suddiduniya.com

Dussehra celebration :ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ

ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ

ಛಾವಣಿ ದಸರಾ ಉತ್ಸವ

ಲಿಂಗಸುಗೂರು : ಕಲ್ಯಾಣ ಕರ್ನಾಟಕದಲ್ಲಿಯೇ ಮಾದರಿಯಾಗುವಂತೆ ಪಟ್ಟಣದಲ್ಲಿ ಮುಂದಿನ ವರ್ಷ ಛಾವಣಿ ದಸರಾ ಅತಿ ವಿಜ್ರಂಬಣೆಯಿಂದ ಆಚರಣೆ ಮಾಡೋಣ, ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ ಎಂದು ಶಾಸಕ ಮಾನಪ್ಪ ವಜ್ಜಲ್‍ ಭರವಸೆ ನೀಡಿದರು.

ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ

ಪಟ್ಟಣದ ದೊಡ್ಡ ಆಂಜನೇಯ ದೇವಸ್ಥಾನದ ಬಳಿ ಛಾವಣಿ ದಸರಾ ಉತ್ಸವ ಸಮಿತಿ ದಸರಾ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ರಾಯಚೂರಿನ ಶ್ರೇಯಸ್ಸ ಹಾಗೂ ತಂಡದಿಂದ ನಡೆದ ಭರತ್ ನಾಟ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಪುರಾತನದಿಂದಲೂ ದಸರಾ ಆಚರಣೆ ಮಾಡುತ್ತಾ ಬಂದಿದ್ದೇವೆ, ಒಂಬತ್ತು ದಿನಗಳ ಕಾಲ ದೇವಿ ಆರಾಧನೆ ಮಾಡುವ ಮೂಲಕ ನವರಾತ್ರಿ ಆಚರಣೆ ಮಾಡುತ್ತಿದ್ದೇವೆ. ದಸರಾ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ ಇಡೀ ಮಾನವ ಕುಲಕ್ಕೆ ಸೀಮಿತವಾಗಿದೆ .ನಾಡಿನಲ್ಲಿ ಶಾಂತಿ ನೆಮ್ಮದಿಗಾಗಿ ಹಬ್ಬ ಆಚರಣೆ ಮಾಡಲಾಗುತ್ತಿದೆ ಇದು ಭಾರತೀಯ ಸಂಪ್ರದಾಯವಾಗಿದೆ ಎಂದರು.

ಮುಂದಿನ ವರ್ಷ ವಿಜ್ರಂಭಣೆಯಿಂದ ದಸರಾ ಆಚರಣೆ :

