ಲೂರ್ದು ಮಾತೆ ಚರ್ಚ್ ನಲ್ಲಿ ಅದ್ಧೂರಿ ಸ್ವಾಗತ
ಲಿಂಗಸುಗೂರು : ಬಳ್ಳಾರಿ ಧರ್ಮಕ್ಷೇತ್ರದ( Amrita Mahotsava )ಅಮೃತ ಮಹೋತ್ಸದ ಶಿಲುಬೆಗೆ ಪಟ್ಟಣದ ಲೂರ್ದು ಮಾತೆ ಚರ್ಚ್ ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಬಳ್ಳಾರಿ ಧರ್ಮಕ್ಷೇತ್ರ ಆರಂಭವಾಗಿ 75 ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ನವಂಬರ್ 27 ಹಾಗೂ 28 ರಂದು ನಡೆಯುವ 9 (Amrita Mahotsava ) ಅಮೃತ ಮಹೋತ್ಸದ ಸಮಾರಂಭದ ಪೂರ್ವಭಾವಿಯಾಗಿ ಧರ್ಮಕ್ಷೇತ್ರದ ರಾಯಚೂರು ಕೊಪ್ಪಳ, ಬಳ್ಳಾರಿ, ವಿಜಯಪೂರು, ವಿಜಯನಗರ ಜಿಲ್ಲೆಗಳ ಧರ್ಮಕೇಂದ್ರಗಳಲ್ಲಿ ಈ ಅಮೃತ ಮಹೋತ್ಸವದ ಶಿಲುಬೆ ಸಂಚರಿಸಿ ಭಕ್ತರನ್ನು ಆರ್ಶೀವದಿಸಿ ಅವರ ಮನೋಕಾಮನೆಗಳ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ.
ಲಿಂಗಸುಗೂರು ತಾಲೂಕಿನ ಸಂಚಾರ :
ಲಿಂಗಸುಗೂರು ವಲಯದಲ್ಲಿ ಗುರುಗುಂಟಾ, ಹಟ್ಟಿ, ಚಿಕ್ಕಹೆಸರೂರು ಮೂಲಕ ಶುಕ್ರವಾರ ಸಂಜೆ ಲಿಂಗಸುಗೂರಿಗೆ ಆಗಮಿಸಿದ ಅಮೃತ ಮಹೋತ್ಸವದ ಶಿಲುಬೆಯನ್ನು ವಿಚಾರಣೆ ಗುರುಗಳಾದ ಫಾಧರ ಜೋಸ್ ಪ್ರಕಾಶರವರು ಹೂ ಮಾಲೆ ಹಾಕುವುದರ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಭಕ್ತರೆಲ್ಲರೂ ಭಕ್ತಿಭಾವದಿಂದ ಶಿಲುಬೆಯನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಾಲನಾ ಸಮಿತಿ ಕಾರ್ಯದರ್ಶಿ ಅಮರೇಶ ಘಂಟಿ, ಸದಸ್ಯರಾದ ಮೇಷಕ, ಶಾಂತಪ್ಪ, ಪ್ರಾಂಚೀಸ್ ಕುಮಾರ್, ಮೇರಿ, ಕವಿತಾ, ಪ್ರಕಾಶಮ್ಮ , ಸಿಸ್ಟರ್ ಅರುಣಾ, ರೆನ್ನ ಡಿಸೋಜಾ, ರಾಯಪ್ಪ ಸೇರಿ ಇತರರು ಇದ್ದರು.