suddiduniya.com

Corruption : ಅಮರೇಶ್ವರ ದೇವಸ್ಥಾನದಲ್ಲಿ ದಾಸೋಹದ ಹೆಸರಿನಲ್ಲಿ ಅವ್ಯವಹಾರ  

Corruption

ಲಿಂಗಸುಗೂರು: ಅಮರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರು ದಾಸೋಹಕ್ಕೆಂದು ನೀಡಿದ ಹಣವನ್ನು ವೈಯಿಕ್ತಕ ಖಾತೆಗೆ ಜಮಾಮಾಡಿಕೊಂಡು ಅವ್ಯವಹಾರದಲ್ಲಿ (Corruption) ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Corruption

ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಅಮರೇಶ್ವರ ದೇವಸ್ಥಾನದಲ್ಲಿ 1997ರ ಕಾಯ್ದೆ ಮತ್ತು ಅಧಿನಿಯಮ 2002 ಕಲಂ 69 ಬಿ ಪ್ರಕಾರ ಈ ದೇವಸ್ಥಾನದ ವ್ಯಾಪ್ತಿಯಲ್ಲಿ ಬರದ ಹಾಗೂ ತಾಲೂಕಿನವರಲ್ಲದವರು ಅನಧಿಕೃತವಾಗಿ ದಾಸೋಹ ನಡೆಸುತ್ತಿದ್ದಾರೆ. ಆದರೆ ಭಕ್ತರು ದಾಸೋಹಕ್ಕೆಂದು ಕಾಣಿಕೆ ರೂಪದಲ್ಲಿ ನೀಡಿದ ಹಣವನ್ನು ತಮ್ಮ ತಮ್ಮ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಭಕ್ತರು ನೀಡಿದ ಹಣದಲ್ಲಿ ಕೋಟ್ಯಾಂತರ ರೂಪಾಯಿಗಳ (Corruption) ಅವ್ಯವಹಾರವಾಗಿದ್ದು ಈ ಅವ್ಯವಹಾರದಲ್ಲಿ (Corruption) ಭಾಗಿಯಾದವರ ಮೇಲೆ ಧಾರ್ಮಿಕ ಧತ್ತಿ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ದೇವಸ್ಥಾನದ ವ್ಯಾಪ್ತಿಯಲ್ಲಿ ಸುಮಾರು 21 ಮಳಿಗೆಗಳಿದ್ದು ಈ ಮಳಿಗೆಗಳು ಪ್ರತಿ ವರ್ಷಕ್ಕೊಮ್ಮೆ ಹರಾಜು ಪ್ರಕ್ರೀಯೆ ಮಾಡಬೇಕು. ಆದರೆ 2007ರಲ್ಲಿ ಮಳಿಗೆಗಳ ಹರಾಜು ಆಗಿದ್ದು ನಂತರ ಇಲ್ಲಿವರಿಗೂ ಯಾವುದೇ ಹರಾಜು ಪ್ರಕ್ರೀಯೆ ನಡೆದಿಲ್ಲಾ, ಮಳಿಗೆಗಳ ಬಾಡಿಗೆದಾರರ ನೋಟಿಸ್‍ ಜಾರಿ ಮಾಡಿ 21 ಮಳಿಗೆಗಳ ಹರಾಜು ಮಾಡಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.

ಅಮರೇಶ್ವರ ಕ್ರಾಸ್‍ ನಿಂದ ಅಮರೇಶ್ವರ ಸುಕ್ಷೇತ್ರದವರಿಗೆ ಮಾಡಲಾದ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಈ ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಗುತ್ತಿಗೆ ಮೊಟಕುಗೊಳಿಸಬೇಕು ಮತ್ತು ಈ ಕಾಮಗಾರಿಯನ್ನು ಪುನಾಃ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮರೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧಿಕಾರಾವಧಿ 2021 ಜನೆವರಿಗೆ ಮುಗಿದು ಸುಮಾರು 3 ವರ್ಷಗಳು ಕಳೆದರೂ ಈ ವರಿಗೂ ದೇವಸ್ಥಾನಕ್ಕೆ ಹೊಸದಾಗಿ ವ್ಯವಸ್ಥಾಪಕ ಸಮಿತಿ ರಚನೆಯಾಗಿಲ್ಲ, ಶೀಘ್ರದಲ್ಲಿಯೇ ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಹೊಸದಾಗಿ ರಚನೆ ಮಾಡಬೇಕು ನಮ್ಮ ಕರ್ನಾಟಕ ಸೇನೆ ಮುಖಂಡರು ಒತ್ತಾಯಿಸಿದ್ದಾರೆ.

ಪುರಾಣ ಪ್ರಸಿದ್ಧವಾದ ಅಮರೇಶ್ವರ ಸುಕ್ಷೇತ್ರಕ್ಕೆ ಗುರುಗುಂಟಾ ಗ್ರಾಮದಿಂದ ಬಸ್ ಗಳ ಸೌಲಭ್ಯವೇ ಇಲ್ಲದಾಗಿದೆ. ಕಲಬುರ್ಗಿ, ಯಾದಗಿರ, ಬೀದರ ಭಾಗದಿಂದ ಬರುವ ಭಕ್ತರು ಗುರುಗುಂಟಾ ಗ್ರಾಮಕ್ಕೆ ಬಂದು ಆಟೋ ಅಥವಾ ಖಾಸಗಿ ವಾಹನಗಳ ಮೂಲಕ ದೇವಸ್ಥಾನಕ್ಕೆ ತೆರಳಬೇಕಾಗುತ್ತಿದೆ. ಇದರಿಂದ ಭಕ್ತರು ದೇವಸ್ಥಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಕಲುಬುರಗಿ ಮತ್ತು ಬೆಂಗಳೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಗಳನ್ನು ಅಮರೇಶ್ವರ ಸುಕ್ಷೇತ್ರಕ್ಕೆ ಹೋಗಿ ಬರುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಶಿವರಾಜ ನಾಯ್ಕ್, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಚಂದ್ರು ಹಿರೇಮಠ, ವೆಂಕಟೇಶ ಗುಡದನಾಳ, ಚಂದ್ರಕಾಂತ ಭೋವಿ, ದೇವೆಂದ್ರ ನಾಯಕ, ಶಿವರಾಜ ಅಲಬನೂರು, ಶಂಕರ ಚೌಹಾಣ್, ರುದ್ರಯ್ಯಸ್ವಾಮಿ, ರಮೇಶ ಭೋವಿ, ಮಹಾಂತಯ್ಯ ಸ್ವಾಮಿ,ರಾಜು ಪತ್ತಾರ, ಶಿವಲಿಂಗ ಪುರಿ, ಬಸವಲಿಂಗ ಯಲಗಲದಿನ್ನಿ, ರಾಘವೇಂದ್ರ ಖೈರವಾಡಗಿ, ವೆಂಕಟೇಶ ಗುತ್ತೇದಾರ, ಕೃಷ್ಣಾ ಭೋವಿ, ಲಕ್ಷ್ಮಣ ಭೋವಿ, ರಾಜು ನಾಯಕ, ವಿವೇಕಾನಂದ ನಾಯಕ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!