ಒಂದು ದಿನದ ತಾಲೂಕು ಮಟ್ಟದ ಕಾರ್ಯಗಾರ
ಲಿಂಗಸುಗೂರು :(Lingasugur) ದೇಶದಲ್ಲಿ ಸಾವಿರಾರು ಕಾಯ್ದೆಗಳಿಗೆ(Act) ಅದಕ್ಕೆ ಸಂವಿಧಾನವೇ Constitution ಮಾತೃಸ್ಥಾನವಾಗಿದೆ (motherland)ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾ.ಪಂ, ಕಾರ್ಮಿಕ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು, ಯೋಜನೆಗಳು ಹಾಗೂ ಬಡತನ ನಿರ್ಮೂಲನೆ ಪರಿಣಾಮಕಾರಿ ಅನುಷ್ಠಾನದ ಕುರಿತು ಒಂದು ದಿನದ ತಾಲೂಕು ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ಇಲ್ಲದೇ ಇದ್ದರೆ ಸಮಾಜ ಹೇಗೆ ಇರುತ್ತೆ ಎಂದು ಉಹಿಸಿಕೊಳ್ಳಲು ಅಸಾಧ್ಯವಾಗಿದೆ. ಕಾರ್ಮಿಕರ ಹಿತಕ್ಕಾಗಿ ಸಾವಿರಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ನೀಡುವ ಜೊತೆ ವೇತನ ನೀಡಲು ಪ್ರತ್ಯೇಕ ಕಾಯ್ದೆಜಾರಿಗೊಳಿಸಲಾಗಿದೆ.ವೇತನದಲ್ಲಿ ತಾರತಮ್ಯ ನಿವಾರಿಸಲು ಕಾಯ್ದೆ ಜಾರಿಗೆ ತರಲಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂಬುದು ಸಂವಿಧಾನದಲ್ಲಿ ಅಡಕವಾಗಿದೆ ಆದು ಸಮರ್ಪಕವಾಗಿ ಜಾರಿಗೆ ತರದ ಕಾರಣ ಸುಪ್ರೀಂಕೋರ್ಟ್ನಲ್ಲಿ ರಿಟ್ ಹಾಕಿದ್ದರಿಂದ ಕಾಯ್ದೆ ಜಾರಿಗೆ ತರಲಾಗಿದೆ. ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆ0ದರು.Constitution
ಕಾರ್ಮಿಕರ ನೋಂದಣಿ ಕೆಲಸವಾಗಲಿ :
ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಮಾತನಾಡಿ ಯಾವುದೇ ರೀತಿಯ ಕಾರ್ಮಿಕ ಇರಲಿ ಅವರು ಮೊದಲು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಲೇಬರ್ ಕಾರ್ಡ ಪಡೆದುಕೊಳ್ಳಬೇಕು. ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದರೆ ಅಂತಹ ಕಾರ್ಮಿಕರಿಗೆ ಸರ್ಕಾರದಿಂದ ಪರಿಹಾರ ದೊರೆಯಲು ಕಷ್ಟಕರವಾಗುತ್ತಿದೆ. ಈಗಾಗಿ ಕಾರ್ಮಿಕ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕಾರ್ಮಿಕರನ್ನು ಕಚೇರಿ ಅಲೆದಾಡುವುದನ್ನು ತಪ್ಪಿಸಲು ಕಾರ್ಮಿಕರ ಮನೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೋಗಿ ಅವರನ್ನು ನೋಂದಣಿ ಮಾಡಿಕೊಂಡು ಕಾರ್ಮಿಕ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಶೀಘ್ರವೇ ಶಿಬಿರ ಆಯೋಜನೆ ಮಾಡುವಂತೆ ಹೇಳಿದರು.Constitution
ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಅಂಬಣ್ಣ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಗ್ರೇಡ್-೨ತಹಶೀಲ್ದಾರ ಬಸವರಾಜ ಝಳಕಿಮಠ, ಬಿಇಒ ಹುಂಬಣ್ಣ ರಾಠೋಡ್, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ, ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಇಸಿಒ ಬಸವರಾಜ ಸೇರಿದಂತೆ ಅನೇಕರಿದ್ದರು.
One thought on “Constitution :ಎಲ್ಲಾ ಕಾಯ್ದೆಗಳಿಗೆ ಸಂವಿಧಾನವೇ ಮಾತೃಸ್ಥಾನ”