ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ
ರಾಯಚೂರು : ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸುವಂತೆ (implementation of internal reservation) ಆಗ್ರಹಿಸಿ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಗುರುವಾರ ಕರೆ ನೀಡಿದ್ದ ರಾಯಚೂರು ಜಿಲ್ಲಾ ಬಂದ್ (Raichur district bandh successful) ಯಶಸ್ವಿಯಾಗಿದೆ. (ಒಳ ಮೀಸಲಾತಿ ಜಾರಿಗಾಗಿ ರಾಯಚೂರು ಜಿಲ್ಲಾ ಬಂದ್ ಯಶಸ್ವಿ)
ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಯಚೂರು ಜಿಲ್ಲಾ ಬಂದ್ ಹಿನ್ನಲೆಯಲ್ಲಿ ರಾಯಚೂರು ನಗರ, ಲಿಂಗಸುಗೂರು, ದೇವದುರ್ಗ, ಮಾನವಿ, ಸಿರವಾರ, ಸಿಂಧನೂರು, ಮಸ್ಕಿ ತಾಲೂಕು ಕೇಂದ್ರಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ವಹಿವಾಟು ಸ್ಥಗಿತಗೊಳಿಸಿದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆಟೋ ಸೇರಿ ಖಾಸಗಿ ವಾಹನಗಳು ಕೂಡಾ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಂದ್ ವಿಷಯ ತಿಳಿಯದ ಸಾರ್ವಜನಿಕರು ಬೇರೆ ಊರುಗಳಿಗೆ ತೆರಳು ಬಸ್ ನಿಲ್ದಾಣಕ್ಕೆ ಬಂದು ಬಸ್‌ಗಳು ಇಲ್ಲದೆ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುವಂತಾಯಿತು. ಲಿಂಗಸುಗೂರಿನಲ್ಲಿ ಕೆಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ತಾವು ತಂದಿದ್ದ ಊಟವನ್ನು ಸೇವಿಸುತ್ತಿರುವುದು ಕಂಡು ಬಂತು. ಹೋಟೆಲ್‌ಗಳು ಬಂದ್ ಆಗಿರುವುದರಿಂದ ಪರಸ್ಥಳದಿಂದ ಬಂದಿದ್ದ ಸಾರ್ವಜನಿಕರಿಗೆ ತಿಂಡಿ ಸಿಗದೇ ಪರದಾಡುವಂತಾಯಿತು. ಆಸ್ಪತ್ರೆಗಳು ಎಂದಿನ0ತೆ ಕಾರ್ಯನಿರ್ವಹಣೆ ಮಾಡಲಾಗುತ್ತಿತ್ತು. ಒಟ್ಟಿನಲ್ಲಿ ಒಳ ಮೀಸಲಾತಿ ಜಾರಿಗಾಗಿ ರಾಯಚೂರು ಜಿಲ್ಲಾ ಬಂದ್ ಯಶಸ್ವಿಯಾಗಿದೆ.
ಮೀಸಲಾತಿ ಜಾರಿಗೆ ಮೀನಾಮೇಷ ಯಾಕೆ :
2024 ಆಗಸ್ಟ 1ರಂದು ಸರ್ವೋಚ್ಛ ನ್ಯಾಯಲಯ ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರಗಳಿಗೆ ನೀಡಿರುವ ಪರಮಾಧಿಕಾರದ ತೀರ್ಪುನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ವಾಗತಿಸಿರುವುದನ್ನು ಕೇಳಿ ಒಂದೇ ವಾರದಲ್ಲಿ ಒಳ ಮೀಸಲಾತಿ ಜಾರಿಗೆ ತರುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಈ ಬಗ್ಗೆ ಸಿಎಂ ಯಾಕೆ ಮೌನವಹಿಸಿದ್ದೀರಿ ಎನ್ನುವುದು ಅರ್ಥವಾಗುತ್ತಿಲ್ಲ, ನ್ಯಾಯಲಯದ ತೀರ್ಪಿಗೆ ಮುನ್ನ ಸಿದ್ಧರಾಮಯ್ಯನವರು ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಘೋಷಿಸಿದಂತೆ ನುಡಿದಂತೆ ನಡೆಯುತ್ತೇವೆ ಎಂಬ ಭರವಸೆ ಈಗ ದಿನೇದಿನೇ ದೂರವಾಗುತ್ತಿದೆ. ಇದರರ್ಥ ಒಳ ಮೀಸಲಾತಿ ವಿಚಾರಕ್ಕೆ ನೊಂದ ಸಮುದಾಯಗಳ ಮಧ್ಯ ಪರ ವಿರೋಧದ ಪರಸ್ಪರ ವಾದ ವಿವಾದಗಳು ಹೆಚ್ಚಾಗಲಿ ಈಗಾಗಲೇ ಸರ್ಕಾರಿ ಹುದ್ದೆಗಳ ನೇಮಕಾತಿ ಮುಗಿದು ಖಾಲಿಯಾಗಲಿ, 10-15 ವರ್ಷಗಳ ವಿದ್ಯೆ ಉದ್ಯೋಗ ಪಡೆದ ಕೆಲ ಬಲಾಢ್ಯ ಸಮುದಾಯಗಳೇ ಮತ್ತಷ್ಟು ಬಲ್ಯಾಢರಾಗಲಿ, ಅವಕಾಶ ವಂಚಿತ ಬಹುಸಂಖ್ಯಾತರು ಬರಿಗೈಲಿ ಪರದಾಡಲಿ ಎಂಬ ಮನಸ್ಥಿತಿಗೆ ಮುಖ್ಯಮಂತ್ರಿಗಳು ಶರಣಾಗಿದ್ದೀರಿ ಎಂಬ ಆತಂಕ ಹಾಸು ಹೊಕ್ಕಿದೆ.
