suddiduniya.com

basavasagar dam :ಮತ್ತೆ ಹೆಚ್ಚಾಯಿತು ಕೃಷ್ಣೆಯ ಅರ್ಭಟ..!

Basavasagar dam

ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ :

ಲಿಂಗಸುಗೂರು : ಕೆಲವು ದಿನಗಳಿಂದ ಶಾಂತಳಾಗಿದ್ದ ಕೃಷ್ಣೆ ಮತ್ತೆ ಅರ್ಭಟ (offering)ಶುರುವಾಗಿದೆ. ಬುಧವಾರ ಬಸವಸಾಗರ(basavasagar dam) ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ(Krishna river) ಹರಿಸಲಾಗುತ್ತಿದೆ.

Basavasagar dam


ಆಗಸ್ಟ್ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಸವಸಾಗರ (Basavasagar dam )ಜಲಾಶಯದಿಂದ ಹರಿಸಲಾಗುತ್ತಿತ್ತು, ಹೊರಿಹರಿವಿನ ಮಟ್ಟ ಕ್ರಮೇಣ ಕಡಿಮೆಯಾಗಿತ್ತು, ಕೃಷ್ಣಾ ನದಿ ತೀರದ ಮೇಲ್ಮಟ್ಟದಲ್ಲಿ ಭಾರಿ ಮಳೆ ಸುರಿಯುತ್ತಿದ್ದರಿಂದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು.

ನದಿತೀರದಲ್ಲಿ ಹೆಚ್ಚಿದ ಆತಂಕ :


ಕೃಷ್ಣಾನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನದಿತೀರದ ಗ್ರಾಮಗಳಲ್ಲಿನ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ತಾಲೂಕಿನ ಶೀಲಹಳ್ಳಿ ಸೇತುವೆ ಮೂರು ಭಾರಿ ಮುಳುಗಡೆಯಾಗಿತ್ತು. ಈಗ ಮತ್ತೆ ಶೀಲಹಳ್ಳಿ ಸೇತುವೆಗೆ ಮುಳುಗಡೆ ಆತಂಕ ಶುರುವಾಗಿದೆ. ತಾಲೂಕಿನ ಗದ್ದಗಿ, ಗೋನವಾಟ್ಲ್, ಗುಂತಗೋಳ, ಹಂಚಿನಾಳ, ಜಲದುರ್ಗ, ಕಡದರಗಡ್ಡಿ, ಯರಗೋಡಿ, ಯಳಗುಂದಿ, ಶೀಲಹಳ್ಳಿ, ಟಣಮಣಕಲ್ ಒಟ್ಟು ಹತ್ತು ಗ್ರಾಮಗಳು ಹಾಗೂ ಮೂರು ನಡುಗಡ್ಡೆಗಳು ಕೃಷ್ಣಾ ನದಿ ತೀರದಲ್ಲಿವೆ. ಪ್ರವಾಹದ ಆತಂಕ ಸೃಷ್ಠಿಯಾಗಿದೆ.

ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!