ಛಾವಣಿ ದಸರಾ ಉತ್ಸವ ಸಮಿತಿಯವರು ಕಳೆದ 15 ವರ್ಷಗಳಿಂದ ದಸರಾ ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ನಮ್ಮ ಸಂಪ್ರದಾಯ ಉಳಿಸಲು ದಸರಾ ಸಂಭ್ರಮದ ನೆಪದಲ್ಲಿ ಕಲೆ,ಸಾಹಿತ್ಯ ಧಾರ್ಮಿಕ ಸೇರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಶ್ಲಾಘನೀಯ ಸಂಗತಿಯಾಗಿದೆ. ಲಿಂಗಸುಗೂರು ಕ್ಷೇತ್ರ ನನಗೆ ಮೂರು ಭಾರಿ ಶಾಸಕನಾಗಲು ಆಶೀರ್ವಾದ ಮಾಡಿದೆ. ಈ ಹಿಂದಿನಿಂದಲೂ ದಸರಾ ಆಚರಣೆಗೆ ಸಹಕಾರ ನೀಡುತ್ತಿದ್ದೇನೆ. ತಾಲೂಕಿನಲ್ಲಿಯೇ ಏನೇ ಆಚರಣೆಗಳು ನಡೆದರೂ ನನಗೆ ಅತೀವ ಸಂತಸ ತರುತ್ತದೆ. ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಯಲು ಗಣೇಶ ಚತುರ್ಥಿ,ಹೋಳಿ, ದಸರಾ ಉತ್ಸವಗಳು ಪ್ರತಿವರ್ಷವೂ ನಡೆಯಬೇಕು. ಮುಂದಿನ ವರ್ಷ ಛಾವಣಿ ದಸರಾ ಸಂಭ್ರಮ ಇಡೀ ಕಲ್ಯಾಣ ಕರ್ನಾಟಕ್ಕೆ ಮಾದರಿಯಾಗುವಂತೆ ದಸರಾ ಆಚರಣೆಗೆ ನಾನೂ ಸಂಪೂರ್ಣ ಸಹಕಾರ ನೀಡುವೆ.ಪ್ರತಿ ದಿನವೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ವಿಜ್ರಂಭಣೆಯಿಂದ ದಸರಾ ಆಚರಣೆ ಮಾಡೋಣ , ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ, ತಾಲೂಕಿನ ಐತಿಹಾಸಿಕ ಮುದಗಲ್‍ ಕೋಟೆ ಉತ್ಸವ ಮಾಡುವುದು ನನ್ನ ಗುರಿಯಾಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಶಕ್ತಿಮೀರಿ ಪ್ರಯತ್ನಗಳು ನಡೆಸಿದ್ದೇನೆ. ಅದು ಸಾಕಾರಗೊಂಡರೆ ತಾಲೂಕಿನ ಹಿರಿಯರ ಹಾಗೂ ಮುಖಂಡರ ಸಲಹೆ ಮೇರಿಗೆ ಕೋಟೆ ಉತ್ಸವ ಮಾಡುತ್ತೇನೆ ಎಂದರು.

ದಸರಾ ಆಚರಣೆಗೆ ಸರ್ಕಾರದ ನೆರವು ಅಗತ್ಯ :

ಈ ವೇಳೆ ಛಾವಣಿ ದಸರಾ ಉತ್ಸವ ಸಮಿತಿ ಸಂಚಾಲಕ ಮಂಜುನಾಥ್ ಕಾಮಿನ್ ಮಾತನಾಡಿ, ಸಮಿತಿಯಿಂದ ಈ ವರ್ಷ 15ನೇ ದಸರಾ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಪಟ್ಟಣದ ಎಲ್ಲಾ ಸಮುದಾಯಗಳ, ಸಂಘ ಸಂಸ್ಥೆ, ಹಾಗೂ ಹಿರಿಯ ಮುಖಂಡರ ಸಹಕಾರದಿಂದ ದಸರಾ ಆಚರಣೆ ಮಾಡುತ್ತಿದ್ದೇವೆ. ಆದರೆ ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕಿನಲ್ಲಿ ನಡೆಯುವ ದಸರಾ ಆಚರಣೆಗೆ ಸರ್ಕಾರ ಹಣಕಾಸಿನ ನೆರವು ನೀಡಲಾಗುತ್ತಿದೆ. ಆದರೆ ಛಾವಣಿ ದಸರಾ ಆಚರಣೆಗೆ ಸರ್ಕಾರದಿಂದ ನೆರವು ಒದಗಿಸಿಕೊಟ್ಟರೆ ಪ್ರತಿ ವರ್ಷಕ್ಕಿಂತ ಮತ್ತಷ್ಟು ವಿಜ್ರಂಭಣೆಯಿಂದ ನಾಡಹಬ್ಬ ಆಚರಣೆ ಮಾಡಲು ನಮಗೆ ಪ್ರೇರಣೆ ಸಿಗುತ್ತೆ, ಇದಕ್ಕೆ ಶಾಸಕರು ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಛಾವಣಿ ದಸರಾ ಉತ್ಸವ ಸಮಿತಿಯಿಂದ ಶಾಸಕ ಮಾನಪ್ಪ ವಜ್ಜಲ್‍ ರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಯಚೂರಿನ ಭರತ ನಾಟ್ಯ ಕಲಾವಿಧ ಶ್ರೇಯಸ್ಸು ಜೋಷಿ ಹಾಗೂ ತಂಡದಿಂದ ನಡೆಸಿಕೊಟ್ಟ ಭರತ ನಾಟ್ಯ ನೆರೆದಿದ್ದ ಪ್ರಕ್ಷೇಕರ ಮನತಣಿಸುವಂತೆ ಮಾಡಿತು.

