suddiduniya.com

Co-operative Society : ಸಹಕಾರಿ ಸಂಘ ಬೆಳವಣಿಗೆಗೆ ಸಹಕಾರ ಅಗತ್ಯ : ಮೇಟಿ

Co-operative Society

ವನಶ್ರೀ ಸಹಕಾರಿ :

ಲಿಂಗಸುಗೂರು : ಯಾವುದೇ ಸಹಕಾರಿ ಸಂಘ (Co-operative Society )ಬೆಳವಣಿಗೆಯಾಗಬೇಕಾದರೆ ಆಡಳಿತ ಮಂಡಳಿ ಪ್ರಮಾಣಿಕತೆ ಹಾಗೂ ಗ್ರಾಹಕರ ಸಹಕಾರ ಇದ್ದರೆ ಮಾತ್ರ ಸಹಕಾರ ಬೆಳವಣಿಗೆಯಾಗಲು ಸಾಧ್ಯವೆಂದು ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ ಹೇಳಿದರು.

Co-operative Society
Co-operative Society

7.70 ಲಕ್ಷ ಲಾಭ


ಪಟ್ಟಣದ ವನಶ್ರೀ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ದ್ವಿತೀಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ತತ್ವದಡಿಯಲ್ಲಿ ವನಶ್ರೀ ಸಹಕಾರಿ ಸ್ಥಾಪಿಸಲಾಗಿದೆ. ಸ್ಥಾಪನೆ ಎರಡನೇ ವರ್ಷದಲ್ಲಿ 7.70 ಲಕ್ಷ ಲಾಭಗಳಿಸಿದೆ ಇದಕ್ಕೆ ಸಾಲ ಪಡೆದು ಗ್ರಾಹಕರು ನಿಷ್ಠೆಯಿಂದ ಮರುಪಾವತಿ ಮಾಡಿದ್ದರಿಂದ ಲಾಭಗಳಿಸಲು ಸಾಧ್ಯವಾಗಿದೆ.ಸಹಕಾರಿ ಸಂಘ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಕಟ್ಟುನಿಟ್ಟಿನಿಂದ ಹಾಗೂ ಪ್ರಮಾಣಿಕತನದಿಂದ ಸೇವೆ ಹಾಗೂ ಮಾಡುತ್ತಿದ್ದರಿಂದ ಲಾಭಗಳಿಸಲು ಸಾಧ್ಯವಾಗಿದೆ ಎಂದರು.

ಸಹಕಾರಿ ಸಂಘಗಳು
ವನಶ್ರೀ ಸೌಹಾರ್ದ ಪತ್ತಿನ ಸಹಕಾರಿಯ ದ್ವಿತೀಯ ವಾರ್ಷಿಕ ಮಹಾಸಭೆ



ಈ ವೇಳೆ ವನಶ್ರೀ ಸಹಕಾರಿಯ ಅಧ್ಯಕ್ಷ ಸಂಗಣ್ಣ ಹೊಸೂರು, ಉಪಾಧ್ಯಕ್ಷ ಶರಣಬಸವ ಸಜ್ಜನ್, ನಿರ್ದೇಶಕರಾದ ಮಹಾಲಿಂಗಪ್ಪ ಪಾಟೀಲ್, ಶರಣಬಸವ ಮೇಟಿ, ಬಸವರಾಜ ನಿರಲಕೇರಾ, ಬಸವರಾಜ ಯಲಗಲದಿನ್ನಿ, ಸುಮಂಗಲಾ ಸಜ್ಜನ್,ದ್ರಾಕ್ಷಿಯಣಿ ಸಜ್ಜನ್,ಸಂಗೀತಾ ಸಜ್ಜನ್, ವ್ಯವಸ್ಥಾಪಕ ಬಸವರಾಜ ಹೊಳಿ, ಸೋಮು ನಾಗರಾಳ ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!