ಎಂಎಲ್ಸಿ ಶರಣಗೌಡ ಬಯ್ಯಾಪುರ ಲೇವಡಿ
ಲಿಂಗಸುಗೂರು : ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ (Chalavadi Narayanaswamy )ಛಲವಾದಿ ನಾರಾಯಣಸ್ವಾಮಿ ಟೇಪ್ ರಿಕಾರ್ಡ್ ಇದ್ದಂತೆ ಬಿಜೆಪಿ ಹೈಕಮಾಂಡ್ ಯಾವ ಕ್ಯಾಸೆಟ್ ಹಾಕತ್ತಾರೋ ಅದನ್ನೇ ನಾರಾಯಣಸ್ವಾಮಿ ಬಾಯಿಯಲ್ಲಿ ಪ್ಲೇ ಆಗುತ್ತೆ ಎಂದು ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಲೇವಡಿ ಮಾಡಿದರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲುಬುರಗಿಯಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ತನಿಖೆಗೆ ಸೂಚನೆ ನೀಡಿದೆ. ಆದರೆ ಡೆತ್ ನೋಟ್ ನಲ್ಲಿ ಸಚಿವ ಪ್ರೀಯಾಂಕ್ ಖರ್ಗೆ ಅವರ ಹೆಸರು ಉಲ್ಲೇಖವಿಲ್ಲ, ಆತ್ಮಹತ್ಯೆಗೂ ಖರ್ಗೆಯವರಿಗೂ ಸಂಬಂಧವೇ ಇಲ್ಲ, ಆದರೂ ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy )ಅವರು ಖರ್ಗೆ ರಾಜೀನಾಮೆ ನೀಡಬೇಕು ಮತ್ತು ಬಂಧಿಸಬೇಕು ಎಂದು ಹೇಳಿಕೆ ನೀಡುತ್ತಿರುವುದು ನಮಗೆ ನೋವು ತಂದಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರೀಯಾಂಕ್ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಶ್ನಾತೀತ ನಾಯಕರಾಗಿದ್ದಾರೆ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ವಿಪಕ್ಷ ನಾಯಕ ಸ್ಥಾನ ಉಳಿಸಿಲು ಇಲ್ಲಸಲ್ಲದ ಹೇಳಿಕೆ :
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಪರಿಷತ್ ನ ವಿಪಕ್ಷ ನಾಯಕ ಸ್ಥಾನ ನೀಡಿದೆ. ಆದರೆ ಆ ಸ್ಥಾನವನ್ನು ಉಳಿಸಿಕೊಂಡು ಹೋಗಲು ನಾರಾಯಣಸ್ವಾಮಿ (Chalavadi Narayanaswamy) ಹರಸಾಹಸ ಮಾಡುತ್ತಿದ್ದಾರೆ. ಒಂದು ರೀತಿಯ ಟೇಪ್ ರಿಕಾರ್ಡ್ ಆಗಿದ್ದಾರೆ ಬಿಜೆಪಿಯವರು ಯಾವ ಕ್ಯಾಸೆಟ್ ಹಾಕ್ತಾರೋ ಅದನ್ನೇ ನಾರಾಯಣಸ್ವಾಮಿಯವರ (Chalavadi Narayanaswamy )ಬಾಯಿಂದ ಪ್ಲೇ ಆಗುತ್ತಾ ಇದೆ ವಿನಾಃ ಅವರಿಗೆ ಖರ್ಗೆ ವಿರುದ್ಧ ಹೇಳಿಕೆ ನೀಡೋಕೆ ಮನಸ್ಸು ಇಲ್ಲ, ಆದರೆ ವಿಪಕ್ಷ ನಾಯಕ ಸ್ಥಾನ ನೀಡಿದ ಬಿಜೆಪಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಎಲ್ಲಾ ಹೋರಾಟವೂ ಠುಸ್ಸು :
ರಾಜ್ಯದಲ್ಲಿ ಕಾಂಗ್ರೆಸ್ ಬಂದಾಗಿನಿಂದ ಬಿಜೆಪಿ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ಮಾಡುತ್ತಾ ಇದ್ದರೂ ಅವೆಲ್ಲವೂ ಠುಸ್ಸು ಆಗಿದೆ. ಮುಡಾ ವಿಷಯದ ಕುರಿತು ಸಿಎಂ ಸಿದ್ಧರಾಮಯ್ಯನವರ ರಾಜೀನಾಮೆ ಕೇಳಿದ್ದರೂ ಅದು ಕೂಡಾ ಠುಸ್ಸಾಯಿತು. ವಿಧಾನ ಪರಿಷತ್ ನಲ್ಲಿ ಸಿ.ಟಿ.ರವಿ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡುವ ಮೂಲಕ ಪರಿಷತ್ ಘನತೆಗೆ ದಕ್ಕೆ ತಂದಿರುವ ಬಗ್ಗೆ ಇಡೀ ರಾಜ್ಯದ ಜನತೆ ಗಮನಿಸುತ್ತಾ ಇದೆ. ಬಿಜೆಪಿಯವರಿಗೆ ಈಗ ಸಚಿನ್ ಆತ್ಮಹತ್ಯೆ ಪ್ರಕರಣ ಸಿಕ್ಕಿದೆ. ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಾ ಇದೆ ಎಂದು ಆರೋಪಿಸಿದರು.
ರಿಪಬ್ಲಿಕ್ ಆಫ್ ಕಲಬುರಗಿಯಲ್ಲ ಡೆವಲೆಪಮೆಂಟ್ ಆಫ್ ಕಲುಬುರಗಿ :
ಸಚಿನ್ ಆತ್ಮಹತ್ಯೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ರಿಪಬ್ಲಿಕ್ ಆಫ್ ಕಲುಬುರಗಿ ಹೇಳುತ್ತಿರುವುದು ಸರಿಯಲ್ಲ, ಈ ಹಿಂದೆ ಬಳ್ಳಾರಿಯನ್ನೇ ಕೊಳ್ಳೆ ಹೊಡೆದು ಅದನ್ನೇ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಬಿಜೆಪಿಯವರು ಈ ರೀತಿ ಆರೋಪ ಮಾಡುವುದನ್ನು ಬಿಡಬೇಕು. ರಿಪಬ್ಲಿಕ್ ಆಫ್ ಕಲಬುರಗಿಯಲ್ಲ ಅದು ಡೆವಲೆಪಮೆಂಟ್ ಆಫ್ ಕಲುಬುರಗಿಯಾಗಿದೆ. ಕಲುಬುರಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಹೊಂದಿದ ನಗರವಾಗಿದೆ. ಈ ಭಾಗದ ರಾಜಧಾನಿ ಎಂದರೂ ತಪ್ಪಲಾರದು. ಇತ್ತೀಚಿಗೆ ಸಿಎಂ ಸಿದ್ಧರಾಮಯ್ಯನವರು 371 ಹಾಸಿಗೆಯ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರೀಯಾಂಕ್ ಖರ್ಗೆ ಕಲುಬುರಗಿ ನಗರದಲ್ಲಿ ಅಭಿವೃದ್ಧಿ ಕ್ರಾಂತಿ ಮಾಡಿದ್ದು ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಾಣುತ್ತಿಲ್ವಾ ಎಂದು ಚಾಟಿ ಬಿಸಿದರು.
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ಹೋರಾಟ ಮಾಡುವ ಮುಂಚೆ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೋರಾಟ ಮಾಡಲಿ, ದೇಶಕ್ಕೆ ಬೃಹತ್ ಸಂವಿಧಾನ ನೀಡಿದ ಮಹಾನ್ ವ್ಯಕ್ತಿಗೆ ಈ ರೀತಿಯಾಗಿ ಅವಮಾನ ಮಾಡಿದ್ದು ಸರಿನಾ, ಬಿಜೆಪಿಯವರು ಹೋರಾಟ ಮಾಡಲು ನೈತಿಕತೆ ಇಲ್ಲ ಎಂದು ಆರೋಪಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಭೂಪನಗೌಡ ಕರಡಕಲ್, ಮಲ್ಲಣ್ಣ ವಾರದ್, ಸೋಮಶೇಖರ ಐದನಾಳ, ಆದನಗೌಡ ಬುಂಕಲದೊಡ್ಡಿ, ಇಬ್ರಾಹಿಂ ಗ್ಯಾರಂಟಿ ಸೇರಿದಂತೆ ಇನ್ನಿತರಿದ್ದರು.