ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆದ ಹೋರಾಟ 1000 ದಿನಕ್ಕೆ
ಲಿಂಗಸುಗೂರು : ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ (AIIMS )ಮಾಡುವಂತೆ ರಾಯಚೂರಿನಲ್ಲಿ ನಡೆಯುತ್ತಿರುವ ಹೋರಾಟ ಒಂದು ಸಾವಿರ ದಿನಕ್ಕೆ ಕಾಲಿಟ್ಟಿದ್ದರಿಂದ ಇದಕ್ಕೆ ಬೆಂಬಲಿಸಿ ತಾಲೂಕು ಏಮ್ಸ್ ಹೋರಾಟ ಸಮಿತಿ ನೇತ್ರತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿ ಆವರಣಕ್ಕೆ ಬಂದು ತಲುಪಿತು. ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದ ವಿವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ, ರಾಜ್ಯದಲ್ಲಿ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಪ್ರದೇಶದಲ್ಲಿ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಬಹಳಷ್ಟು ಹಿಂದುಳಿದೆ. . ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ರಾಯಚೂರು ಜಿಲ್ಲೆ ಹಿಂದುಳಿವಿಕೆಗೆ ಪ್ರಾದೇಶಿಕ ಅಸಮತೋಲನಕ್ಕೆ ಶೈಕ್ಷಣಿಕ, ಆರೋಗ್ಯ, ಸೌಲಭ್ಯ ಮತ್ತು ಔದ್ಯೋಗಿಕರಣದ ಕೊರತೆಯೇ ಪ್ರಮುಖ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಐಐಟಿ ಸ್ಥಾಪಿಸಬೇಕೆಂಬ ಮಹತ್ವದ ಶಿಫಾರಸ್ಸು ಮಾಡಲಾಗಿತ್ತು. ಇದಕ್ಕಾಗಿ ಬಹಳಷ್ಟು ಹೋರಾಟ ನಡೆದರೂ ಅಂದಿನ ರಾಜ್ಯ ಸರಕಾರ ರಾಯಚೂರು, ಧಾರವಾಡ ಮತ್ತು ಮೈಸೂರು ಮೂರು ಹೆಸರು ಶಿಫಾರಸ್ಸು ಮಾಡಿ ಕೊನೆಗೆ ಧಾರವಾಡಕ್ಕೆ ಐಐಟಿ ಮಂಜೂರು ಆಗಿ ರಾಯಚೂರು ಜಿಲ್ಲೆಗೆ ಐಐಟಿ ತಪ್ಪುವಂತೆ ಮಾಡಿ ಜಿಲ್ಲೆಗೆ ಮಹಾ ದ್ರೋಹವಾಗಿದೆ ಎಂದರು.

ಏಮ್ಸ್ ರಾಯಚೂರು ಹಕ್ಕು :
ರಾಯಚೂರಿನಲ್ಲಿಯೇ ಏಮ್ಸ್ (AIIMS )ಸ್ಥಾಪಿಸಿದಲ್ಲಿ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪೂರೈಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಾಗುವುದು ಜಿಲ್ಲಾಧಿಕಾರಿಗಳಿಂದ 2020ರಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಏಮ್ಸ್ ಸ್ಥಾಪನೆ ಮಾಡುವುದಕ್ಕೆ ರಾಯಚೂರು ಜಿಲ್ಲೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಕೃಷ್ಣಾ, ತುಂಗಭದ್ರ ನದಿಗಳ ಸಮೃದ್ಧ ನೀರು ವಿಶಾಲವಾದ ಫಲವತ್ತಾದ ಭೂ ಪ್ರದೇಶ, ಇಡೀ ರಾಜ್ಯಕ್ಕೆ ಬೆಳಕು ನೀಡುವ ಆರ್ ಟಿಪಿಎಸ್, ವೈಟಿಪಿಎಸ್ ಥರ್ಮಲ್ ವಿದ್ಯುತ್ ಸ್ಥಾವರಗಳು, ದೇಶದ ಏಕೈಕ್ ಚಿನ್ನದ ಗಣಿಯಾದ ಹಟ್ಟಿ ಚಿನ್ನದ ಗಣಿ, ಶಿಕ್ಷಣ ಸಂಸ್ಥೆಗಳು, ಹತ್ತಿ ಮಾರುಕಟ್ಟೆ, ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಚಾಲನೆ ದೊರೆತಿದೆ. 180 ಕಿ.ಮಿ ಅಂತರದಲ್ಲಿ ಶಂಶಾಬಾದ್‍ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಇದ್ದೂ ಇಲ್ಲದಂತಿರುವ ರಾಯಚೂರು ಜಿಲ್ಲೆ ಎಲ್ಲಾ ರಂಗಗಳಲ್ಲೂ ಇಡೀ ದೇಶದಲ್ಲಿಯೇ ಹಿಂದುಳಿದಿರುವುದು ವಿಪಾರ್ಯಾಸ ಸಂಗತಿಯಾಗಿದೆ. 2020ರಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಿಲ್ಲೆ ಎಂದು ರಾಯಚೂರು ಘೋಷಣೆ ಮಾಡಿ ಇದರ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಬೇಕಾಗಿದೆ.

