suddiduniya.com

co-operative :ಅಮರ ಜ್ಯೋತಿ ಸೌಹಾರ್ದ ಸಹಕಾರಿ ಸಂಘಕ್ಕೆ09 ಲಕ್ಷ ರೂ ಲಾಭ

co-operative

ವಾರ್ಷಿಕ ಮಹಾಸಭೆ :

ಲಿಂಗಸುಗೂರು : ಪಟ್ಟಣದ ಅಮರ ಜ್ಯೋತಿ ಸೌಹಾರ್ದ ಸಹಕಾರಿ(co-operative) ಸಂಘ ನಿಯಮಿತದ 2023-24 ನೇ ಸಾಲಿನಲ್ಲಿ 09 ಲಕ್ಷ ರೂಪಾಯಿ ನಿವ್ವಳ ಲಾಭ(Net profit) ಗಳಿಸಿದೆ.

ಉತ್ತಮ ಗ್ರಾಹಕರಿಗೆ ಸನ್ಮಾನ :

ಸಂಘದ ಕಚೇರಿಯಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಮಹೇಶ ವೆಂಕಟಗಿರಿ ಮಾತನಾಡಿ, co-operative ಸಹಕಾರ ಸಂಘವು ಗ್ರಾಹಕರ ಮತ್ತು ಶೇರುದಾರರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಎಲ್ಲರ ವಿಶ್ವಾಸಗಳಿಸಿ ಸಹಕಾರಿಯು ಪ್ರಾರಂಭವಾಗಿ ಕೇವಲ 20 ತಿಂಗಳುಗಳಾಗಿದ್ದು ಸದರಿ ಆರ್ಥಿಕ ವರ್ಷದಲ್ಲಿ 09 ಲಕ್ಷ ಲಾಭಗಳಿಸಿದೆ. ಸದರಿ ಶೇರುದಾರರಿಗೆ ಶೇ 10 ಲಾಭಾಂಶ ವಿತರಣೆ ಮಾಡಲಾಗುವುದು ಎಂದರು.

co-operative

ಸಂಘದ ಉಪಾಧ್ಯಕ್ಷ ರಂಗಸ್ವಾಮಿ.ಜಿ, ಮಾತನಾಡಿ ಸಂಘದ ಮೂಲ ಧೈಯ ವಾಕ್ಯಗಳಾದ ಸಂಪಾದನೆ, ಸಂರಕ್ಷಣೆ, ಬೆಳವಣಿಗೆ, ಸದ್ವಿನಿಯೋಗ ಎಂದು ಹೇಳುತ್ತಾ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಈ ಮೇಲಿನ ಧೈಯಗಳನ್ನು ಅನ್ವಯಿಸಿಕೊಳ್ಳುವುದ ಅತೀ ಅವಶ್ಯವೆಂದು ತಿಳಿಸಿದರು.

co-operative

ಈ ವೇಳೆ ಸಂಘದ ಎಲ್ಲಾ ಕಾರ್ಯಕಾರಿ. ಮಂಡಳಿಯ ನಿರ್ದೇಶಕರು ಮತ್ತು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ  ಸಿದ್ದಣ್ಣ ಬಿರಾದಾರ ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!