ತೂಕದಲ್ಲಿ ರೈತರಿಗೆ ಮೋಸ :
ಲಿಂಗಸುಗೂರು : ತಾಲೂಕಿನ ಹತ್ತಿ ಬೆಳಗಳಿಗೆ (cotton prices) ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲಾಗುವ0ತಾಗಿದೆ, ಕೂಡಲೇ ಬೆಂಬಲ ಬೆಲೆ ನೀಡಿ ಹತ್ತಿ ಖರೀದಿಸಲು ಕೇಂದ್ರಗಳನ್ನು ಸ್ಥಾಪನೆ ಮಾಡುವಂತೆ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಹೋರಾಟ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆಯಾದ್ಯಂತ ಹತ್ತಿ ಮಿಲ್‌ನಲ್ಲಿ ಹತ್ತಿಗೆ (cotton prices )ಸೂಕ್ತ ದರ ನೀಡುತ್ತಿಲ್ಲ, ಇದರಿಂದ ಸಾಲಸೋಲ ಮಾಡಿದ ಹತ್ತಿ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ 7800 ರೂಪಾಯಿ ದರ ನಿಗದಿ ಮಾಡಲಾಗಿದೆ. ಆದರೆ ಹತ್ತಿ ಗುಣಮಟ್ಟ ಸರಿಯಿಲ್ಲ, ಹತ್ತಿ ತೊಳೆಯು ಹಸಿಯಾಗಿದೆ, ನೆಲಕ್ಕೆ ಹಾಕಿದ ಮೇಲೆ ದರ ಕಡಿಮೆ ಅಂದರೆ ಪ್ರತಿ ಕ್ವಿಂಟಲ್‌ಗೆ 600 ರೂಪಾಯಿ ವರಿಗೂ ಕಡಿಮೆ ಮಾಡಿ ಬೇಕಾದರೆ ಕೊಡಿ ಇಲ್ಲವಾದಲ್ಲಿ ಹತ್ತಿ ವಾಪಸ್ಸು ತೆಗೆದುಕೊಂಡು ಹೋಗುವಂತೆ ವರ್ತಕರು ರೈತರು ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ.
ಬೆಂಬಲ ಬೆಲೆ ನೀಡಿ ಹತ್ತಿ ಖರೀದಿಸಿ :
ದೇವದುರ್ಗ ಮಿಲ್‌ಗಳು, ಸುರುಪುರ, ರಾಯಚೂರು ಎಪಿಎಂಸಿಯಲ್ಲಿ ಹತ್ತಿ ಬೆಳೆ ಖರೀದಿಸುವ ವರ್ತಕರು ರೈತರಿಗೆ ನಿರಂತರ ಮೋಸ ಮಾಡುತ್ತಿದ್ದಾರೆ. ಈಗಾಗಿ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಹತ್ತಿ ಬೆಳೆಗೆ ( cotton prices )ಬೆಂಬಲ ಬೆಲೆ ನೀಡಿ ಖರೀದಿಸಲು ಸರ್ಕಾರದಿಂದಲೇ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
2023ನೇ ಸಾಲಿನಲ್ಲಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಹಣ ಕಟ್ಟಿದ ರೈತರಿಗೆ ವಿಮಾ ಹಣ ಬಿಡುಗಡೆಗೊಳಿಸಬೇಕು, ಕೃಷಿ ಇಲಾಖೆಯಲ್ಲಿ ಶೇಂಗಾ ಭಿತ್ತನೆ ಬೀಜ ವಿತರಣೆ ಕೆಲಸ ತೀವೃಗತಿಯಲ್ಲಿ ನಡೆಯಬೇಕು. ಲಿಂಗಸುಗೂರು, ಮುದಗಲ್, ಹಟ್ಟಿ, ಮಸ್ಕಿ, ನಿಲೋಗಲ್, ಗುರುಗುಂಟಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವರ್ತಕರು 5 ಗ್ರಾಂ ಪ್ಲಾಸ್ಟಿಕ್ ಚೀಲಕ್ಕೆ 500 ಗ್ರಾಂ ತೂಕದಲ್ಲಿ ಕಡಿತ ಮಾಡುತ್ತಿದ್ದರು ಈ ಬಗ್ಗೆ ಪರಿಶೀಲಿಸಿ ವರ್ತಕರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು.
ತಾಲೂಕಿನ ಬಗರ್ ಹುಕಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ರಸಗೊಬ್ಬರದ ಅಂಗಡಿಗಳಲ್ಲಿ ಮಾಲಿಕರು ಹೇಳಿದ ದರಕ್ಕೆ ರಾಸಾಯಿನಿಕ ಕ್ರೀಮಿ ಕೀಟ ನಾಶಕಗಳನ್ನು ರೈತರು ಖರೀದಿ ಮಾಡಬೇಕಾಗಿದೆ, ಒಂದು ಕಂಪನಿ ಕ್ರೀಮಿನಾಶಕ ಕೇಳಿದರೆ ಮತ್ತೊಂದು ಕಂಪನಿ ಕ್ರೀಮಿನಾಶಕ ತೆಗೆದುಕೊಂಡು ಮಾತ್ರ ರೈತರು ಕೇಳಿದ ಕ್ರೀಮಿನಾಶಕ ನೀಡುತ್ತಿದ್ದು ಇದರಿಂದ ರೈತರಿಗೆ ಅನಗತ್ಯ ಹೊರೆಯಾಗಲಿದೆ ಈ ಕೂಡಲೇ ರೈತರು ಕೇಳಿದ ಪರಿಕರಗಳನ್ನು ನೀಡುವಂತೆ ರಸಗೊಬ್ಬರ ಅಂಗಡಿ ವರ್ತಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಯಲ್ಲಿ ಎಲ್‌ಸಿಯಾದ ವೇಳೆಯಲ್ಲಿ 7 ಗಂಟೆಗಳಲ್ಲಿ ವಿದ್ಯುತ್ ಕಡಿಗೊಳಿಸುತ್ತಿದ್ದಾರೆ ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡೂರು, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗೌಡನಭಾವಿ, ಚಂದಾವಲಿ ಸಾಬ, ಕುಪ್ಪಣ್ಣ ಗೋನಾವಾಟ್ಲ್, ಅಮರಣ್ಣ ಅರಳಳ್ಳಿ, ಮಲ್ಲಮ್ಮ ಹುನಕುಂಟಿ, ಕುಮಾರಸ್ವಾಮಿ, ಬಾಗನಗೌಡ ಹಾಲಭಾವಿ, ಹುಸೇನ್ ನಾಯಕ ಮುದಗಲ್, ಖಾಜಾಸಾಬ, ಕುಪ್ಪಣ್ಣ ಕಡ್ಡೋಣಿ ಸೇರಿದಂತೆ ಅನೇಕರಿದ್ದರು.
One thought on “cotton prices :ಹತ್ತಿ ಬೆಲೆ ಕುಸಿತ, ಖರೀದಿ ಕೇಂದ್ರ ತೆರೆಯಲು ರೈತರ ಹೋರಾಟ”