ಏಮ್ಸ್ ಸ್ಥಾಪನೆಗಾಗಿ ಹೋರಾಟ 900ನೇ ದಿನಕ್ಕೆ
ಲಿಂಗಸುಗೂರು : ರಾಯಚೂರಿನಲ್ಲಿಯೇ( AIIMS needed for Raichur )ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ಏಮ್ಸ್ ) ಸ್ಥಾಪಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 900ನೇ ದಿನ ಪೂರೈಸಿದ್ದರಿಂದ, ಕೂಡಲೇ ಕೇಂದ್ರ ಸರ್ಕಾರ 900ದಿನಗಳ ಹೋರಾಟಕ್ಕೆ ಸ್ಪಂದಿಸಿ (AIIMS needed for Raichur ) ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ತಾಲೂಕು ಏಮ್ಸ್ ಹೋರಾಟ ಸಮಿತಿ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅದರಲ್ಲೂ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಬಹಳಷ್ಟು ಹಿಂದುಳಿದೆ. ಇದಕ್ಕೆ ಜಿಲ್ಲೆಯ ರಾಜಕೀಯ ಇಚ್ಛಾಸಕ್ತಿ ಕೊರತೆಯೂ ಕಾರಣವಾಗಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕೆಂಬ ಮಹತ್ವದ ಶಿಫಾರಸ್ಸು ಮಾಡಲಾಗಿತ್ತು. ಆದರೆ ನಾನಾ ಪ್ರಯತ್ನಗಳನ್ನು ಮಾಡಿದಾಗಲೂ ಕೇಂದ್ರ ಸರ್ಕಾರ ಧಾರವಾಡದ ರಾಜಕೀಯ ಪ್ರಭಾವಕ್ಕೆ ಮಣಿದು ಧಾರವಾಡಕ್ಕೆ ಐಐಟಿ ಮಂಜೂರು ಮಾಡಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿದ್ದು ಇನ್ನೂ ಮರೆಯಲಾರದ ಘಟನೆಯಾಗಿದೆ.
ಕರ್ನಾಟಕದಲ್ಲಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅದರಲ್ಲೂ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಬಹಳಷ್ಟು ಹಿಂದುಳಿದೆ. ಇದಕ್ಕೆ ಜಿಲ್ಲೆಯ ರಾಜಕೀಯ ಇಚ್ಛಾಸಕ್ತಿ ಕೊರತೆಯೂ ಕಾರಣವಾಗಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕೆಂಬ ಮಹತ್ವದ ಶಿಫಾರಸ್ಸು ಮಾಡಲಾಗಿತ್ತು. ಆದರೆ ನಾನಾ ಪ್ರಯತ್ನಗಳನ್ನು ಮಾಡಿದಾಗಲೂ ಕೇಂದ್ರ ಸರ್ಕಾರ ಧಾರವಾಡದ ರಾಜಕೀಯ ಪ್ರಭಾವಕ್ಕೆ ಮಣಿದು ಧಾರವಾಡಕ್ಕೆ ಐಐಟಿ ಮಂಜೂರು ಮಾಡಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿದ್ದು ಇನ್ನೂ ಮರೆಯಲಾರದ ಘಟನೆಯಾಗಿದೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏಮ್ಸ್ ಮಂಜೂರು ಮಾಡುವುದಾಗಿ 2020ರಲ್ಲಿ ಘೋಷಣೆ ಮಾಡಿದ್ದು ಸ್ವಾಗತಾರ್ಹವಾಗಿದೆ. ಅಂದಿನಿಂದ( AIIMS needed for Raichur )ಏಮ್ಸ್ ರಾಯಚೂರಿಗೆ ಬೇಕು ಎಂಬ ಹೋರಾಟ ಪ್ರಾರಂಭ ಮಾಡಿದ್ದರಿಂದ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬೇಕಾಗುವ ಅಗತ್ಯ ಮೂಲಸೌಕರ್ಯ ಒದಗಿಸುವುದಾಗಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಪತ್ರ ಬರೆಯಲಾಗಿದೆ.
ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಬೇಕು ಎಂದು 2022ರಿಂದ ಏಮ್ಸ್ ಹೋರಾಟ ಸಮಿತಿಯಿಂದ ರಾಯಚೂರಿನಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿ ಅದರ ಮೂಲಕ ನಾನಾ ರೀತಿಯ ಪ್ರತಿಭಟನೆ, ಬಂದ್, ರಕ್ತ ಸಹಿ ಸಂಗ್ರಹ, ಜಿಲ್ಲಾದ್ಯಂತ ನಾನಾ ರೀತಿ ಹೋರಾಟ ಮಾಡಿ 900 ದಿನಗಳ ಪೂರೈಸಿ ಸುದೀರ್ಘ ಹೋರಾಟ ಮುಂದುವರಿದೆ. ಈ ನಡುವೆ ಹೋರಾಟ ಸಮಿತಿಯ ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಮನವಿಗೆ ಸ್ಪಂದಿಸದ ಸಚಿವರು ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೀಯ.
ಪ್ರತಿಕ್ರೀಯೆ ನೀಡದ ಪಿಎಂ :
ಹೋರಾಟ ಸಮಿತಿ ಪ್ರಧಾನಿಮಂತ್ರಿಗಳ ಭೇಟಿ ಸಮಯ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದರೂ ಇದುವರಿಗೂ ಭೇಟಿಗೂ ಅವಕಾಶ ನೀಡಿಲ್ಲ, ಹಿಂದುಳಿದ ಹಾಗೂ ಮಹತ್ವಾಕಾಂಕ್ಷಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಸಿಎಂ ಸಿದ್ಧರಾಮಯ್ಯನವರು ಖುದ್ದಾಗಿ ಮನವಿ ಸಲ್ಲಿಸಿದರೂ ಪ್ರಧಾನಮಂತ್ರಿಗಳು ಇದಕ್ಕೆ ಪ್ರತಿಕ್ರೀಯೆ ನೀಡದೇ ಇರುವುದು ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ.
ಐಐಟಿ ವಂಚಿತ ರಾಯಚೂರಿಗೆ ಏಮ್ಸ್ ಬೇಕು :
ರಾಯಚೂರು ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸುವಲ್ಲಿ ಆದ ಚಾರಿತ್ರಿಕ ಅನ್ಯಾಯವನ್ನು ಏಮ್ಸ್ ಸ್ಥಾಪಿಸುವ ಮೂಲಕ ಸರಿಪಡಿಸುವ, ಪ್ರಾದೇಶಿಕ ಅಸಮತೋಲನ ನಿವಾರಿಸುವ ಸುಸಂದರ್ಭ ಕೇಂದ್ರ ಸರ್ಕಾರಕ್ಕೆ ಒದಗಿಬಂದಿದೆ. ಏಮ್ಸ್ ಸ್ಥಾಪನೆಗೆ ರಾಯಚೂರು ಜಿಲ್ಲೆ ಸೂಕ್ತವಾಗಿದೆ. ಕೃಷ್ಣಾ, ತುಂಗಭದ್ರ ನದಿಗಳು ಸಮೃದ್ಧ ನೀರು, ವಿಶಾಲವಾದ ಭೂಪ್ರದೇಶ, ರಾಜ್ಯಕ್ಕೆ ಬೆಳೆಕು ನೀಡುವ ಥರ್ಮಲ್ ವಿದ್ಯುತ್ ಸ್ಥಾವರಗಳು, ದೇಶದ ಏಕೈಕ ಚಿನ್ನದ ಗಣಿ, ಬೃಹತ್ ಹತ್ತಿ ಮಾರುಕಟ್ಟೆ, ಎರಡು ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು, ಸೇರಿದಂತೆ ಹಲವಾರು ಸಂಗತಿಗಳಿAದ ವಿಶೇಷತೆ ಪಡೆದಿದೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗ ಸೇರಿ ಎಲ್ಲಾ ಇದ್ದ ಇಲ್ಲದಂತಿರುವ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಇಡೀ ದೇಶದಲ್ಲಿಯೇ ಹಿಂದುಳಿದಿರುವುದು ವಿಪರ್ಯಾಸ ಸಂಗತಿಯಾಗಿದೆ.
ರಾಯಚೂರು ಜಿಲ್ಲೆಯ ಉನ್ನತ ವೈದ್ಯಕೀಯ ತಂತ್ರಜ್ಞಾನಗಳ ಕೊರತೆಯಿಂದಾಗಿ ನೂರಾರು ರೋಗಗಳ ಅಗರವಾಗಿದೆ. ಅಪೌಷ್ಟಿಕತೆಯಲ್ಲಿ ಇಡೀ ದೇಶದಲ್ಲಿ ರಾಯಚೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ತಾಯಿ-ಶಿಶುಗಳ ಮರಣ ಸಂಖ್ಯೆ ಅತ್ಯಧಿಕವಾಗಿದೆ. ಇಲ್ಲಿಯ ಬಡ ಜನತೆ ದೀನ ದಲಿತರ, ಹಿಂದುಳಿದ ವರ್ಗಗಳಿಗೆ ಉನ್ನತ ವೈದ್ಯಕೀಯ ಸೇವೆ ಗಗನ ಕುಸಮವಾಗಿದೆ.