ನುಡಿದಂತೆ ನಡೆಯುತ್ತವೆ ಶಪಥ ತಳಸಮುದಾಯಕ್ಕೆ ಶಾಪ :
ಬಿಜೆಪಿ ಸರ್ಕಾರದ ಒಳ ಮೀಸಲಾತಿ ತಾರತಮ್ಯವನ್ನು ಸಾರಗಟಾಗಿ ತಿರಸ್ಕರಿಸಿ ಜಾತ್ಯಾತೀತ ಮನೋಭಾವದ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲಿಸಿ ಸ್ಥಿರ ಸರ್ಕಾರವನ್ನು ಸ್ಥಾಪಿಸಲು ನಮ್ಮ ಸಮುದಾಯದ ಹಿರಿಯ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ, ಇದರಾಚೆಯೂ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದ್ದ ಅನುದಾನವನ್ನು ಬಳಕೆ ಮಾಡಿದಾಗಲೂ ಅತ್ಯಂತ ಸಹನೆಯಿಂದ ಸಹಿಸಿಕೊಂಡಿದ್ದಾಗಿದೆ. ಇಷ್ಟೆಲ್ಲಾ ತ್ಯಾಗಗಳನ್ನು ಮುಖ್ಯಮಂತ್ರಿಗಳು ಸೂಕ್ಷö್ಮವಾಗಿ ಅರ್ಥೈಸಿಕೊಂಡು ಸರ್ವೋಚ್ಛ ನ್ಯಾಯಲಯದ ಐತಿಹಾಸಿಕ ತೀರ್ಪುನ್ನು ಜಾರಿ ಮಾಡಲು ಮುಂದಾಗುತ್ತಿಲ್ಲ ಎಂಬ ಆತಂಕ ಸಂವಿಧಾನದ ಪರ ಕಾಳಜಿ ಹಾಗೂ ಸಾಮಾಜಿಕ ನ್ಯಾಯದ ವ್ಯಾಖ್ಯಾನದ ಪರಿಕಲ್ಪನೆ ಸಿದ್ಧರಾಮಯ್ಯನವರ ನುಡಿದಂತೆ ನಡೆಯುತ್ತೇವೆ ಎನ್ನುವ ಶಪಥ ತಳ ಸಮುದಾಯಗಳ ಪಾಲಿಗೆ ಶಾಪವಾಗಿದೆ.
