suddiduniya.com

waterfalls : ಧುಮ್ಮಿಕ್ಕಿ ಹರಿಯುತ್ತಿರುವ ಬಿಸಿಲು ನಾಡಿನ ಜಲಪಾತ

waterfalls

ಗೊಲ್ಲಪಲ್ಲಿ ಜಲಪಾತ

ಲಿಂಗಸುಗೂರು : ಜಲಪಾತವೆಂದರೆ waterfalls ಮಲೆನಾಡಿನತ್ತ ಮುಖ ಮಾಡುವ ಈ ಭಾಗದ ಜನರ ಮನವನ್ನು ತಣಿಸಲು ಬಿಸಿಲು ನಾಡು ಲಿಂಗಸುಗೂರು(lingasugur) ತಾಲೂಕಿನಲ್ಲಿರುವ ಗೊಲ್ಲಪಲ್ಲಿ ಜಲಪಾತ(Gollapally Falls) ಧುಮ್ಮಿಕ್ಕಿ ಹರಿಯುತ್ತಿದ್ದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಲಿಂಗಸಗೂರಿನಿಂದ ಸುರಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಬೀದರ ಶ್ರೀರಂಗಪಟ್ಟಣ ರಸ್ತೆ ಪಕ್ಕದಲ್ಲಿರುವ (waterfalls )ಗೋಲಪಲ್ಲಿ ಜಲಪಾತದ ನೀರು ಧುಮ್ಮಿಕ್ಕುವ ದೃಶ್ಯ ದೂರದಿಂದಲೇ ಕಾಣುತ್ತಿದೆ. ಗುಡಗುಂಟದಿಂದ ಸುಮಾರು 4 ಕಿಮೀ ದೂರದ ನಂತರ ಅರ್ಧ ಕಿಮೀ ದೂರ ಬೈಕ್‌ಗಳು ಮಾತ್ರ ಹೋಗುವಂತ ರಸ್ತೆ ಇದೆ. ಈ ರಸ್ತೆಯಲ್ಲಿ ಹೋದರೆ ಹೊಳೆಯಂತೆ ಹರಿಯುವ ಹಳ್ಳದ ನೀರು ಗುಡ್ಡದ ಕಲ್ಲುಗಳ ಮಧ್ಯೆ ಭೋರ್ಗರೆಯುತ್ತಾ ಮೊದಲು ಈ ಜಲಪಾತ ಸಣ್ಣದಾಗಿ ಹರಿಯುತ್ತಿತ್ತು, ಜಲಪಾತದ ನೀರು ಗೋಲಪಲ್ಲಿ ಹಳ್ಳಕ್ಕೆ ಬರುತ್ತಿರುವದರಿಂದ ನೀರಿನ ಭೋರ್ಗರೆತ ಜೋರಾಗಿದೆ.

ಜಲಪಾತ ನೋಡ ಬಯಸುವವರಿಗೆ ಯಾವುದೇ ಸೌಲಭ್ಯ ಇದ್ದರೂ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವುದರಿಂದ ಈ ಪ್ರದೇಶ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ತಿಂಡಿ ತಿನಿಸು ಕಟ್ಟಿಕೊಂಡು ಕುಟುಂಬ ಸಮೇತವಾಗಿ ಬಂದು( waterfalls )ಜಲಪಾತದ ಸೊಬಗು ಸವಿದು, ಇಲ್ಲಿಯೇ ಉಪಾಹಾರ ಸೇವಿಸಿ ಮರಳುತ್ತಾರೆ.

waterfalls

ಒನ್ ಡೇ ಪಿಕ್‌ನಿಕ್ :

ಜಲಪಾತ ನೋಡಬಯಸುವವರಿಗೆ ಒಂದು ದಿನದ ಪಿಕ್‌ನಿಕ್‌ಗೆ ಪ್ಲಾನ್ ಮಾಡಿಕೊಳ್ಳಲು ಅಮರೇಶ್ವರ ದೇವಸ್ಥಾನ, ಗೊಲಪಲ್ಲಿ, ವೀರಗೋಟ, ಕಾಗಿನೆಲೆ ಕನಕಗುರುಪೀಠ, ತಿಂಥಣಿ ಮೌನೇಶ್ವರ ದೇವಸ್ಥಾನ ದರ್ಶನ ಮಾಡಿಕೊಂಡು ಬರಲು ಯೋಗ್ಯವಾದ ಸ್ಥಳಗಳಾಗಿವೆ.