ನೀತಿ ಆಯೋಗದ ಶಿಫಾರಸ್ಸಿನಂತೆ ರಾಯಚೂರು ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಆಧ್ಯತೆ ನೀಡಬೇಕಾಗಿದೆ, ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಮಹತ್ವಕಾಂಕ್ಷಿ ಯೋಜನೆಗಳು ಸ್ಥಾಪನೆಯಾಗಿರುದಿಲ್ಲ ಇದು ಇಡೀ ಜಿಲ್ಲೆಯ ಜನತೆಗೆ ಬೇಸರ ತಂದಿದೆ.
ಹೆಸರಿಗಷ್ಟೇ ಕಲ್ಯಾಣ ಕರ್ನಾಟಕ :
ಉತ್ತರ ಕರ್ನಾಟಕದ ಹೆಸರಿನಲ್ಲಿ ಎಲ್ಲಾ ಬೃಹತ್ ಯೋಜನೆಗಳು ಹುಬ್ಬಳ್ಳಿ ಧಾರವಾಡಕ್ಕೆ ತೆಗೆದುಕೊಂಡು ಹೋದರೆ ಕಲ್ಯಾಣ ಕರ್ನಾಟಕದ ಸ್ಥಿತಿ ಏನಾಗಬೇಕು, ಹೆಸರಿಗಷ್ಟೇ ಕಲ್ಯಾಣ ಕರ್ನಾಟಕವೇ ಹೀಗಾದರೆ ಪ್ರಾದೇಶಿಕ ಅಸಮತೋಲನೆ ನಿವಾರಣೆ ಹೇಗೆ ಸಾಧ್ಯವಾಗುತ್ತಿದೆ, ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆಯ ಮೇಲೆ ರಾಜಕೀಯ ಅಧಿಕಾರದ ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಹುಬ್ಬಳ್ಳಿ-ಧಾರವಾಡದಲ್ಲಿ ಯಾವುದೇ ಹೋರಾಟ, ಮನವಿ ನೀಡದೇ ಅಲ್ಲಿ ಬೃಹತ್ ಯೋಜನೆಗಳು ಮಂಜೂರು ಆಗುತ್ತಿದ್ದು, ಆದರೆ 900 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಜಿಲ್ಲೆಯ ದೌರ್ಭಾಗ್ಯವಾಗಿದೆ.
(AIIMS needed for Raichur )ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಿಸಬೇಕು ಎಂದು ಆಗ್ರಹಿಸಿ ಎಸಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕು ಏಮ್ಸ್ ಹೋರಾಟ ಸಮಿತಿ ಮುಖಂಡರಾದ ಡಿ.ಬಿ.ಸೋಮನಮರಡಿ, ನಾಗರಾಜ ಗಸ್ತಿ, ಗವಿಸಿದ್ಧಪ್ಪ ಸಾಹುಕಾರ, ಮಹೇಶ ಶಾಸ್ತ್ರೀ, ದುಗರಪ್ಪ ಸರ್ಜಾಪುರ, ಗಿರಿಮಲ್ಲನಗೌಡ ಕರಡಕಲ್, ಗೋವಿಂದ ನಾಯಕ, ಅಮರೇಶ ತಾವರಗೇರಾ, ಬಸವರಾಜ, ದೇವರಡ್ಡಿ ಮೇಟಿ, ಮೋಹನ ಗೋಸ್ಲೆ, ತಿಮ್ಮಾರೆಡ್ಡಿ, ಜಿಲಾನಿಪಾಶಾ, ಅಮರೇಶ, ಶಿವಬಸಯ್ಯ, ದೇವಪ್ಪ, ಚಂದ್ರಕಾಂತ ಹೊನ್ನಹಳ್ಳಿ, ಮಾದೇಶ ಸರ್ಜಾಪುರ, ಅಮರೇಶ ಗುಂಡಸಾಗರ ಸೇರಿದಂತೆ ಅನೇಕರಿದ್ದರು.