ಈ ವೇಳೆ ಛಾವಣಿ ಉತ್ಸವ ಸಮಿತಿ ಪದಾಧಿಕಾರಿಗಳಾದ ಜಿ.ವಿ.ಕೆಂಚನಗುಡ್ಡ, ಶರಣಬಸವ ವಾರದ್,ಅರುಣ್ ಖಂಡೇಲಾಲ್, ಸುದೀರ್ ಶ್ರೀವಾಸ್ತವ, ಅಶೋಕ ದಿಗ್ಗಾವಿ, ಸತೀಶ ಪತ್ತಾರ ಸೇರಿದಂತೆ ಅನೇಕರಿದ್ದರು.

ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ

ಯರಡೋಣಾದಲ್ಲೂ ಅದ್ಧೂರಿ ದಸರಾ :

ತಾಲೂಕಿನ ಯರಡೋಣಾ ಗ್ರಾಮದ ಸಿದ್ಧರಾಮೇಶ್ವರ ಗುರುಮಠದಲ್ಲಿ ಶ್ರೀಮಠದ ಪೀಠಾಧಿಪತಿ ಮುರುಘೇಂದ್ರ ಶಿವಯೋಗಿಗಳು ನೇತ್ರತ್ವದಲ್ಲಿ ನವರಾತ್ರಿ ಅಂಗವಾಗಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ದೇವಿ ಪುರಾಣ ಪಠಣ ಮಾಡಲಾಗುತ್ತಿದೆ. ಬಾಲ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಶ್ರೀಮಠದ ಕುರಿತು ಶಿವಶಂಕರ್‍ ಬಿರಾದರ್ ಅವರ ಸಾಹಿತ್ಯದಲ್ಲಿ ಓಂಕಾರ್ ಆಡಿಯೋ ಕಂಪನಿಯವರು ಹೊರತಂದ “ ಚಿನ್ನದ ನಾಡಿನ ಚಿತ್ಕಳೆ “ ದ್ವನಿಸುರಳಿಯನ್ನು ಮುರುಘೇಂದ್ರ ಶಿವಯೋಗಿಗಳು ಬಿಡುಗಡೆಗೊಳಿಸಿದರು.

ಮಾದರಿ ಛಾವಣಿ ದಸರಾ ಆಚರಣೆಗೆ ಸಹಕಾರ ನೀಡುವೆ

ನಂತರ ಆಶೀರ್ವಚನ ನೀಡಿದ ಮುರುಘೇಂದ್ರ ಶಿವಯೋಗಿಗಳು, ನವರಾತ್ರಿ ಪುರಾಣಕಾಲದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗೆಯ 9 ರೂಪಗಳನ್ನು ವಿಧಿ – ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ನವರಾತ್ರಿಯ ದಿನಗಳಲ್ಲಿ, ದುರ್ಗಾ ದೇವಿಯು ಒಂಬತ್ತು ದಿನಗಳವರೆಗೆ ಭೂಮಿಗೆ ಬಂದು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಅದೇ ರೀತಿ ನವರಾತ್ರಿಯ ಎಂಟನೇ ದಿನವನ್ನು ಮಾತೆ ಮಹಾಗೌರಿಗೆ ಸಮರ್ಪಿಸಲಾಗಿದೆ. ಮಹಾಗೌರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಆಕೆಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸುವುದರಿಂದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳೂ ದೂರವಾಗುತ್ತವೆ ಎಂದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!