suddiduniya.com

Cheating customers :ಫರ್ನಿಚರ್ ಕೊಡುವುದಾಗಿ ಕೋಟಿ ರೂಪಾಯಿ ಪಂಗನಾಮ..!!

Cheating customers

ಲಿಂಗಸುಗೂರು : ಬೇರೆ ರಾಜ್ಯದವರ ಬಣ್ಣದ ಮಾತಿಗೆ ಮರಳಾಗಿ ಹಣ-ಚಿನ್ನಾಭರಣ ಕಳೆದುಕೊಂಡ ನಿರ್ದಶನಗಳು ಇವೆ, ಇಂತಹ ಪ್ರಕರಣವೊಂದು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ವ್ಯಾಪಾರಿಗಳಿಂದ ( Cheating customers ) ಒಂದು ಕೋಟಿ ರೂಪಾಯಿ ಪಂಗನಾಮ ಹಾಕಿದ ಪ್ರಕರಣ ಇದಾಗಿದೆ.

ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಪಾಮನಕಲ್ಲೂರು ಕ್ರಾಸ್ ಬಳಿಯ ಮಳಿಗೆಯೊಂದರಲ್ಲಿ ತಮಿಳುನಾಡು ಮೂಲದ ವ್ಯಾಪಾರಿಗಳು “ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ” ಎಂಬ ಹೆಸರಿನಲ್ಲಿ ಫರ್ನಿಚರ್ ಗಳ ಮಾರಾಟದ ಅಂಗಡಿ ತೆರೆದಿದ್ದಾರೆ. ಒಂದೇ ತಿಂಗಳಲ್ಲಿ ಬಣ್ಣ ಬಣ್ಣ ಮಾತಿಗೆ ಗ್ರಾಹಕರನ್ನು ಮರಳು ಮಾಡಿ ಕಡಿಮೆ ಬೆಲೆಗೆ ಫರ್ನಿಚರ್ ಮಾರಾಟ ಮಾಡುವುದಾಗಿ ಜನರ ಬಳಿ ಮುಂಗಡ ಹಣ ಪಡೆದುಕೊಂಡು ಪರಾರಿಯಾಗಿದ್ದಾರೆ.

ಕಡಿಮೆ ಬೆಲೆ ಇದೆ ಎಂದರೆ ಸಾಕು ಮುಗಿಬೀಳೋದು ಸಹಜ, ಇದನ್ನೇ ಬಂಡವಾಳವಾಗಿಸಿಕೊಂಡ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ವರ್ತಕರು, ಗ್ರಹ ಬಳಕೆಗಾಗಿ ಸೋಫಾ, ಮಂಚ, ಕುರ್ಚಿ, ಅಲಮಾರ್, ಫ್ಯಾನ್, ಏಸಿ, ಟಿವಿ ಸೇರಿದಂತೆ ಇನ್ನಿತರ ವಸ್ತುಗಳನ್ನು  ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸಾಕಷ್ಟು ಸುದ್ದಿ ಹಬ್ಬಿಸಿದ್ದಾರೆ, ಮುಂಗಡವಾಗಿ ಅರ್ಧ ಹಣ ಇನ್ನರ್ದ ಹಣ ಫರ್ನಿಚರ್ ಬಂದ ಮೇಲೆ ಕೊಡುವಂತೆ ಹೇಳಿದ್ದರಿಂದ ಇದನ್ನೇ ನಂಬಿದ ಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಅಂಗಡಿಗೆ ಮುಗಿಬಿದ್ದು, ತಮಗೆ ಬೇಕಾದ ಫರ್ನಿಚರ್ ಗಳಿಗೆ ಹಣ ಮುಂಗಡ ನೀಡಿ ರಶೀದಿ ಪಡೆದಿದ್ದಾರೆ. ಹಟ್ಟಿ ಪಟ್ಟಣ ಸೇರಿ ಸುತ್ತಮುತ್ತಲಿನ 500 ಹೆಚ್ಚು ಗ್ರಾಹಕರಿಗೆ ಮುಂಗಡ ಹಣ ನೀಡಿದ್ದು, ಇವರಿಗೆ ಯಾವುದೇ ಫರ್ನಿಚರ್ ನೀಡದೇ ಅಂಗಡಿ ಮುಚ್ಚಿ ಪರಾರಿಯಾಗಿ 500 ಗ್ರಾಹಕರಿಗೆ (Cheating customers )ಪಂಗನಾಮ ಹಾಕಿದ್ದಾರೆ.

