ ಇಲಾಖೆ ಭೂಮಿ ಒತ್ತುವರಿಯಾಗಿಲ್ಲ ಎಂದು ತಹಶೀಲ್ದಾರ ಶಂಶಾಲ0 ಆರ್.ಬಿ.ಶುಗರ್ಸ್ ಕಂಪನಿಗೆ ಕ್ಲಿನ್ ಚೀಟ್ ನೀಡಿರುವುದು ಎಷ್ಟರಮಟ್ಟಿಗೆ ಸರಿ..? 2020ರಲ್ಲಿ ಕಂಪನಿ ಕಾರ್ಯ ಮುಗಿಯಬೇಕಿತ್ತು ಆದರೆ 2024 ಮುಗಿಯುತ್ತಾ ಬಂದರೂ ಪರವಾನಿಗೆ ನಿಯಮದ ಪ್ರಕಾರ ಸರ್ಕಾರಕ್ಕೆ ವರದಿ ಸಲ್ಲಿಸದ ತಹಶೀಲ್ದಾರ ಕಂಪನಿ ಪರವಾಗಿ ಕೆಲಸ ಮಾಡುತ್ತಿರುವುದು ಬಹಿರಂಗವಾಗಿದೆ ಎಂದರು.
ಅರಣ್ಯ ಇಲಾಖೆಯ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬುದು ಸುಪ್ರೀಂ ಕೋರ್ಟ ಆದೇಶವಿದ್ದರೂ ಸಹ ತಾಲೂಕಿನ ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಿ 60 ಕೇಸ್‌ಗಳನ್ನು ಹಾಕಿದ್ದಾರೆ. ಬಡವರ ಮೇಲೆ ಕೇಸ್ ಹಾಕ್ತಾರೆ ಆದರೆ ಶ್ರೀಮಂತರ ಭೂಮಿ ಒತ್ತುವರಿ ಮಾಡಿದರೆ ಅವರ ಯಾವುದೇ ಕೇಸ್ ಹಾಕೋಲ್ಲ ಬದಲಾಗಿ ಅವರ ಬೆಂಬಲ ನಿಲ್ಲುವ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿ ಹೋರಾಟ ಮಾಡಲಿ :
ಮುಡಾ ಹಗರಣದ Muda Scam ವಿರುದ್ಧ ಬಿಜೆಪಿಯವರು ಮೈಸೂರುವರಿಗೆ ಪಾದಯಾತ್ರೆ ಮಾಡಿದರು ಆದರೆ( Muda Scam )ಮುಡಾ ಹಗರಣಕ್ಕಿಂತ ದೊಡ್ಡ ಹಗರಣ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಾಲೂಕಿನ ಸುಣ್ಣಕಲ್‌ನಲ್ಲಿ ಮಾಡಿದ್ದಾರೆ Muda Scam ಇದರ ಬಗ್ಗೆ ಪಾದಯಾತ್ರೆ ಮಾಡಲಿ, ಸ್ಥಳೀಯ ಶಾಸಕ ಮಾನಪ್ಪ ವಜ್ಜಲ್ ಬಿಜೆಪಿಯವರಾಗಿದ್ದರೂ ಕೂಡಾ ತಾಲೂಕಿನಲ್ಲಿ ಆಗಿರುವ Muda Scam ಹಗರಣದ ಬಗ್ಗೆ ಧ್ವನಿ ಎತ್ತದೇ ಮೌನವಾಗಿದ್ದರೆ ಏನು ಅರ್ಥ ಎಂದು ಹರಿಹಾಯ್ದರು.
ಬೇಡಿಕೆಗಳು :
ತಾಲೂಕಿನಲ್ಲಿರುವ ಸರ್ಕಾರಿ ಭೂಮಿ ಸಾಗುವಳಿ ಮಾಡಿದ ಎಲ್ಲಾ ಭೂ ರಹಿತರಿಗೆ ಪಟ್ಟಾ ಕೊಡಬೇಕು. ಸುಣ್ಣಕಲ್ ಸರ್ಕಾರಿ ಭೂಮಿ ಕಬಳಿಕೆ ಮಾಡಿದ ಆರ್.ಬಿ.ಶುಗರ್ಸ್ ಮೇಲೆ ಪ್ರಕರಣ ದಾಖಲಿಸಬೇಕು. ಸರ್ಕಾರಿ ಕಂದಾಯ ಪರಂಪೂಕ್ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿದ ರೈತರ ಮೇಲೆ ದೌರ್ಜನ್ಯ ನಿಲ್ಲಿಸಬೇಕು. ತಾಲೂಕಿನಲ್ಲಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ಭೂ ರಹಿತ ಬಡವರಿಗೆ ಹಂಚಿಕೆ ಮಾಡಬೇಕು. ಹೊಸೂರು ಗ್ರಾಮದಲ್ಲಿ ಹಂಚಲಾದ ಹೆಚ್ಚುವರಿ ಭೂಮಿ ಕಬ್ಜಾ ಕೊಡಿಸಬೇಕು. ಭೂ ರಹಿತ ಸಾಗುವಳಿದಾರರ ಮೇಲೆ ಹಾಕಿದ ಕೇಸ್‌ಗಳನ್ನು ವಾಪಸ್ಸು ಪಡೆಯಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಡೆಸಲಾಯಿತು.
ಈ ವೇಳೆ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ ಕಂದೇಗಾಲ್,ಕಾರ್ಯದರ್ಶಿ ಮಂಜುನಾಥ ಸಣ್ಣಪ್ಪ, ಹಿರಿಯ ಮುಖಂಡ ಎಂ.ಗAಗಾಧರ್, ತಾಲೂಕು ಅಧ್ಯಕ್ಷ ವೀರಭದ್ರಪ್ಪ ಹಡಪದ, ತಿಪ್ಪಣ್ಣ ಚಿಕ್ಕಹೆಸರೂರು, ಬಸವರಾಜ ಬಡಿಗೇರ್, ಗಂಗಾಧರ ನಾಯಕ, ಆದೇಶ ನಗನೂರು, ಬಸವರಾಜ ಚಿಕ್ಕಹೆಸರೂರು, ರಮೇಶ, ಎಂ.ನಿಸರ್ಗ ಸೇರಿದಂತೆ ಅನೇಕರಿದ್ದರು.