suddiduniya.com

Congress won :ಉಪ ಚುನಾವಣೆಯಲ್ಲಿ ಮೂರು ಕಡೆಗಳಲ್ಲಿ ಕಾಂಗ್ರೆಸ್ ಕಮಾಲ್‍ : ವಿಜಯೋತ್ಸವ

Congress won

ಲಿಂಗಸುಗೂರು : ಸಂಡೂರು, ಶಿಗ್ಗಾವಿ ಹಾಗೂ ಚೆನ್ನಪಟ್ಟಣ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‍ ಭರ್ಜರಿ (Congress won) ಜಯಭೇರಿ ಭಾರಿಸಿ ಕಮಾಲ್ ಮಾಡಿದ್ದರಿಂದ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಸಂಭ್ರಮಾಚರಿಸಿದರು.

Congress won
Congress won

ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ ಅಭ್ಯರ್ಥಿ ಇ,ಅನ್ನಪೂರ್ಣ 9649 ಮತಗಳ ಅಂತರ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ ಅಭ್ಯರ್ಥಿ ಪಠಾಣ್ ಯಾಸೀರ್ ಅಹ್ಮದ್ ಖಾನ್ 13448 ಮತಗಳ ಅಂತರ ಹಾಗೂ ಚೆನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್‍ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 25413 ಮತಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಮೂರು ಕಡೆಗಳಲ್ಲಿ ಕಾಂಗ್ರೆಸ್‍ ಜಯಭೇರಿ (Congress won )ಬಾರಿಸಿದ್ದು, ಮೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಗೆಲವು ಸಾಧಿಸದ ಎನ್‍ಡಿಎ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗಿದೆ.

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‍ ಅಭೂತಪೂರ್ವ ಗೆಲವು ಸಾಧಿಸಿದ್ದರಿಂದ ಲಿಂಗಸುಗೂರು ಹಾಗೂ ಮುದಗಲ್ ಬ್ಲಾಕ್ ಕಾಂಗ್ರೆಸ್‍ ಸಮಿತಿ ನೇತ್ರತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಲಿಂಗಸುಗೂರು ಪಟ್ಟಣದ ಗಡಿಯಾರ ವೃತ್ತದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತ್ರತ್ವದ ಕಾಂಗ್ರೆಸ್‍ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಆ ಕ್ಷೇತ್ರಗಳ ಮತದಾರರು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರು ಕಡೆಗಳಲ್ಲಿ (Congress won )ಕಾಂಗ್ರೆಸ್‍ ಭರ್ಜರಿಯಾಗಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಕಾಂಗ್ರೆಸ್‍ ಗೆಲ್ಲಲು ಕಾರಣವಾಯಿತು. ಈ ಭಾರಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸೋಲಿಸಿದ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಈ ಹಿಂದಿನ ರಾಜ್ಯದಲ್ಲಿ ಹಾಗೂ ಪ್ರಸ್ತುತ ಕೇಂದ್ರದಲ್ಲಿ  ಬಿಜೆಪಿ ದುರಾಡಳಿತಕ್ಕೆ ಮತದಾರರು ಸೋಲಿಸುವ ಮೂಲಕ ತಕ್ಕಪಾಠ ಕಲಿಸಿದ್ದಾರೆ. ಈ ಉಪ ಚುನಾವಣೆಯ ಫಲಿತಾಂಶ 2028ರ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಿದೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಹಿರಿಯ ಮುಖಂಡರಾದ ಖಾದರಪಾಶಾ, ಶರಣಬಸವ ಮೇಟಿ, ಪುರಸಭೆ ಸದಸ್ಯರಾದ ಮಹ್ಮದ ರಫಿ, ಯಮನಪ್ಪ ದೇಗಲಮಡಿ, ರುದ್ರಪ್ಪ ಬ್ಯಾಗಿ, ಮುಖಂಡರಾದ ಹಾಜಿಬಾಬು ಕರಡಕಲ್,ಕುಪ್ಪಣ್ಣ ಕೊಡ್ಲಿ, ಸಂಜೀವಪ್ಪ ಚಲುವಾದಿ, ಅಲ್ಲಾವುದ್ದೀನ್ ಪಟೇಲ್, ಮಂಜುನಾಥ ಆನಾಹೊಸೂರು, ಅಮರೇಶ ಚಿಕ್ಕಹೆಸರೂರು, ಪರಸಪ್ಪ ಹುನಕುಂಟಿ, ಖಾಜಾಹುಸೇನ್ ಪೂಲವಾಲೆ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!