ವಿಜಯ ಮಹಾಂತ ಶಿವಯೋಗಿಗಳ 113ನೇ ಸಂಸ್ಮರಣೋತ್ಸವ
ಲಿಂಗಸುಗೂರು : ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ನವೆಂಬರ್ 4ರಿಂದ 6 ರವರಿಗೆ ಲಿಂ.ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 113ನೇ ಸಂಸ್ಮರಣೋತ್ಸವದ ಅಂಗವಾಗಿ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ವಿಶ್ವ ಬಸವಧರ್ಮ ( Basavadharma samavesa )ಸಮಾವೇಶ ನಡೆಯಲಿದೆ.
ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 113ನೇ ಸಂಸ್ಮರಣೆ ಅಂಗವಾಗಿ ಅಕ್ಟೋಬರ್ 14ರಿಂದ ನವೆಂಬರ್ 3ರವರಿಗೆ ಬಸವರಾಜಪ್ಪ ವೆಂಕಟಾಪುರ ಸಿರಗುಪ್ಪ ಅವರಿಂದ ವಿಶ್ವ ಬಸವಧರ್ಮ ಪ್ರವಚನ ಕಾರ್ಯಕ್ರಮ ನಡೆಯಿತು.
ನವೆಂಬರ್ 4ರಂದು ಸಂಜೆ 6ಕ್ಕೆ ಶರಣಸಂಸ್ಕೃತಿ ಮಹೋತ್ಸವ ಸಮಾರಂಭದಲ್ಲಿ ಇಲಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಪೀಠಾಧಿಪತಿ ಗುರು ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಸಂತೆಕೆಲ್ಲೂರು ಘನಮಠೇಶ್ವರ ಮಠದ ಪೀಠಾಧಿಪತಿ ಗುರುಬಸವ ಸ್ವಾಮೀಜಿ, ಸಿದ್ದಯ್ಯನಕೋಟೆ ವಿಜಯಮಹಾಂತೇಶ್ವರ ಮಠದ ಬಸವಲಿಂಗ ಸ್ವಾಮೀಜಿ, ಮನಗೂಳಿ ವಿರಕ್ತ ಮಹಾಸಂಸ್ಥಾನದ ವಿರತಿಶನಂದ ಸ್ವಾಮೀಜಿಗಳು ಸಮ್ಮುಖ ವಹಿಸಲಿದ್ದಾರೆ. ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಧ್ವಜಾರೋಹಣ ನೆರವೇರಿಸುವವರು. ವಿಜಯಪುರದ ಶರಣತತ್ವ ಚಿಂತಕ ಜೆ.ಎಸ್.ಪಾಟೀಲ್ ಅನುಭಾವ ನೀಡಲಿದ್ದಾರೆ. ಶಾಸಕ ಮಾನಪ್ಪ ವಜ್ಜಲ್, ಸಂಸದ ಜಿ.ಕುಮಾರ ನಾಯಕ್,ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಪಾಟೀಲ್,ಬಯ್ಯಾಪುರ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಗದಗನ ಬಸವ ಸಮಿತಿ ಅನುಭಾವಿಗಳಾದ ಅಶೋಕ ಬರಗುಂಡಿ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಗಿರೀಶ ಗುರುಪುತ್ರಪ್ಪ ಹಳ್ಳಿಕಟ್ಟಿ ಇವರಿಗೆ ಗೌರವ ಸತ್ಕಾರ ಮಾಡಲಾಗುತ್ತಿದೆ. ಆರಾದ್ಯ ನರಕಲದಿನ್ನಿ ಹಾಗೂ ಆಶ್ಮಿತಾ ಗೊರೇಬಾಳ ವಚನ ನೃತ್ಯ ನಡೆಯಲಿದೆ.
ಮಹಿಳಾ ಗೋಷ್ಠಿ :
ನವೆಂಬರ್ 5ರಂದು ಸಂಜೆ 6ಕ್ಕೆ ಡಂಬಳ-ಗದಗ ಜಗದ್ಗರು ತೋಂಟದಾರ್ಯಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಇಲಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಪೀಠಾಧಿಪತಿ ಗುರು ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಶಿರೂರು-ಸತ್ತಿ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಬುದ್ನಿ ವಿರಕ್ತಮಠದ ಮರೇಗುದ್ದಿ ಗುರುಮಹಾಂತ ಸ್ವಾಮೀಜಿ ಸಮ್ಮುಖದಲ್ಲಿ ಹಾಗೂ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಕಲುಬುರಗಿ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ದಂಡೆ ಅನುಭಾವ ನೀಡಲಿದ್ದಾರೆ. ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ, ಮಸ್ಕಿ ಶಾಸಕ ಬಸನಗೌಡ ಆರ್ ತುರ್ವಿಹಾಳ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಡಿ.ಎಸ್.ಹೂಲಗೇರಿ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಅಕ್ಕನ ಬಳಗ ಹಾಗೂ ಕದಳಿ ವೇದಿಕೆವತಿಯಿಂದ ಕಲ್ಯಾಣ ಕ್ರಾಂತಿ ಕಿಡಿ ರೂಪಕ ಪ್ರದರ್ಶನ ನಡೆಯಲಿದೆ. ಸೌಜನ್ಯ ನರಕಲದಿನ್ನಿ ಹಾಗೂ ಸೌಭಾಗ್ಯ ಚಕ್ರಸಾಲಿ ವಚನ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ವಿಶ್ವ ಬಸವಧರ್ಮ ಸಮಾವೇಶ ಸಮಾರೋಪ :
ನವೆಂಬರ್ 6ರಂದು ಬೆಳಿಗ್ಗೆ 9.30ರಿಂದ ನಡೆಯುವ ವಿಶ್ವಬಸವ ಧರ್ಮ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಇಲಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಪೀಠಾಧಿಪತಿ ಗುರು ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಮನಗೂಳಿ ವಿರಕ್ತ ಮಹಾಸಂಸ್ಥಾನದ ವಿರತಿಶನಂದ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಸಿದ್ದಯ್ಯನಕೋಟೆ ವಿಜಯಮಹಾಂತೇಶ್ವರ ಮಠದ ಬಸವಲಿಂಗ ಸ್ವಾಮೀಜಿ, ಶಿರೂರು-ಸತ್ತಿ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ ಮರೇಗುದ್ದಿ ನೀಲವಿಜಯ ಮಹಾಂತ ತಾಯಿಯವರು, ಸಿದ್ಧಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಸಮಾರಂಭ ನಡೆಯಲಿದೆ.
ಭವ್ಯ ಮೆರವಣಿಗೆ :
ನವೆಂಬರ್ 6ರಂದು ಬೆಳಿಗ್ಗೆ 11ರಿಂದ ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಪಟದಿಂದ ಪಟ್ಟಣದ ಬಸವಸಾಗರ ವೃತ್ತ, ಗಡಿಯಾರ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ವಚನ ಗ್ರಂಥ ತಾಡೋಲೆ ಕಟ್ಟಿನ, ವಿಶ್ವಗುರು ಬವಸಣ್ಣನವರ, ಲಿಂ.ಮಹಾಂತ ಶಿವಯೋಗಿಗಳ ಭಾವಚಿತ್ರ ಇರುವ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನ ನೀಡಲಿವೆ. ಸಂಜೆ 6ಕ್ಕೆ ವಚನ ಮಹಾಮಂಗಲ ಸಮಾರಂಭ ನಡೆಯಲಿದೆ.