ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ
ಲಿಂಗಸುಗೂರು : ರಾಯಚೂರು ಸಹಾಯಕ ಆಯುಕ್ತ ಮಹಿಬೂಬಿ ಅವರನ್ನು ಅವಧಿಗೂ ಮುನ್ನವೇ ವಗಾರ್ವಣೆ ಮಾಡಿದ್ದು ಸರಿಯಲ್ಲ, ಕೂಡಲೇ ವರ್ಗಾವಣೆ ಆದೇಶ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ 9 ತಿಂಗಳ ಹಿಂದೆ ರಾಯಚೂರು ಎಸಿ ಯಾಗಿ ಬಂದ ಮಹಿಬೂಬಿ ಅವರನ್ನು ಸೆ.13ರಂದು (AC transfer) ಹಠಾತ್ತನೆ ವರ್ಗಾವಣೆ ಮಾಡಿದ ಕ್ರಮ ಖಂಡನೀಯ. ಏಕೆಂದರೆ ಇದು ಅವಧಿಗೆ ಪೂರ್ವ ವರ್ಗಾವಣೆಯಾಗಿರುತ್ತದೆ. ಅಲ್ಲದೇ ಈ ಅಧಿಕಾರಿಯ ವರ್ಗಾವಣೆಗೆ ರಾಯಚೂರು ಉಪ ವಿಭಾಗ ಸೇರಿ ಇಡೀ ಜಿಲ್ಲೆಯಿಂದ ಯಾವುದೇ ಜನ, ಸಂಘಟನೆ ಅಥವಾ ಸಮುದಾಯಗಳು ಸರಕಾರಕ್ಕೆ ಕೇಳಿಕೊಂಡಿರುವುದಿಲ್ಲ. ಅಲ್ಲದೆ ಈ ಅಧಿಕಾರಿಯ ಮೇಲೆ ಆಡಳಿತ ಹಾಗೂ ಸಾರ್ವಜನಿಕ ಸೇವೆಗೆ ಸಂಬ0ಧಿಸಿದ ಯಾವುದೇ ಪ್ರಕರಣಗಳು ದಾಖಲೆಯಾಗಿ ಆರೋಪ ಸಾಬೀತಾಗಿರುವುದಿಲ್ಲ. ಅವರು ಕೇವಲ 8-9 ತಿಂಗಳಲ್ಲಿಯೇ ಅತ್ಯಂತ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅನೇಕ ಭೂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿರುತ್ತಾರೆ. ಅಲ್ಲದೇ ಸರಕಾರ ವಹಿಸಿದ ಅದ್ಯ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡುತ್ತಾ ಬಂದಿರುತ್ತಾರೆ.
ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಕುಂದು ಕೊರತೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ. ರೈತ ಹಾಗೂ ಕಾರ್ಮಿಕರ ಮಹಿಳೆಯರ ವಿಷಯದಲ್ಲೂ ಮುಂದೆ ನಿಂತು ಕರ್ತವ್ಯ ನಿರ್ವಹಿಸಿ ಜನಸ್ನೇಹಿ ಆಡಳಿತ ನಿರ್ವಹಿಸಿದ್ದಾರೆ.
ಆದೇಶ ಹಿಂಪಡೆಯಲಿ :
ಆಷ್ಟಕ್ಕೂ ಸದರಿ ಅಧಿಕಾರಿಯು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕೆಂದು ಕರೆಸಿಕೊಂಡ ದೇವದುರ್ಗ ತಾಲೂಕಿನವರಾಗಿದ್ದಾರೆ. ದಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆ. ಕಡುಬಡತನದ ನಡುವೆ ಕೆಎಎಸ್ ತೇರ್ಗಡೆ ಹೊಂದಿ ರಾಜ್ಯದಲ್ಲಿಯೇ ಮೊಟ್ಟಮೊದಲ ಮುಸ್ಲಿಂ ಮಹಿಳಾ ಕೆಎಎಸ್ ಅಧಿಕಾರಿಯಾಗಿ ಸರಕಾರದ ಕರ್ತವ್ಯದಲ್ಲಿದ್ದಾರೆ. ಇಂತವರನ್ನು ಈ ಜಿಲ್ಲೆಯಿಂದ ತತಕ್ಷಣ ವರ್ಗಾವಣೆ ಮಾಡುವುದು ಎಷ್ಟು ಸರಿ? ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಸರಕಾರ ಕೊಡುವ ಗೌರವ ಇದೇನಾ? ಮಹಿಬೂಬಿ ಸಹಾಯಕ ಆಯುಕ್ತರಾಗಿ ಇಲ್ಲಿನ ಸರಕಾರಿ ಭೂ ಕಬಳಿಕೆದಾರರಿಗೆ, ಅಕ್ರಮ ದಂಧೆಕೋರರಿಗೆ ಸಾರ್ವಜನಿಕ ಶಾಂತಿ ಕದಡುವ ಶಕ್ತಿಗಳ ಆಟ ನಡೆಯದಂತೆ ನೋಡಿಕೊಂಡಿರುತ್ತಾರೆ. ಇಲ್ಲಿನ ಒಬ್ಬೊಬ್ಬ ರಾಜಕಾರಣಿಗಳ ದುಷ್ಟ ದಂಧೆಗೆ ಇವರು ಮಣಿ ಹಾಕಲಿಲ್ಲ ಎಂಬ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ. ಕಾರಣ ಕೂಡಲೇ ಇವರ ವರ್ಗಾವಣೆ ಆದೇಶವನ್ನು ಹಿಂಪಡೆದು ಮಹಿಬೂಬಿ ಅವರನ್ನು ರಾಯಚೂರಿನಲ್ಲಿಯೇ ಮುಂದುವರೆಸಬೇಕೆ0ದು ಆಗ್ರಹಿಸಿದರು.
ಈ ವೇಳೆ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಆದೇಶ ನಗನೂರು, ಕೆಆರ್‌ಎಸ್ ತಾಲೂಕು ಅಧ್ಯಕ್ಷ ವೀರಭದ್ರಪ್ಪ ತೊರಲಬೆಂಚಿ, ಕಾರ್ಯದರ್ಶಿ ಬಸವರಾಜ್ ಬಡಿಗೇರ್, ಚಿದಾನಂದ ಕಸಬಾ ಲಿಂಗಸುಗೂರು, ತಿಪ್ಪಣ್ಣ ಚಿಕ್ಕೆಸರೂರು, ಎಂ ನಿಸರ್ಗ, ಬಸವರಾಜ್ ಹಿರೇಹೆಸರೂರು, ರುಕ್ಮಿಣಿ ಗೆಜ್ಜಲಗಟ್ಟ, ರಮೇಶ್ ನಾಯಕ್, ಶರಣಪ್ಪ ಹಿರೇಸರೂರು ಹಾಗೂ ಇನ್ನಿತರಿದ್ದರು.