suddiduniya.com

Accused Arrested ಬಸ್ಸಿಗೆ ಕಲ್ಲು ಎಸೆದು ಆತಂಕ ಸೃಷ್ಠಿಸಿದ್ದ ಆರೋಪಿ ಅರೆಸ್ಟ್

Accused Arrested

ಲಿಂಗಸುಗೂರು : ತಾಲೂಕಿನ ಗೊಲ್ಲಪಲ್ಲಿ ಘಾಟ್‍ನಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಆತಂಕ ಸೃಷ್ಠಿಗೆ ಕಾರಣವಾದ ಘಟನೆಯ ಪ್ರಮುಖ ಆರೋಪಿ ಓರ್ವನನ್ನು ಬಂಧಿಸುವಲ್ಲಿ (Accused Arrested )ಹಟ್ಟಿ ಪೊಲೀಸ್‍ರು ಯಶಸ್ವಿಯಾಗಿದ್ದಾರೆ.ಇನ್ನೂ ಮೂರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.

Attempted Robbery

ನವೆಂಬರ್ 19ರಂದು ಬೆಳಗಿನ ಜಾವ ತಾಲೂಕಿನ ಗೊಲ್ಲಪಲ್ಲಿ ಘಾಟ್‍ನಲ್ಲಿ ಕಲ್ಯಾಣ ಸಾರಿಗೆ ಸಂಸ್ಥೆ ಬಸ್‍ಗಳು, ಕಾರು, ಲಾರಿಗಳು ಸೇರಿ ಇನ್ನಿತರ ಖಾಸಗಿ ವಾಹನಗಳ ಮೇಲೆ ಏಕಾಏಕಿಯಾಗಿ ಕಲ್ಲುತೂರಾಟ ನಡೆಸಿದ ಘಟನೆಯಲ್ಲಿ ರಾಜ್ಯವ್ಯಾಪಿ ಸದ್ದು ಮಾಡಿತ್ತು, 30 ಅಧಿಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ದರೋಡೆಗೆ ಯತ್ನ ನಡೆಯುತ್ತಿದೆಯಾ ಎಂಬ ಆತಂಕ ವಾಹನ ಚಾಲಕರು ಹಾಗೂ ಪ್ರಯಾಣಿಕರಲ್ಲಿ  ಮನೆ ಮಾಡಿತ್ತು. ಇದರಿಂದ ಗೊಲ್ಲಪಲ್ಲಿ ಘಾಟ್‍ನಲ್ಲಿ ಕೆಲವು ಗಂಟೆಗಳ ಕಾಲ ಆತಂಕ ಹಾಗೂ ಭಯದ ವಾತಾವರಣ ಸೃಷ್ಠಿಯಾಗಿತ್ತು. ಈ ಘಟನೆಯನ್ನು ಪೊಲೀಸ್‍ರು ಗಂಭೀರವಾಗಿ ತೆಗೆದುಕೊಂಡು ತನಿಖೆ ತೀವೃಗೊಳಿಸಿದ್ದರು.

ಈ ಪ್ರಕರಣ ಬೆನ್ನಟ್ಟಿದ ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿಗಳು ಹಟ್ಟಿ ಪೊಲೀಸ್ ಇನ್ಸಪೆಕ್ಟರ್ ಹೊಸಕೇರಪ್ಪ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಈ ವಿಶೇಷ ತಂಡ ತಮ್ಮ ಜೀಪಿನಲ್ಲಿ ತೆರಳುವ ಬದಲು ಆಟೋದಲ್ಲಿ ಮಾರುವೇಷದಲ್ಲಿ ಗೊಲ್ಲಪಲ್ಲಿ ಸುತ್ತಮುತ್ತ ದೊಡ್ಡಿಗಳಲ್ಲಿ ಸಂಚಾರ ಮಾಡಿ ಈ ಪ್ರಕರಣದ ಬಗ್ಗೆ ಅನುಮಾನಗೊಂಡ ಒಬ್ಬ ಆರೋಪಿಯನ್ನು (Accused Arrested )ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಇನ್ನುಳಿದ ಮೂರು ಆರೋಪಿಗಳೊಂದಿಗೆ ಸೇರಿ ಬಸ್‍, ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಂಧನಕ್ಕೊಳಾಗದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ತಮ್ಮ ಅಕ್ಕ ಮತ್ತು ಮಾವನನ್ನು ಬೆಂಗಳೂರಿಗೆ ಕಳುಹಿಸಲು ಧುಮತಿದೊಡ್ಡಿಯಿಂದ ಗುರುಗುಂಟಾಗೆ ಬಂದು ಬೆಂಗಳೂರಿಗೆ ತೆರಳುವ ಬಸ್ಸ್ ಗಳಲ್ಲಿ ಸೀಟ್ ಸಿಗಲಿಲ್ಲ ಹಾಗೂ ಕೆಲವು ಬಸ್‍ಗಳು ನಿಲ್ಲಿಸದೇ ಹಾಗೇ ಹೋಗಿದ್ದೇ ಆರೋಪಿಗಳ ಸಿಟ್ಟಿಗೆ ಕಾರಣವಾಗಿದೆ. ಈ ನಾಲ್ಕು ಜನ ಆರೋಪಿಗಳು ಗೊಲ್ಲಪಲ್ಲಿ ಘಾಟ್‍ನಲ್ಲಿ ಮಧ್ಯಪಾನ ಮಾಡಿ ಕುಡಿದ ಅಮಲಿನಲ್ಲಿ ಗೊಲ್ಲಪಲ್ಲಿ ಘಾಟ್ ಮಾರ್ಗವಾಗಿ ಬರುವ ಸರ್ಕಾರಿ ಬಸ್‍, ಇತರೆ ಖಾಸಗಿ ವಾಹನಗಳ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ನಾಲ್ಕು ಜನ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ, (Accused Arrested )ಇನ್ನೂ ಮೂರು ಜನರನ್ನು ಪತ್ತೆಗಾಗಿ ಪೊಲೀಸ್ ತಂಡ ಶೋಧಕಾರ್ಯ ನಡೆಸಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!