ಲಿಂಗಸುಗೂರಿನಲ್ಲಿ ಪ್ರತಿಭಟನೆ :
ಲಿಂಗಸುಗೂರು (LINAGSUGUR) : ಬಾಕಿಯಿರುವ 3 ತಿಂಗಳ ಗೌರವಧನ (3 months honorarium) ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಕ್ಷರ ದಾಸೋಹ (Akshara Dasoha) ನೌಕರರ ಸಂಘ ನೇತ್ರತ್ವದಲ್ಲಿ ಬಿಸಿಯೂಟ ನೌಕರರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ(protest) ನಡೆಸಿದರು.
ಮೂರು ತಿಂಗಳಿಂದ ವೇತನ ಇಲ್ಲ :
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಉದ್ದೇಶ (Akshara Dasoha) ಅಕ್ಷರದಾಸೋಹ ಯೋಜನೆ ಜಾರಿಗೆ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಂದು ಲಕ್ಷದ 20 ಸಾವಿರ ಮಹಿಳಾ ಕಾರ್ಮಿಕರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 60 ಲಕ್ಷ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿದ್ದಾರೆ. (Akshara Dasoha) ಬಿಸಿಯೂಟ ನೌಕರರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಕಳೆದ ಮೂರು ತಿಂಗಳಿ0ದ ಗೌರವಧನ ಬಿಡುಗಡೆಯಾಗದೇ ಕಡಿಮೆ ಸಂಬಳದಲ್ಲಿ ದುಡಿಯುವ ಬಿಸಿಯೂಟ ನೌಕರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದಸರಾ ಹಾಗೂ ದೀಪಾವಳಿ ಹಬ್ಬಗಳು ಬರುತ್ತಿದ್ದರಿಂದ ಮೂರು ತಿಂಗಳ ಗೌರವಧನ ಬಿಡುಗಡೆಗೊಳಿಸಬೇಕು.
ಬೇಸಿಗೆ ರಜೆಯಲ್ಲಿ ಏಪ್ರೀಲ್, ಮೇ ತಿಂಗಳಲ್ಲಿ ಕೆಲಸ ಮಾಡಲಾಗಿದ್ದು ಅದರ ಗೌರವಧನ ಬಿಡುಗಡೆಗೊಳಿಸಬೇಕು. ಅಗಸ್ಟ ಹಾಗೂ ಸೆಪ್ಟಂಬರ್ ತಿಂಗಳ ಗೌರವಧನ ಕೂಡಲೇ ಬಿಡುಗಡೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಪೋಲಿಂಗ್ ಭೂತ್‌ಗಳಲ್ಲಿ ಸಿಬ್ಬಂದಿಗಳಿಗೆ ಅಡುಗೆ ಮಾಡಿ ಬಡಿಸಿದ ರೇಷನ್ ಹಣ ಬಿಡುಗಡೆ ಮಾಡಬೇಕು. 2024 ಜುಲೈ 16ರಂದು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಮುಖ್ಯಕಾರ್ಯದರ್ಶಿಗಳು ಒಪ್ಪಿಗೆ ಸೂಚಿಸಿದ ಆದೇಶ ಮಾಡಿದ ನಿವೃತ್ತಿ ಹೊಂದಿದ ಬಿಸಿಯೂಟ ಕಾರ್ಮಿಕರಿಗೆ ಸೇವಾ ಜೇಷ್ಠತೆ ಮೇಲೆ ಇಡಿಗಂಟು ನೀಡಿದೆ ಆದರೆ ಇನ್ನೂ ಖಾತೆಗೆ ಜಮಾ ಆಗಿಲ್ಲ ಕೂಡಲೇ ಜಮಾ ಮಾಡಬೇಕು. ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರ ಜಂಟಿ ಖಾತೆ ರದ್ದು ಮಾಡಬೇಕು. ಮುಖ್ಯ ಅಡುಗೆಯವರು ಹಾಗೂ ಮುಖ್ಯ ಶಿಕ್ಷಕರ ಜಂಟಿ ಖಾತೆ ಮುಂದುವರಿಸಬೇಕು. ಶಾಲೆಗಳಲ್ಲಿ ಖಾಲಿಯಿರುವ ಮುಖ್ಯ ಅಡುಗೆ ಹಾಗೂ ಅಡುಗೆ ಸಹಾಯಕಿಯರನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ನೌಕರರ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವ ಅಧ್ಯಕ್ಷ ಎಂ.ಡಿ.ಹನೀಫ್, ಅಧ್ಯಕ್ಷೆ ಸಿದ್ಧಮ್ಮ, ಝರಿನಾಬೇಗಂ, ಶೈನಜಾಬೇಗಂ, ಕಮಲಾ, ನಿಂಗಪ್ಪ ವೀರಾಪುರ, ಅಲ್ಲಾಬಕ್ಷಾ ದೇವಪೂರು, ಹನುಮಂತಿ, ರೇಣುಕಾ, ಮಹಿಬೂಬು, ಕರಿಮಲ್ಲಮ್ಮ ಸೇರಿದಂತೆ ಇನ್ನಿತರಿದ್ದರು.