suddiduniya.com

ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ, ಉಪಾಧ್ಯಕ್ಷೆ ಶರಣಮ್ಮ ಅವಿರೋಧ ಆಯ್ಕೆ

ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ, ಉಪಾಧ್ಯಕ್ಷೆಯಾಗಿ ಶರಣಮ್ಮ ಅವಿರೋಧ ಆಯ್ಕೆ

ಲಿಂಗಸುಗೂರು : ಭಾರಿ ಕೂತುಹಲ ಹಾಗೂ ಜಿದ್ದಾಜಿದ್ದಿನ ಪ್ರತಿಷ್ಠೆ ಕಣವಾಗಿದ್ದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು. ಅಧ್ಯಕ್ಷರಾಗಿ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ, ಉಪಾಧ್ಯಕ್ಷೆಯಾಗಿ ಶರಣಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. 23 ಸದಸ್ಯರ ಬಲ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾತಿ ಘೋಷಣೆಯಾಗಿತ್ತು. ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪೈಪೂಟಿ ಸಹಜವಾಗಿತ್ತು, ಅದಕ್ಕೆ ಮೇಲಾಗಿ ಕಾಂಗ್ರೆಸ್‌ನಲ್ಲಿ ಎಂಎಲ್ಸಿ ಶರಣಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಣಗಳು ನಡುವೆ ಜಿದ್ದಾಜಿದ್ದಿನ ಪೈಪೂಟಿ ಹಲವು ಕೂತುಹಲಕ್ಕೆ ಕಾರಣವಾಗಿತ್ತು. ಮಂಗಳವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಬಾಬುರೆಡ್ಡಿ ಮುನ್ನೂರು ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಸದಸ್ಯೆ ಶರಣಮ್ಮ ಕೊಡ್ಲಿ ನಾಮಪತ್ರ ಸಲ್ಲಿಸಿದ್ದರು, ಎರಡು ಸ್ಥಾನಗಳಿಗೆ ತಲಾ ಒಂದೊ0ದೇ ನಾಮಪತ್ರ ಸಲ್ಲಿಸಿದ್ದರಿಂದ ತಹಶೀಲ್ದಾರ ಶಂಶಾಲ0 ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.

ಪ್ರಯಾಸದಿಂದ ಕಾಂಗ್ರೆಸ್ ಅಧಿಕಾರಕ್ಕೆ :

ಪುರಸಭೆ ಮೊದಲ ಅವಧಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಸರಳ ಬಹುಮತ ಇದ್ದ ಕಾಂಗ್ರೆಸ್‌ನಲ್ಲಿ ಎಸ್‌ಸಿ ಮಹಿಳಾ ಸದಸ್ಯರು ಇಲ್ಲದ ಕಾರಣ ಜೆಡಿಎಸ್‌ನ ಗದ್ದೆಮ್ಮ ಭೋವಿ ಹಾಗೂ ಸುನೀತಾ ಕೆಂಭಾವಿ ಅವರಿಗೆ ಅಧ್ಯಕ್ಷರಾಗಲು ಅದೃಷ್ಟ ಕೂಡಿಬಂದಿತ್ತು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಖುಷಿ ಪಡುವಂತಾಗಿತ್ತು. ಆದರೆ ಈಗ ಎರಡನೇ ಅವಧಿಯಲ್ಲಿ ಕಾಂಗ್ರೆಸ್‌ನ 13 ಸದಸ್ಯರ ಪೈಕಿ 4 ನಾಲ್ಕು ಸದಸ್ಯರು ಪಕ್ಷಾಂತರ ಕಾಯ್ದೆಯಡಿಯಲ್ಲಿ ಅನರ್ಹಗೊಳಿಸಲಾಗಿತ್ತು, ಅನರ್ಹಗೊಂಡ ಸದಸ್ಯರು ಹೈಕೋರ್ಟ್ನ ಮೊರೆ ಹೋಗಿ ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ದಿಸಲು ಹಾಗೂ ಮತಹಾಕಲು ಅವಕಾಶ ಪಡೆದುಕೊಂಡರೂ ಆ ನಾಲ್ಕು ಜನ ಸದಸ್ಯರು ಬಯ್ಯಾಪುರ ಬಣದ ಜೊತೆ ಗುರುತಿಸಿಕೊಂಡಿದ್ದರು, ಕಾಂಗ್ರೆಸ್ ಅಧಿಕಾರದ ಗದ್ದುಗಗೇರಲು ದಾರಿ ಸರಳವಾಗಿದ್ದರೂ ಕೂಡಾ ಆದರೆ ಬಣ ರಾಜಕೀಯದಿಂದಾಗಿ ಪ್ರಯಾಸದಿಂದ ಕಾಂಗ್ರೆಸ್ ಅಧಿಕಾರಕ್ಕೇರಬೇಕಾಯಿತು. (ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ)

ಮೇಲಗೈ ಸಾಧಿಸಿದ ಹೂಲಗೇರಿ:

ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಣಗಳಿಗೆ ಪ್ರತಿಷ್ಠೆಯಾಗಿತ್ತು, ಯಾರೇ ಅಧ್ಯಕ್ಷರಾದರೂ ಕಾಂಗ್ರೆಸ್‌ನವರೇ ಆಗಬೇಕು, ಆದರೆ ನಮ್ಮ ಬಣದವರೇ ಆಗಬೇಕೆಂದು ಎರಡು ಬಣಗಳ ನಾಯಕರು ಪಣತೊಟ್ಟಿದ್ದರು, ಇದರಿಂದ ಯಾವುದೇ ಮೂಲದಿಂದಾದರೂ ಸರಿ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ನಾನಾ ರೀತಿಯ ಕಸರತ್ತು ನಡೆಸಿ ಕೊನೆಯ ಕ್ಷಣದಲ್ಲಿ ಬಯ್ಯಾಪುರ ಬಣದಲ್ಲಿದ್ದ ಮೂರು ಜನ ಸದಸ್ಯರನ್ನು ಹಾಗೂ ಕೆಲ ಪಕ್ಷೇತರ ಸದಸ್ಯರನ್ನು ತಮ್ಮ ಸೆಳೆಯುವಲ್ಲಿ ಹೂಲಗೇರಿ ಬಣ ಯಶಸ್ವಿಯಾಗಿದ್ದಲ್ಲದೆ ತಮ್ಮ ಬಣವನ್ನೇ ಅಧಿಕಾರಕ್ಕೇರುವಂತೆ ಮಾಡಲಾಗಿದೆ. ಇದರಿಂದ ಬಯ್ಯಾಪುರ ಬಣಕ್ಕೆ ಭಾರಿ ಮುಖಭಂಗ ಉಂಟಾಗಿದೆ.

ಮುನ್ನೂರು ಕಾಪು ಸಮಾಜದ 3ನೇ ವ್ಯಕ್ತಿ :

ಈ ಹಿಂದಿನಿ0ದಲೂ ಪುರಸಭೆ ಆಡಳಿತ ಮುನ್ನೂರು ಕಾಪು ಸಮಾಜದ ಹಿಡಿತದಲ್ಲಿರುತ್ತಿತ್ತು, ದಿ.ಶ್ಯಾಮಸುಂದರರೆಡ್ಡಿ ಮುನ್ನೂರು 1980ರಿಂದ 1990ವರಗೆ, ದಿ.ಶ್ರೀನಿವಾಸರೆಡ್ಡಿ ಮುನ್ನೂರು 1990-1995ರವರಿಗೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ 29 ವರ್ಷಗಳ ನಂತರ ಈಗ ಮುನ್ನೂರು ಕಾಪು ಸಮಾಜಕ್ಕೆ ಅಧ್ಯಕ್ಷಗಿರಿ ಒಲಿದು ಬಂದು ಬಾಬುರೆಡ್ಡಿ ಮುನ್ನೂರು ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.(ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ,)


10 ಜನ ಸದಸ್ಯರು ಗೈರು: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಭೆಯಲ್ಲಿ 23 ಸದಸ್ಯರ ಪೈಕಿ 13 ಜನ ಸದಸ್ಯರು ಹಾಜರಾಗಿದ್ದರು, ಸದಸ್ಯರಾದ ಹಾಗೂ ಬಯ್ಯಾಪುರ ಬಣದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸೋಮನಾಥರೆಡ್ಡಿ, ಫಾತೀಮಾ, ಗದ್ದೆಮ್ಮ, ಗಿರಿಜಮ್ಮ, ಜರೀನಾಬೇಗಂ, ಮೌಲಸಾಬಾ, ಪ್ರಮೋದಕುಮಾರ, ಯಮನಪ್ಪಗೌಡ ಮೇಟಿ, ಸುನಿತಾ ಕೆಂಭಾವಿ, ಮುದುಕಪ್ಪ ಗೈರಾಗಿದ್ದರು.

ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ, ಉಪಾಧ್ಯಕ್ಷೆಯಾಗಿ ಶರಣಮ್ಮ ಅವಿರೋಧ ಆಯ್ಕೆ


ವಿಜಯೋತ್ಸವ : ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪುರಸಭೆ ಕಚೇರಿ, ಗಡಿಯಾರ ವೃತ್ತ, ಬಸ್ ನಿಲ್ದಾಣ ವೃತ್ತ ಹಾಗೂ ಕಾಂಗ್ರೆಸ್ ಕಚೇರಿ ಬಳಿ ಪಟಾಕಿ ಸಿಡಿಸಿ ವಿಜಯೋತ್ಸವ ನಡೆಸಿದರು.

ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ, ಉಪಾಧ್ಯಕ್ಷೆಯಾಗಿ ಶರಣಮ್ಮ ಅವಿರೋಧ ಆಯ್ಕೆ


ಪೊಲೀಸ್ ಬಿಗಿ ಬಂದೋಬಸ್ತ್ : ಎರಡು ಬಣಗಳ ಪ್ರತಿಷ್ಠೆ ಕಣವಾಗಿದ್ದ ಪುರಸಭೆ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು, ಲಿಂಗಸುಗೂರು ಹಾಗೂ ಸಿಂಧನೂರು ಡಿವೈಎಸ್ಪಿಗಳ ನೇತ್ರತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವ ಜೊತೆಗೆ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹಾಗೂ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಮನೆಗಳಿಗೆ ಪೊಲೀಸ್ ಕಾವಲು ಹಾಕಲಾಗಿತ್ತು.

ಬಣ ಇಲ್ಲ ಕಾಂಗ್ರೆಸ್ ಒಗ್ಗಟ್ಟಾಗಿದೆ :

ಕಾಂಗ್ರೆಸ್ ವಿಜಯೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಸಂಸದ ಜಿ.ಕುಮಾರ ನಾಯಕ್, ತಾಲೂಕಿನ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳು ಇಲ್ಲ ಎಲ್ಲಾರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!