ಉತ್ತರ ಕರ್ನಾಟಕ ವೆಂದರೆ ಕೇವಲ ಧಾರವಾಡ ಜಿಲ್ಲೆ ಮಾತ್ರವೇ..?ಉತ್ತರ ಕರ್ನಾಟಕ ಹೆಸರಿನಲ್ಲಿ ಧಾರವಾಡ ಜಿಲ್ಲೆಯ ಪ್ರಬಲ ರಾಜಕೀಯ ಶಕ್ತಿಗಳು ನಮ್ಮ ಕಲ್ಯಾಣ ಕರ್ನಾಟಕದ ಪ್ರದೇಶದ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿವೆ ಪ್ರಮುಖ ಯೋಜನೆಗಳು ಧಾರವಾಡ ಜಿಲ್ಲೆಯಲ್ಲಿ ಸ್ಥಾಪನೆಯಾಗಿವೆ. ಆದರೆ ಕಲ್ಯಾಣ ಕರ್ನಾಟಕದ ಭಾಗದ ಪರಿಸ್ಥಿತಿ ಏನಾಗಬೇಕು. ಈಗಾಗದರೆ ಪ್ರಾದೇಶಿಕ ಅಸಮತೋಲನೆ ನಿವಾರಣೆ ಹೇಗೆ ಸಾಧ್ಯವಾಗುತ್ತದೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವುದಾಗಿ ಕೇಂದ್ರ ಸರಕಾರ ಘೋಷಿಸುವವರಿಗೂ ನಿರ್ಣಾಯಕವಾಗಿ ಹೋರಾಟ ಮುಂದುವರೆಯಲಿದೆ. ಪ್ರಧಾನಮಂತ್ರಿಗಳು ರಾಯಚೂರು ಮೇಲಾದ ರಾಜಕೀಯ ಅನ್ಯಾಯ ಸರಿಪಡಿಸಲು ಏಮ್ಸ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಏಮ್ಸ್ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು, ತಾಲೂಕಾಧ್ಯಕ್ಷ ವಿನಯ್ ಗಣಾಚಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಮುಖಂಡರಾದ ಸಿದ್ಧನಗೌಡ ಪೊಲೀಸ್ ಪಾಟೀಲ್, ಶರಣಬಸವ ಮೇಟಿ, ಡಿ.ಬಿ.ಸೋಮನಮರಡಿ, ಲಿಂಗಪ್ಪ ಪರಂಗಿ, ಸಂಜೀವಪ್ಪ ಹುನಕುಂಟಿ, ಮೋಹನ ಗೋಸ್ಲೆ, ವಿಜಯ ಪೋಳ್, ಅನಿಲಕುಮಾರ್, ನಾಗರಾಜ ಗಸ್ತಿ, ಕುಪ್ಪಣ್ಣ ಮಾಣಿಕ್, ತಿಮ್ಮಾರೆಡ್ಡಿ, ಅಮರೇಶ ಗುಂಡಸಾಗರ್, ಮಾದೇಶ ಸರ್ಜಾಪುರ, ಜಿಲಾನಿ ಪಾಶಾ, ಹನುಮಂತ ನಾಯಕ ಸೇರಿದಂತೆ ಇನ್ನಿತರಿದ್ದರು.