suddiduniya.com

Backward class :ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

Backward class

ಲಿಂಗಸುಗೂರು : ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ, ಒಂದು ಕೋಟಿ ರೂಪಾಯಿಗಳ ಟೆಂಡರ್ ನಲ್ಲಿ ಮೀಸಲಾತಿ ಜಾರಿಗೊಳಿಸಿ ಗೆಜಟ್ ಹೊರಡಿಸಿದೆ.

ರಾಜ್ಯದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿಗಳ ಕಾಮಗಾರಿಗಳಲ್ಲಿ ನೀಡಿದ ಮೀಸಲಾತಿ ಮಾದರಿಯಲ್ಲಿಯೇ ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ (Backward class) ಸರ್ಕಾರ ಟೆಂಡರ್‍ ನಲ್ಲಿ ಮೀಸಲಾತಿ ನೀಡಿದೆ.

Backward class
Backward class

ಮಾದರಿ ಟೆಂಡರ್ ದಾಖಲೆಗಳ ಷರತ್ತುಗಳಿಗೆ ತರಲಾದ ಎಲ್ಲಾ ಮಾರ್ಪಾಡುಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ II(A) ರಲ್ಲಿನ ಜಾತಿಗಳ ಟೆಂಡರ್‌ದಾರರುಗಳಿಗೂ ಒಂದು ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳ ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಅನ್ವಯಿಸಿ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದು ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರು ಹಾಗೂ ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ II(A) ರಲ್ಲಿನ ಜಾತಿಗಳ ಟೆಂಡರ್‌ದಾರರು ಟೆಂಡರ್‌ಗಳಲ್ಲಿ ಭಾಗವಹಿಸುವ ಕುರಿತು ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ ಶೇಕಡಾವಾರು ಮೀಸಲಾತಿಯನ್ವಯ  ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ- ಆಡಳಿತ) ರವರಿಂದ ಸ್ಪಷ್ಟಿಕರಣ ಕೋರಲಾಗಿದ್ದರಿಂದ 2024 ಜನೆವರಿ 10ರಂದು ಆರ್ಥಿಕ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇವರ ಅಧ್ಯಕ್ಷತೆಯಲ್ಲಿ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕಾಮಗಾರಿಗಳ ಅನುಷ್ಟಾನ ನಿರ್ವಹಿಸುವ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ), ಮುಂತಾದ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ (Backward class) ಪ್ರವರ್ಗ-1 ಮತ್ತು ಪ್ರವರ್ಗ-IIA ಗುತ್ತಿಗೆದಾರರ ಪ್ರತಿನಿಧಿಗಳು ಹಾಜರಾದ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ವಿವಿಧ ಆಯ್ಕೆಗಳನ್ನು ಪರಿಶೀಲಿಸಿ ಪ್ರಸಕ್ತ ಚಾಲ್ತಿಯಲ್ಲಿರುವಂತೆ ಇಂಜಿನಿಯರಿಂಗ್‌ ಡಿವಿಜನ್ ಅಥವಾ ಟೆಂಡರ್ ಆಹ್ವಾನ ಪ್ರಾಧಿಕಾರವನ್ನು ಘಟಕವಾಗಿ ಪರಿಗಣಿಸಿ ನಾಲ್ಕಕ್ಕಿಂತ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳನ್ನು ಮಾಡಿದ ನಂತರ ಸರ್ಕಾರದ ಆದೇಶದಲ್ಲಿ ಹೊರಡಿಸಿರುವ ರೋಸ್ಟರ್‌ ಬಿಂದುವನ್ನು ಅನ್ವಯಿಸಿ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಮೀಸಲಾತಿಯನ್ನು ನಿಗಧಿಪಡಿಸಲು ಹಾಗೂ ಒಂದು ಸಲ  Randomize ಮಾಡಿದ ನಂತರ ಮೀಸಲಾತಿಯು ಯಾವ ರೋಸ್ಟರ್ ಬಿಂದುವಿನಲ್ಲಿ ಅಂತ್ಯವಾಗಿರುತ್ತದೆಯೋ, ಮುಂದಿನ Randomization ನಲ್ಲಿ ಮೀಸಲಾತಿಯನ್ನು ಅದೇ ರೋಸ್ಟರ್ ಬಿಂದುವಿನಿಂದ ಮುಂದುವರೆಸಿ ನಿಗದಿಪಡಿಸಿ ಟೆಂಡ‌ರ್ ಪ್ರಕ್ರಿಯೆ ಕೈಗೊಳ್ಳುವ ಆಯ್ಕೆಯನ್ನು ಅನುಮೋದಿಸಿರುತ್ತಾರೆ.  ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ (KPPP) ಅಳವಡಿಸುವ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕಾರ್ಯಕಾರಿ ಆದೇಶ ಹೊರಡಿಸಬೇಕಾಗಿರುತ್ತದೆ.

Backward class

ಒಂದು ಕೋಟಿ ರೂಪಾಯಿಗಳವರೆಗಿನ ಕಾಮಗಾರಿಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ (6) ರ ಪರಂತುಕಗಳು ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000ರ (274) ರಲ್ಲಿ ನಿಗದಿಪಡಿಸಿದ ಮೀಸಲಾತಿಯ ಅನುಸಾರ ಟೆಂಡರ್‌ದಾರರಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000ರ (274) ರಲ್ಲಿ ನಿಗದಿಪಡಿಸಿದಂತೆ ಇಂಜಿನಿಯರಿಂಗ್ ಡಿವಿಜನ್ ಅಥವಾ ಟೆಂಡರ್ ಆಹ್ವಾನ ಪ್ರಾಧಿಕಾರವನ್ನು ಘಟಕ ಎಂದು ಪರಿಗಣಿಸಿ ನಾಲ್ಕಕ್ಕಿಂತ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳನ್ನು Randomize ಮಾಡಿದ ನಂತರ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ನಿಗದಿಪಡಿಸಿದ ರೋಸ್ಟರ್ ಬಿಂದುವನ್ನು ಕಾಮಗಾರಿಗಳ ಆಯ್ಕೆಗೆ ಅನ್ವಯಿಸುವುದು ಮತ್ತು ಅದರಂತೆ ಮೀಸಲಾತಿಯನ್ನು ನಿಗಧಿಪಡಿಸುವುದು. ಮೇಲಿನಂತೆ ಒಂದು ಸಲ ಕಾಮಗಾರಿಗಳ ಆಯ್ಕೆಗೆ Randomize ಪ್ರಕ್ರಿಯೆ ಕೈಗೊಂಡ ನಂತರ ಮೀಸಲಾತಿಯು ಯಾವ ರೋಸ್ಟರ್ ಬಿಂದುವಿನಲ್ಲಿ ಅಂತ್ಯವಾಗಿರುತ್ತದೆಯೋ, ಮುಂದಿನ ಕಾಮಗಾರಿಗಳ Randomization ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಅದೇ ರೋಸ್ಟರ್ ಬಿಂದುವಿನಿಂದ ಮುಂದುವರೆಸಿ ನಿಗದಿಪಡಿಸಲಾಗಿದೆ ಎಂದು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಆದೇಶದಲ್ಲಿ ತಿಳಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!