20 ವರ್ಷಗಳ ಕಾಲ ವಿಚಾರಣೆ :
ಕಳೆದ ಇಪ್ಪತ್ತು ವರ್ಷಗಳ ಕಾಲ ಸರ್ವೋಚ್ಛ ನ್ಯಾಯಲಯದಲ್ಲಿ ನಡೆದ ಸುದೀರ್ಘ ವಿಚಾರಣೆ ನಂತರವೇ ಸಾಮಾಜಿಕ ನ್ಯಾಯಕ್ಕೆ ಸ್ಪಷ್ಟ ಗೆಲವು ದೊರೆತು ಎರಡು ತಿಂಗಳು ಗತಿಸಿದರೂ ಮತ್ತೊಂದು ಸಮಿತಿ ನೇಮಕೆಂಬ ಕಾಲಹರಣ ಮತ್ತೊಂದು ಸುತ್ತಿನ ವಿಳಂಭಕ್ಕೆ ದಾರಿ ಮಾಡಿಕೊಡುತ್ತಿರುವುದು ಯಾವ ಸೀಮೆಯ ನ್ಯಾಯ ಎನ್ನುವುದುನ್ನು ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಪ್ರಕಟಿಸಬೇಕು. 30 ವರ್ಷಗಳಿಂದ ಆಯೋಗದ ರಚನೆಗಾಗಿ ರಚನೆಯಾದ ಆಯೋಗದ ಅನುದಾನಕ್ಕಾಗಿ ಅನುದಾನದ ನಂತರ ಆಯೋಗವು ನೀಡಿದ ವರದಿ ಶಿಫಾರಸ್ಸಿಗಾಗಿ ಇದೀಗ ಸರ್ವೋಚ್ಛ ನ್ಯಾಯಲಯದ ಐತಿಹಾಸಿಕ ತೀರ್ಪುನ್ನು ಅನುಷ್ಠಾನಕ್ಕಾಗಿ ಎಷ್ಟು ತಲೆಮಾರುಗಳು ಬೀದಿಗೆ ನಿಂತು ಹೋರಾಡಬೇಕು ಎನ್ನುವುದನ್ನು ತಾವುಗಳು ಖಾತರಿಪಡಿಸಬೇಕು. ಮುಖ್ಯಮಂತ್ರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು
ಸಿದ್ಧರಾಮಯ್ಯನವರ ಡೊಂಗಿತನ ದೇಶಕ್ಕೆ ಗೊತ್ತಾಗಿದೆ :
ಲಿಂಗಸುಗೂರಿನಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಹನುಮಂತಪ್ಪ ಕುಣಿಕೆಲ್ಲೂರು, ಒಳಮೀಸಲಾತಿಗಾಗಿ 30 ವರ್ಷಗಳ ನಡೆದ ಹೋರಾಟದಲ್ಲಿ ನಮ್ಮ ಸಮುದಾಯದವರು ಪ್ರಾಣತ್ಯಾಗ ಮಾಡಿದ್ದಾರೆ. ತುಳಿತಕ್ಕೊಳಗಾದ ಸಮುದಾಯದವರು ಪ್ರತಿಯೊಂದೂ ನಾವು ಹೋರಾಟ ಮಾಡಿಯೇ ಹಕ್ಕು ಪಡೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ. 2013ರಲ್ಲಿ ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬಂದಾಗ ನಿಮ್ಮ ನ್ಯಾಯಯುತ ಬೇಡಿಕೆ ನಾನೇ ಈಡೇರಿಸಬೇಕು ನಾನು ಬಿಟ್ಟರೆ ಬೇರೆಯಾರೂ ನಿಮ್ಮ ಬೇಡಿಕೆ ಈಡೇರಿಸೊಲ್ಲ ಎಂದು ಹೇಳಿದ್ದೀರಿ ಆದರೆ ಅದು ಮಾಡಲಿಲ್ಲ, ಈಗ ಮತ್ತೆ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದೇವೆ ಸುಪ್ರೀಂ ಕೋರ್ಟ್ ಆದೇಶ ಮಾಡಿ ಎರಡು ತಿಂಗಳು ಕಳೆಯುತ್ತಿದ್ದರೂ ಸಿದ್ಧರಾಮಯ್ಯನವರು ಕಾಲಹರಣ ಮಾಡುತ್ತಾ ಸುಳ್ಳು ಹೇಳೋದು ಬಿಡಬೇಕು, ನಿಮ್ಮ 40 ವರ್ಷದ ರಾಜಕೀಯದ ಡೊಂಗಿತನ ಇಡೀ ದೇಶಕ್ಕೆ ಗೊತ್ತಾಗಿದೆ. ನೀವು ಅಂಹಿದ್ ನಾಯಕರಲ್ಲ ನಿಮ್ಮ ಸ್ವಾರ್ಥಕ್ಕಾಗಿ ಅಹಿಂದ್ ನುಗ್ಗಿದ ನಾಯಕರಾಗಿದ್ದೀರಿ, ಸುಪ್ರೀಂ ಕೋರ್ಟ್ ಆದೇಶ ಮಾಡಿದ ಮೇಲೆ ಒಳ ಮೀಸಲಾತಿ ಜಾರಿಮಾಡಲು ಅತ್ಯಂತ ಸರಳವಾಗಿದೆ ಜಾರಿ ಮಾಡಲು ನಿಮಗೇನು ಕಷ್ಟ, ಅಂದರೆ ನೀವು ಸುಪ್ರೀಂಕೋರ್ಟ್ ಗಿಂತ ದೊಡ್ಡವರಾ..? ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿ ಇಲ್ಲವೇ ಕುರ್ಚಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾರಿ ಮಾಡದಿದ್ದರೆ ಸಿಎಂಗೆ ಕಪ್ಪು ಚುಕ್ಕೆ : ಮುರಾರಿ
ಹಿರಿಯ ಮುಖಂಡ ಹೆಚ್.ಬಿ.ಮುರಾರಿ ಮಾತನಾಡಿ, 101 ಪರಿಶಿಷ್ಟ ಜಾತಿಗಳ ನ್ಯಾಯಯುತ ಬೇಡಿಕೆ ಈಡೇರಿಸಲು ಸುಪ್ರೀಂ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಹಲವು ಅಂಶಗಳನ್ನು ಪರಿಶೀಲನೆ ಕಾನೂನಾತ್ಮಕವಾಗಿ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಆದೇಶ ಹಗುರವಾಗಿ ಕಾಣಬೇಡಿ, ಕೋರ್ಟ್ ಆದೇಶ ಜಾರಿ ಮಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ, ಒಳ ಮೀಸಲಾತಿ ಜಾರಿ ಮಾಡಲು ಸಿದ್ಧರಾಮಯ್ಯನವರಿಗೆ ಸುವರ್ಣ ಅವಕಾಶ ಸಿಕ್ಕಿದೆ, ಇಂತಹ ಅವಕಾಶ ತಪ್ಪಿಸಿಕೊಂಡರೆ ಸಿದ್ಧರಾಮಯ್ಯನವರ ಜೀವನದಲ್ಲಿ ಮರೆಯಲಾದ ಕಪ್ಪು ಚುಕ್ಕೆಯಾಗಲಿದೆ. ನಾವು ಬಿಕ್ಷೆ ಬೇಡುತ್ತಿಲ್ಲ, ಇದು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿಕೊಟ್ಟ ಮೇಲೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಪಾಲು ದೊರೆಯಲಿ ಎಂಬ ಉದ್ದೇಶ ನ್ಯಾಯಲಯ ಆದೇಶ ನೀಡಿದೆ ಈ ನ್ಯಾಯಯುತ ಹಕ್ಕನ್ನು ಜಾರಿಗೆ ಮುಖ್ಯಮಂತ್ರಿಗಳು ಶೀಘ್ರವೇ ಮುಂದಾಗಬೇಕು ಎಂದು ಆಗ್ರಹಿಸಿದರು.
Table of Contents
ಪ್ರತಿಭಟನೆಯಲ್ಲಿ ಮುಖಂಡರಾದ ಪಾಮಯ್ಯ ಮುರಾರಿ, ಎಚ್.ಬಿ ಮುರಾರಿ, ಲಿಂಗಪ್ಪ ಪರಂಗಿ, ಡಿ.ಬಿ ಸೋಮನಮರಡಿ, ಪಂಚಾಕ್ಷರಿ ದೊಡ್ಡಮನಿ, ಹನುಮಂತಪ್ಪ ಹಳ್ಳಿ, ತಿಪ್ಪಣ್ಣ ಕರಡಕಲ್, ಸಂಜೀವಪ್ಪ ಚಲವಾದಿ, ಭೀಮಣ್ಣ ಸಂಗೆಪಾAಗ್, ಹುಲುಗಪ್ಪ ಕೆಸರಟ್ಟಿ, ಬಸವರಾಜ, ಯಂಕಪ್ಪ ಚಿತ್ತಾಪುರ, ಅಮರೇಶ, ಆನಂದ, ಅರುಣ್, ಅಂಬಣ್ಣ, ಹುಸೇನಪ್ಪ, ವಿಜಯಕುಮಾರ್ ಪೋಳ್, ಸತ್ಯನಾರಾಯಣ, ವೆಂಕಟೇಶ್ ಮುಂಡೆವಾಡಿ, ನಾಗರಾಜ, ಶಿವರಾಜ, ದುರುಗಪ್ಪ, ಹುಲುಗಪ್ಪ, ಶರಣಪ್ಪ, ಉಮೇಶ್, ಬಸ್ಸಪ್ಪ, ವಿನೋದ್, ಶರಣು, ಅನಿಲ್ ಕುಮಾರ್,ಆಜಪ್ಪ, ಮೋಹನ್, ರಮೇಶ್, ಕುಪ್ಪಣ್ಣ, ಶಿವಣ್ಣ, ನಾಗಪ್ಪ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಪರಶುರಾಮ