ಕೃಷಿ ಅಧಿಕಾರಿ ನೇಮಕಕ್ಕೆ ರೈತ ಸಂಘ ಆಗ್ರಹ
ಲಿಂಗಸುಗೂರು : ಮಸ್ಕಿ ತಾಲೂಕು(maski taluku) ಕೇಂದ್ರವಾಗಿದ್ದರೂ ಈವರಿಗೆ ಕೃಷಿ ಅಧಿಕಾರಿಗಳು(Agriculture officer) ಇಲ್ಲದೇ ಇಲ್ಲಿನ ರೈತರು(farmers) ನಾನಾ ಸಂಕಷ್ಟ ಎದುರಿಸುವಂತಾಗಿದೆ ಕೂಡಲೇ (Agricultural Officer) ಕೃಷಿ ಅಧಿಕಾರಿಯನ್ನು ನೇಮಕ ಮಾಡುವಂತೆ ರೈತ ಸಂಘದ ಪದಾಧಿಕಾರಿಗಳು ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮಸ್ಕಿ ತಾಲೂಕಿನ ಕೃಷಿ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ (Agricultural Officer )ಕೃಷಿ ಅಧಿಕಾರಿಗಳ (ಎಓ) ಹುದ್ದೆ ಖಾಲಿ ಇದ್ದು ಹುದ್ದೆ ಭರ್ತಿ ಮಾಡುವಂತೆ ಈಗಾಗಲೇ ಸಾಕಷ್ಟು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ. ರೈತರ ಹಲವಾರು ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿರುತ್ತವೆ. ಕೂಡಲೇ ಮಸ್ಕಿ ತಾಲೂಕಿನಲ್ಲಿ ಕೃಷಿ ಅಧಿಕಾರಿಗಳನ್ನು ನೇಮಕ ಮಾಡಿ ಅಲ್ಲದೇ ಕಛೇರಿಯ ಎಲ್ಲಾ ಸಿಬ್ಬಂದಿಗಳನ್ನು ನೇಮಕ ಮಾಡಿ ರೈತರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಹಾಗೂ ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆ0ದು ಈ ಮೂಲಕ ಒತ್ತಾಯಿಸುತ್ತೇವೆ.
Agricultural Officer
ಕೃಷಿ ಪರಿಕರ ಕಾಳಸಂತೆಯಲ್ಲಿ ಮಾರಾಟ :
ಲಿಂಗಸುಗೂರು ಮತ್ತು ಮಸ್ಕಿ ತಾಲೂಕಿನಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಕೂಡಲೇ ಕಡಲೆ ಹಾಗೂ ಶೇಂಗಾ ಬೀಜಗಳನ್ನು ವಿತರಣೆ ಮಾಡಬೇಕು. ಮಸ್ಕಿ ತಾಲೂಕಿಗೆ ಸುಮಾರು 2 ವರ್ಷಗಳಿಂದ ಬಂದ0ತಹ ಕೃಷಿ ಪರಿಕರಗಳನ್ನು ಹಂಚಿಕೆ ಮಾಡದೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಕೂಡಲೇ ಅದನ್ನು ತಡೆ ಹಿಡಿದು ಕಾಳಸಂತೆಯಲ್ಲಿ ಮಾರಾಟ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಮಸ್ಕಿ ಕೃಷಿ ಇಲಾಖೆಯ ಸಿಬ್ಬಂದಿ ಸಿದ್ದರಾಮ ಇವರ ಕೃಷಿ ಪರಿಕರಗಳನ್ನು ಕಾಳಸಂತೆಯಲ್ಲಿ ಮಾರಾಟದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮಸ್ಕಿ ತಾಲೂಕಿಗೆ ಬಂದAತ ಡೆಮೋ ಕ್ರಿಮಿನಾಶಕ, ಬೀಜಗಳು ಹಾಗೂ ಇತರೆ ಸಾಮಾಗ್ರಿಗಳನ್ನು ರೈತರಿಗೆ ಹಂಚಿಕೆ ಮಾಡಬೇಕು. ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಲಿಂಗಸುಗೂರು, ಮಸ್ಕಿ ತಾಲೂಕು ಘಟಕಗಳ ಪದಾಧಿಕಾರಿಗಳು ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಲಿಂಗಸುಗೂರು ತಾಲೂಕು ಅಧ್ಯಕ್ಷ ಪ್ರಸಾದರೆಡ್ಡಿ, ಮಸ್ಕಿ ತಾಲೂಕು ಅಧ್ಯಕ್ಷ ಶರಣಪ್ಪ ಕುಣಿಕೆಲ್ಲೂರು, ಮಲ್ಲಪ್ಪ ಮಿಟ್ಟಿಕೆಲ್ಲೂರು, ಹನುಮಗೌಡ, ಅಮರೇಶ ಮೇಟಿ, ನಿರುಪಾದಿ ಕುಣಿಕೆಲ್ಲೂರು ಸೇರಿದಂತೆ ಅನೇಕರಿದ್ದರು.