suddiduniya.com

Attempted Robbery : 30 ವಾಹನಗಳಿಗೆ ಕಲ್ಲು ತೂರಿ ದರೋಡೆಗೆ ಯತ್ನ..?

ಲಿಂಗಸುಗೂರು : 30ಕ್ಕೂ ಅಧಿಕ ವಾಹನಗಳ ಮೇಲೆ ದರೋಡೆ ಕೋರರ ಗುಂಪು ಕಲ್ಲು ತೂರಿ ದರೋಡೆಗೆ ಯತ್ನ (Attempted Robbery )ನಡೆಸಿದ ಘಟನೆ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಘಾಟ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಈ ಘಟನೆ ಸುದ್ದಿ ತಿಳಿದು ತಾಲೂಕು ಹಾಗೂ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ.

ಕಲುಬುರಗಿ,ಬೀದರ್ ಕಡೆಗಳಿಂದ ಬೆಂಗಳೂರು, ಶಿವಮೊಗ್ಗ ಇತರೆ ಕಡೆಗಳಲ್ಲಿ ಸಾಗುತ್ತಿದ್ದ ಬಸ್, ಲಾರಿ, ಕಾರುಗಳು ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಅರಣ್ಯಪ್ರದೇಶ ಬಳಿ ಬರುತ್ತಿದ್ದಂತೆ ವಾಹನಗಳ ಮೇಲೆ ಏಕಾಏಕಿಯಾಗಿ ಕಲ್ಲು ತೂರಾಟ ನಡೆಸಿ ವಾಹನಗಳನ್ನು ತಡೆದು ನಿಲ್ಲಿಸುವ ಪ್ರಯತ್ನ ನಡೆಸಿದ್ದರಿಂದ ಗಾಬರಿಗೊಂಡ ವಾಹನಗಳ ಚಾಲಕರು ವಾಹನಗಳನ್ನು ನಿಲ್ಲಸದೇ ಹಾಗೇ ಮುಂದೆ ಸಾಗಿದ್ದರಿಂದ ಅನಾಹುತ ತಪ್ಪಿದೆ ಎನ್ನಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತಲೆಗೆ ಕಲ್ಲೇಟು ಬಿದ್ದು ಗಾಯವಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಲುಬುರಗಿ, ಬೀದರ್ ಜಿಲ್ಲೆಗಳ ಕಲ್ಯಾಣ ಸಾರಿಗೆ ಸಂಸ್ಥೆಗಳ 5ಕ್ಕೂ ಅಧಿಕ ಬಸ್‍, ಸೇರಿದಂತೆ ಲಾರಿಗಳು, ಕಾರುಗಳ ಕಿಟಕಿ, ಮುಂದಿನ ಗಾಜುಗಳು ಪುಡಿ ಪುಡಿಯಾಗಿವೆ. ಗೊಲ್ಲಪಲ್ಲಿ ಘಾಟ್‍ ನಲ್ಲಿ ಮರದ ಪೊದೆ ಅವಿತುಕೊಂಡು ದರೋಡೆಕೋರರು ವಾಹನಗಳ ಮೇಲೆ ಕಲ್ಲು ತೂರಿದರೆ ವಾಹನಗಳು ನಿಲ್ಲಿಸುತ್ತಾರೆ ಆಗ ದರೋಡೆ ಮಾಡಬಹುದು (Attempted Robbery )ಎಂಬ ಉದ್ದೇಶದಿಂದ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ ಆದರೆ ಯಾವುದೇ ವಾಹನಗಳ ಚಾಲಕರ ಸಮಯಪ್ರಜ್ಞೆಯಿಂದ ವಾಹನಗಳನ್ನು ನಿಲ್ಲಿಸದೇ ಇದ್ದರಿಂದ ದರೋಡೆ ಆಗಿಲ್ಲ ಎಂದು ಬಸ್ ನ ಪ್ರಯಾಣಿಕರೊಬ್ಬರ ಮಾತಾಗಿದೆ.

ವಾಹನಗಳ ಮೇಲೆ ಕಲ್ಲು ತೂರಿ ದರೋಡೆಗೆ ಯತ್ನ (Attempted Robbery )ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಹಟ್ಟಿ ಪೊಲೀಸ್ ಇನ್ಸ್ ಪೆಕ್ಟರ್ ಹೊಸಕೇರಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕ ರಾಹುಲ್ ವನಸೊರೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದೆ.

ಮಂಗಳವಾರ ಬೆಳಗಿನ ಜಾಗ ಗೊಲ್ಲಪಲ್ಲಿ ಬಳಿ ನಡೆದ ದರೋಡೆ ಯತ್ನ (Attempted Robbery )ಘಟನೆಯಿಂದ ತಾಲೂಕಿನ ಜನತೆ ತಲ್ಲಣಗೊಂಡಿದ್ದಾರೆ. ಇತ್ತೀಚಿಗೆ ಲಿಂಗಸುಗೂರು ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳ ಹೆಚ್ಚಾಗುತ್ತಿದ್ದು, ಅದರಲ್ಲೂ ಅಂತರರಾಜ್ಯ ಕಳ್ಳರ ತಂಡ ಲಿಂಗಸುಗೂರಿನ ಮನೆಯೊಂದರಲ್ಲಿ ಕಳ್ಳತನ ನಡೆಸಿರುವ ದೃಶ್ಯ ಸಿಸಿ ಟಿವಿ ದೃಶ್ಯ ನೋಡಿ ಜನತೆ ಭಯಭೀತರಾಗಿದ್ದರು ಅದು ಇನ್ನೂ ಕಣ್ಣೆದರೆ ಇರುವಾಗ ವಾಹನಗಳ ದರೋಡೆಗೆ ಯತ್ನದ ಘಟನೆ ಮತ್ತಷ್ಟು ಭಯಭೀತಗೊಳಿಸಿದೆ.

ಗೊಲ್ಲಪಲ್ಲಿ ಬಳಿ ಕಲ್ಲುತೂರಾಟ ನಡೆಯುತ್ತಿರುವ ಸುದ್ದಿ ತಿಳಿದು ಈ ಮಾರ್ಗ ಕಡೆಗಳಲ್ಲಿ ಸಾಗುವ ವಾಹನಗಳ ಚಾಲಕರು ಭಯಭೀತರಾಗಿ ವಾಹನಗಳನ್ನು ಗುರುಗುಂಟಾ ಗ್ರಾಮದ ಬಳಿ ಮತ್ತು ತಿಂಥಣಿ ಬ್ರಿಜ್ ಬಳಿ ನಿಲುಗಡೆ ಮಾಡಿದ್ದರಿಂದ ಸುಮಾರು 100ಕ್ಕೂ ಅಧಿಕ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್‍ ಜಾಮ್‍ ಆಗಿತ್ತು, ನಂತರ ಹಟ್ಟಿ, ಲಿಂಗಸುಗೂರು, ಜಾಲಹಳ್ಳಿ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಗೊಲ್ಲಪಲ್ಲಿ ರಸ್ತೆ ಅಕ್ಕಪಕ್ಕದಲ್ಲಿ ತಿರುಗಾಡಿ ಪರಿಸ್ಥಿತಿ ತಿಳಿಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Suddiduniya.com

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!
Exit mobile version