suddiduniya.com

Actor Salman Khan : ಸಲ್ಮಾನ್‌ ಖಾನ್‌ಗೆ ಜೀವಬೆದರಿಕೆ : ಮಾನವಿಯಲ್ಲಿ ಯುವಕನ ಅರೆಸ್ಟ್

Actor Salman Khan

ಲಿಂಗಸುಗೂರು : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ( Actor Salman Khan ) ಜೀವ ಬೆದರಿಕೆ ಹಾಕಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಯುವಕನನ್ನು ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಮುಂಬಯಿ ಪೊಲೀಸ್ ರು ಬಂಧಿಸಿದ್ದಾರೆ.

Actor Salman Khan

ನಟ ಸಲ್ಮಾನ ಖಾನ್ ನನ್ನು ಕೊಲ್ಲುವುದಾಗಿ ಮುಂಬಯಿ ಪೊಲೀಸ್‍ ರಿಗೆ ಮೆಸೇಜ್ ಬರುತ್ತಿರುವುದು ಪೊಲೀಸ್ ರಿಗೆ ಹೊಸ ತಲೆನೋವು ಶುರುವಾಗಿದೆ. ಅದೇ ರೀತಿ ಸಲ್ಮಾನ್ ಖಾನನನ್ನು ಕೊಲ್ಲುವುದಾಗಿ ಸಂದೇಶ ಕಳುಹಿಸಿದ್ದ ರಾಯಚೂರು ಜಿಲ್ಲೆಯ ಮಾನವಿ ಸೋಹೆಲ್ ಪಾಷಾ (24) ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಟೋಯಿ ಹೆಸರಲ್ಲಿ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಹೆಲ್ ಪಾಶಾನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 7ರಂದು ಮುಂಬೈ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ ಸುಹೇಲ್, 5 ಕೋಟಿ ಕೊಡದಿದ್ದರೆ ( Actor Salman Khan) ಸಲ್ಮಾನ್‌ರನ್ನು ಕೊಲ್ಲಲಾಗುವುದು ಮತ್ತು ಮೈ ಸಿಕಂದರ್ ಹೂಂ ಎಂಬ  ಗೀತೆ ರಚನೆಕಾರರನ್ನು ಹತ್ಯೆ ಮಾಡಲಾಗುವುದು ಎಂದು ವೆಂಕಟ ನಾರಾಯಣ ಎಂಬುವವರ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಹಾಕಿದ್ದ. ಸಂದೇಶ ಬಂದ ನಂತರ ಮುಂಬಯಿ ಪೊಲೀಸ್ ರು ತನಿಖೆ ನಡೆಸಿ ಸಂದೇಶ ಕಳುಹಿಸಿದ ಸೋಹೆಲ್ ನನ್ನು ಮುಂಬಯಿ ಮಾನವಿಯಲ್ಲಿ ಬಂಧಿಸಿ ಮುಂಬಯಿಗೆ ಕರೆದೊಯ್ದದಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!