ಫರ್ನಿಚರ್ ಗಳು ಕಡಿಮೆ ಬೆಲೆಗೆ ಸಿಗುತ್ತೆ ಎಂಬ ಆಸೆಯಿಂದ ಮಧ್ಯಮ ವರ್ಗ ಹಾಗೂ ಚಿಕ್ಕಪುಟ್ಟ ವ್ಯಾಪಾರಿಗಳು, ಸರ್ಕಾರಿ ನೌಕರರು ಸೇರಿ ಇತರೆ ವರ್ಗದ ಜನರು ಸುಮಾರು 500 ರೂಪಾಯಿಯಿಂದ ಒಂದು ಲಕ್ಷ ರೂಪಾಯಿ ವರಿಗೆ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಗೆ ಮುಂಗಡವಾಗಿ ನೀಡಿದ್ದಾರೆ. ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಂಡು ಪರಾರಿಯಾಗಿ ಗ್ರಾಹಕರಿಗೆ ಮೋಸ ಮಾಡಿದೆ ಎನ್ನಲಾಗಿದೆ. ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಹೆಸರಿನಲ್ಲಿ ಗ್ರಾಹಕರಿಗೆ (Cheating customers )ಪಂಗನಾಮ ಹಾಕಿ ಆಕ್ಸಿಜನ್ ಕಟ್‍ ಮಾಡಿದಂತಾಗಿದೆ.

ಪಾಮನಕಲ್ಲೂರು ರಸ್ತೆಯಲ್ಲಿ 3 ವರ್ಷದ ಒಡಂಬಡಿಕೆಯೊಂದಿಗೆ ಮಳಿಗೆಯನ್ನು ಬಾಡಿಗೆಗೆ ಅಗ್ರಿಮೆಂಟ್ ಮಾಡಿಕೊಂಡ ತಮಿಳುನಾಡಿನ ಮೂಲದ 5-6 ಜನರು, ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಹೆಸರಿನಲ್ಲಿ ಅಂಗಡಿ ಪಾರಂಭಿಸಿ ಕೆಲಸಕ್ಕೆಂದು ಸ್ಥಳಿಯರನ್ನೇ ನೇಮಿಸಿಕೊಂಡಿದ್ದಾರೆ. ಅಲ್ಲದೇ ನಕಲಿ ಟಿನ್, ಜಿಎಸ್‌ಟಿ ಐಡಿ ಕ್ರಿಯೆಟ್ ಮಾಡಿ ಸ್ಥಳೀಯ ಪ.ಪಂ ಯಿಂದ ಪರವಾನಿಗೆ ಪಡೆದು ವ್ಯಾಪಾರ ನಡೆಸಿದ್ದಾರೆ. ಮುದುವೆ ಸಿಜನ್ ಆಗಿದ್ದರಿಂದ ಮನೆ ಸಾಮಾಗ್ರಿಗಳಾದ ಅಲ್ಮಾರಿ, ಸೋಫಾಸೆಟ್, ಟಿವಿ, ಫ್ರೀಜ್ ಸೇರಿದಂತೆ ಇತರೆ ಫರ್ನಿಚರ್ ಶೇ.50 ರಷ್ಟು ರಿಯಾಯತಿಯಲ್ಲಿ ಮಾರಾಟ ಮಾಡಿದ್ದರಿಂದ, ಕಡಿಮೆ ದರದಲ್ಲಿ ಫರ್ನಿಚರ್ ಮಾರಾಟ ಮಾಡುತ್ತಾರೆಂದು ಸುದ್ದಿಯಾಗಿದ್ದರಿಂದ ಸುತ್ತಮುತ್ತಲಿನ ಜನರು ಅಂಗಡಿಯತ್ತ ದೌಡಾಯಿಸಲು ಕಾರಣವಾಗಿದೆ.

Cheating customers

ಫರ್ನಿಚರ್ ಗಳಿಗಾಗಿ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಂಡು ಅಂಗಡಿ ಮುಚ್ಚಿ ಪರಾರಿಯಾದ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ವರ್ತಕರ ಮೋಸದಿಂದ 500ಕ್ಕೂ ಅಧಿಕ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ನಿಂದ ಮೋಸ ಹೋದ (Cheating customers ) ಗ್ರಾಹಕರು ಹಟ್ಟಿ ಪಟ್ಟಣದ ಪೊಲೀಸ್ ಠಾಣೆ ಮೊರೆ ಹೋಗಿದ್ದರಿಂದ ಹಟ್ಟಿ ಪೊಲೀಸ್ ಇನ್ಸಪೆಕ್ಟರ್ ಹೊಸಕೇರಪ್ಪ ಸ್ಥಳ ಪರಿಶೀಲಿಸಿದರು, ಹಣ ಕಳೆದುಕೊಂಡ ಗ್ರಾಹಕರು ದೂರು ನೀಡಿದರೆ ಕ್ರಮಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ವಂಚನೆಗೆ ಒಳಗಾದ ನೂರಾರು ಗ್ರಾಹಕರು ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಅಂಗಡಿಯವರು ನೀಡಿದ ರಶೀದಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ದೂರು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!