ಅಭಿವೃದ್ಧಿ ಅಗತ್ಯ :

ಜಿಲ್ಲೆಯಲ್ಲಿ ಏಕೈಕ ಜಲಪಾತವಾದ ಗೊಲಪಲ್ಲಿ ಜಲಪಾತ ಅಭಿವೃದ್ಧಿಗೊಳಿಸುವುದು ತೀರಾ ಅಗತ್ಯವಾಗಿದೆ. ತಾಲೂಕಿನ ಪ್ರವಾಸೋಧ್ಯಮಕ್ಕೆ ಮತ್ತಷ್ಟು ಮೆರಗು ನೀಡುವಂತಹ ಜಲಪಾತಕ್ಕೆ ರಾಷ್ಟಿçÃಯ ಹೆದ್ದಾರಿಯಿಂದ ಸಮರ್ಪಕ ರಸ್ತೆಯೇ ಇಲ್ಲದಂತಾಗಿದೆ. ಕನಿಷ್ಠ ಪಕ್ಷ ಕಚ್ಚಾ ರಸ್ತೆ ಇದ್ದರೂ ಜನರು ಹೋಗುತ್ತಾರೆ ಆದರೆ ಕಾರು ತೆಗೆದುಕೊಂಡು ಹೋಗುವವರು ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಅರ್ಧ ಕ್ರಿ.ಮೀ ನಡೆಯಬೇಕಾದ ಸ್ಥಿತಿ ಇದೆ. ಜಿಲ್ಲಾಡಳಿತ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಚ್ಚಾ ರಸ್ತೆಯನ್ನಾದರೂ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ.

waterfalls
ಗೊಲ್ಲಪಲ್ಲಿ ಜಲಪಾತ

ಅಭಿವೃದ್ಧಿಯಿಂದ ಆದಾಯ :

ರಾಷ್ಟಿಯ ಹೆದ್ದಾರಿಯಲ್ಲಿ ಜಲಪಾತ ಇರುವ ಬಗ್ಗೆ ನಾಮಫಲಕಗಳನ್ನು ಹಾಕುವುದರ ಜೊತೆಗೆ ಗೊಲಪಲ್ಲಿ ಜಲಪಾತ ಸುತ್ತಮುತ್ತ ಉದ್ಯಾನವನ, ಮಕ್ಕಳ ಉದ್ಯಾನವನ ನಿರ್ಮಾಣ ಮಾಡಿ ಜಲಪಾತ ಅಭಿವೃದ್ಧಿಗೊಳಿಸಿದರೆ ಜಲಪಾತ ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಆದಾಯ ತರುವುದರ ಜೊತೆ ಪರೋಕ್ಷವಾಗಿ ಎಷ್ಟು ಕುಟಂಬಗಳಿಗೆ ಉದ್ಯೋಗ ಸಿಗುವಂತಾಗುತ್ತಿದೆ. ಈ ಬಗ್ಗೆ ಜನಪ್ರತಿನಿಗಳು ಹಾಗೂ ಜಿಲ್ಲಾಡಳಿತ ಗಮನ ಹರಿಸಿ ಜಲಪಾತ ಅಭಿವೃದ್ಧಿಗೆ ಮುಂದಾಗಬೇಕಾಗಿದೆ.

ಗೊಲ್ಲಪಲ್ಲಿ ಜಲಪಾತ

ನಮ್ಮ ಭಾಗದಲ್ಲಿ ಗೊಲಪಲ್ಲಿ ಜಲಪಾತ ಅಪರೂಪವಾಗಿದೆ. ಇದನ್ನು ಅಭಿವೃದ್ಧಿಗೊಳಿಸಿದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ, ಜಿಲ್ಲಾಡಳಿತ ಗೊಲಪಲ್ಲಿ ಜಲಪಾತ ಅಭಿವೃದ್ಧಿಗೊಳಿಸಲು ಮುಂದಾಗಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!